ಭಾರತೀಯರಿಗೆ ಕಠಿನ ಸವಾಲು
Team Udayavani, Feb 13, 2019, 12:30 AM IST
ಹೊಸದಿಲ್ಲಿ: ಮಾರ್ಚ್ 6ರಿಂದ ಆರಂಭವಾಗಲಿರುವ “ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್’ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರರಿಗೆ ಕಠಿನ ಸವಾಲು ಎದುರಾಗಲಿದೆ. ಈ ಕೂಟದಲ್ಲಿ ಉತ್ತಮ ನಿರ್ವಹಣೆ ನೀಡುವ ಮೂಲಕ ಭಾರತವು ಬರ್ಮಿಂಗಂನಲ್ಲಿ 18 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸುವ ಯೋಜನೆಯಲ್ಲಿದೆ. ಆದರೆ ಈ ಹಾದಿಯಲ್ಲಿ ಭಾರತೀಯ ತಾರೆಯರು ಆರಂಭದಲ್ಲೇ ಕಠಿನ ಸ್ಪರ್ಧೆ ಎದುರಿಸಬೇಕಾದ ಅನಿವಾರ್ಯತೆ ಬಂದಿದೆ.
ವನಿತಾ ಸಿಂಗಲ್ಸ್ ವಿಭಾಗದಲ್ಲಿ 5ನೇ ಶ್ರೇಯಾಂಕಿತೆ ಪಿ. ವಿ. ಸಿಂಧು ದಕ್ಷಿಣ ಕೊರಿಯದ ಸಂಗ್ ಜಿ ಹ್ಯುನ್ ಅವರ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಸಿಂಧು ಕಳೆದ 2 ಪಂದ್ಯಗಳಲ್ಲಿ ಸಂಗ್ ಜೀ ಹ್ಯುನ್ ಅವರ ವಿರುದ್ಧ ಸೋತಿದ್ದಾರೆ. ಒಂದು ವೇಳೆ ಸಿಂಧು ಆರಂಭಿಕ ಅಡೆತಡೆಗಳಿಂದ ಹೊರ ಬಂದರೆ ಕ್ವಾರ್ಟರ್ ಫೈನಲ್ನಲ್ಲಿ 3ನೇ ಶ್ರೇಯಾಂಕಿತೆ ಚಿನ್ ಯುಫೆಯಿ ಅವರೊಂದಿಗೆ ಮುಖಾಮುಖಿಯಾಗುವ ಸಾಧ್ಯತೆಗಳಿವೆ. 8ನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಆರಂಭಿಕ ಪಂದ್ಯದಲ್ಲಿ ಸ್ಕಾಟ್ಲೆಂಡ್ನ ಕ್ರಿಸ್ಟಿ ಗಿಲ್ಮೋರ್ ಅವರನ್ನು ಎದುರಿಸಲಿದ್ದಾರೆ.
ಶ್ರೀಕಾಂತ್ಗೆ ಕಠಿನ ದಾರಿ
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಆಟಗಾರರೂ ಕೂಡ ಕಠಿನ ಸವಾಲು ಎದುರಿಸಲಿದ್ದಾರೆ. 7ನೇ ಶ್ರೇಯಾಂಕದ ಕೆ. ಶ್ರೀಕಾಂತ್ ಮೊದಲ ಪಂದ್ಯದಲ್ಲಿ ಫ್ರಾನ್ಸ್ನ ಬ್ರಿಸ್ ಲೆವೆರ್ಡ್ಜ್ ಅವರನ್ನು ಎದುರಿಸಲಿದ್ದರೆ, ಭಾರತದವರೇ ಆಗಿರುವ ಎಚ್. ಎಸ್. ಪ್ರಣಯ್-ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ. ಸಮೀರ್ ವರ್ಮ ಡೆನ್ಮಾರ್ಕ್ನ ವಿಕ್ಟರ್ ಎಕ್ಸಲ್ಸೆನ್ ಅವರ ವಿರುದ್ಧ ಆಡಲಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ-ಸುಮೀತ್ ರೆಡ್ಡಿ, ವನಿತಾ ಡಬಲ್ಸ್ನಲ್ಲಿ ಅಶ್ವಿನ್ ಪೊನ್ನಪ್ಪ- ಎನ್. ಸಿಕ್ಕಿ ರೆಡ್ಡಿ, ಮೇಘನಾ ಜಕ್ಕಂಪು ಡಿ-ಪೂರ್ವಿಶಾ ಎಸ್. ರಾಮ್ ಹಾಗೂ ಮಿಕ್ಸೆಡ್ ಡಬಲ್ಸ್ನಲ್ಲಿ ಪ್ರಣಮ್ ಜೆರ್ರಿ ಜೋಪ್ರಾ- ಎನ್. ಸಿಕ್ಕಿ ರೆಡ್ಡಿ ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.