ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ : ಸೈನಾಗೆ ಮೊದಲ ಸುತ್ತಿನ ಆಘಾತ

Team Udayavani, Mar 13, 2020, 7:48 AM IST

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ : ಸೈನಾಗೆ ಮೊದಲ ಸುತ್ತಿನ ಆಘಾತ

ಬರ್ಮಿಂಗ್‌ಹ್ಯಾಮ್‌: ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೈನಾ ನೆಹ್ವಾಲ್‌ ಆಘಾತಕಾರಿ ಸೋಲುಂಡು ಹೊರಬಿದ್ದಿದ್ದಾರೆ. ಇದರೊಂದಿಗೆ ಅವರ ಟೋಕಿಯೊ ಒಲಿಂಪಿಕ್ಸ್‌ ಪ್ರವೇಶಕ್ಕೆ ಭಾರೀ ಹಿನ್ನಡೆಯಾಗಿದೆ.

ಬುಧವಾರ ರಾತ್ರಿಯ ಪಂದ್ಯದಲ್ಲಿ ಸೈನಾ ನೆಹ್ವಾಲ್‌ ಅವರನ್ನು ಜಪಾನಿನ ಅಕಾನೆ ಯಮಾಗುಚಿ ಕೇವಲ 28 ನಿಮಿಷಗಳಲ್ಲಿ 21-11, 21-8 ಅಂತರದಿಂದ ಹಿಮ್ಮೆಟ್ಟಿಸಿದರು. ಇದು ಯಮಾಗುಚಿ ವಿರುದ್ಧ ಆಡಿದ 11 ಪಂದ್ಯಗಳಲ್ಲಿ ಸೈನಾ ಅನುಭವಿಸಿದ 9ನೇ ಸೋಲು. ಸೈನಾ ಸೋಲಿನಿಂದಾಗಿ ಪಿ.ವಿ. ಸಿಂಧು ಈ ಕೂಟದ ವನಿತಾ ಸಿಂಗಲ್ಸ್‌ ನಲ್ಲಿ ಉಳಿದಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. ಅವರು ಅಮೆರಿಕದ ಬೀವಿನ್‌ ಜಾಂಗ್‌ ವಿರುದ್ಧ ಜಯ ಸಾಧಿಸಿ ದ್ವಿತೀಯ ಸುತ್ತು ತಲುಪಿದ್ದಾರೆ.

ಸದ್ಯ 46,267 ಅಂಕಗಳೊಂದಿಗೆ ಸೈನಾ ನೆಹ್ವಾಲ್‌ ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌ನಲ್ಲಿ 20ನೇ ಸ್ಥಾನ ದಲ್ಲಿದ್ದಾರೆ. ಅಗ್ರ 16 ರ್‍ಯಾಂಕಿಂಗ್‌ ಆಟಗಾರ್ತಿಯರಷ್ಟೇ ಒಲಿಂಪಿಕ್ಸ್‌ ಪ್ರವೇಶ ಪಡೆಯುತ್ತಾರೆ. ಇದಕ್ಕೆ ಎ. 28 ಅಂತಿಮ ದಿನವಾಗಿದೆ. ಅಷ್ಟರಲ್ಲಿ ಸ್ವಿಸ್‌ ಓಪನ್‌ (ಮಾ. 17-22), ಇಂಡಿಯಾ ಓಪನ್‌ (ಮಾ. 24-29) ಮತ್ತು ಮಲೇಶ್ಯ ಓಪನ್‌ (ಮಾ. 31-ಎ. 5) ಬ್ಯಾಡ್ಮಿಂಟನ್‌ ಪಂದ್ಯಾವಳಿಗಳು ನಡೆಯಲಿಕ್ಕಿವೆ. ಇಲ್ಲಿ ಸೈನಾ ಅಸಾಮಾನ್ಯ ಪ್ರದರ್ಶನ ನೀಡಿದರಷ್ಟೇ ಟೋಕಿಯೊ ಟಿಕೆಟ್‌ ಪಡೆಯಬಲ್ಲರು.

ಲಕ್ಷ್ಯ ಸೇನ್‌ ಮುನ್ನಡೆ
ಪುರುಷರ ಸಿಂಗಲ್ಸ್‌ನಲ್ಲಿ ಉಳಿದಿರುವ ಭಾರತದ ಏಕಮಾತ್ರ ಸ್ಪರ್ಧಿ ಲಕ್ಷ್ಯ ಸೇನ್‌. ಅವರು ಹಾಂಕಾಂಗ್‌ನ ಚೆಯುಕ್‌ ಯಿಯು ಲೀ ವಿರುದ್ಧ 17-21, 21-8, 21-17 ಅಂತರದ ಗೆಲುವು ಸಾಧಿಸಿ ದ್ವಿತೀಯ ಸುತ್ತು ತಲುಪಿದ್ದಾರೆ. ಸೇನ್‌ ಆವರ ದ್ವಿತೀಯ ಸುತ್ತಿನ ಎದುರಾಳಿ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌.
ಪುರುಷರ ವಿಭಾಗದ ಇತರ ಸ್ಪರ್ಧಿಗಳಲ್ಲಿ ಪಿ. ಕಶ್ಯಪ್‌ ಮೊದಲ ಸುತ್ತಿನ ಪಂದ್ಯದ ವೇಳೆ ಗಾಯಾಳಾಗಿ ನಿರ್ಗಮಿಸಿದರೆ, ಬಿ. ಸಾಯಿ ಪ್ರಣೀತ್‌ ಮೊದಲ ಸುತ್ತಿನಲ್ಲೇ ಎಡವಿದರು.

ಮಿಕ್ಸೆಡ್‌ ಡಬಲ್ಸ್‌ನಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ-ಎನ್‌. ಸಿಕ್ಕಿ ರೆಡ್ಡಿ ದ್ವಿತೀಯ ಸುತ್ತು ತಲುಪಿದ್ದಾರೆ. ಇವರ ಎದುರಾಳಿಯಾಗಿದ್ದ ಚೀನದ ಅಗ್ರ ಶ್ರೇಯಾಂಕದ ಸಿ ವೀ ಜೆಂಗ್‌-ಯಾ ಕ್ವಿಯೋಂಗ್‌ ಹುವಾಂಗ್‌ ಮೊದಲ ಸುತ್ತಿನ ಪಂದ್ಯದ ವೇಳೆ 4-5ರ ಹಿನ್ನಡೆಯಲ್ಲಿದ್ದಾಗ ಗಾಯಾಳಾಗಿ ಹೊರನಡೆದರು.

ಟಾಪ್ ನ್ಯೂಸ್

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

1-nazi

Provocative speech: ಬಿಜೆಪಿ ವಕ್ತಾರೆ ನಾಜಿಯಾ ಖಾನ್ ವಿರುದ್ಧ ದೂರು ದಾಖಲು

ಸರಕಾರದ ದುಡ್ಡಿನಲ್ಲಿ ಕಾಂಗ್ರೆಸ್‌ ಸಮಾವೇಶ: ಪ್ರಹ್ಲಾದ್‌ ಜೋಶಿ

Karnataka: ಸರಕಾರದ ದುಡ್ಡಿನಲ್ಲಿ ಕಾಂಗ್ರೆಸ್‌ ಸಮಾವೇಶ: ಪ್ರಹ್ಲಾದ್‌ ಜೋಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wl

ಅಖಿಲ ಭಾರತ ಅಂತರ್‌ ವಿ.ವಿ.ವೇಟ್‌ಲಿಫ್ಟಿಂಗ್‌:ಮಂಗಳೂರು ವಿವಿ ರನ್ನರ್ ಅಪ್‌

LSG: ಹೊಸ ಸೀಸನ್‌ ಗೆ ಹೊಸ ನಾಯಕನ ನೇಮಕ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್

LSG: ಹೊಸ ಸೀಸನ್‌ ಗೆ ಹೊಸ ನಾಯಕನ ನೇಮಕ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್

Who is Neeraj chopra’s wife Himani Mor

Himani Mor: ನೀರಜ್‌ ಚೋಪ್ರಾ ಕೈ ಹಿಡಿದ ಚಿನ್ನದ ಹುಡುಗಿ; ಯಾರು ಈ ಹಿಮಾನಿ ಮೊರ್‌?

1-gg

Champions Trophy; ಕೋಚ್‌ ಗಂಭೀರ್‌ ಆಯ್ಕೆ ಒಲವು ಬೇರೆಯಾಗಿತ್ತೇ?

1-nc

ದಾಂಪತ್ಯ ಜೀವನಕ್ಕೆ ನೀರಜ್‌ ಚೋಪ್ರಾ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.