ಮಂಗಳೂರು ವಿ.ವಿ.ಗೆ ಸತತ 6ನೇ ಪ್ರಶಸ್ತಿ
ಅಖೀಲ ಭಾರತ ಅಂತರ್ ವಿ.ವಿ. ಬಾಲ್‌ಬ್ಯಾಡ್ಮಿಂಟನ್
Team Udayavani, Jan 13, 2020, 12:58 AM IST
ಮಂಗಳೂರು: ವಿಶಾಖಪಟ್ಟಣದ ಆಂಧ್ರ ವಿ.ವಿ. ಆಶ್ರಯದಲ್ಲಿ ನಡೆದ ಅಖೀಲ ಭಾರತ ಅಂತರ್ ವಿ.ವಿ. ಮಹಿಳಾ ಬಾಲ್‌ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಮಂಗಳೂರು ವಿ.ವಿ. ಸತತ 6ನೇ ಬಾರಿಗೆ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.
80 ವಿ.ವಿ.ಗಳ ತಂಡಗಳಿರುವ ಈ ಪಂದ್ಯಾಟದಲ್ಲಿ ಹಾಲಿ ಚಾಂಪಿಯನ್ ಮಂಗಳೂರು ವಿ.ವಿ. ಕ್ವಾರ್ಟರ್ ಫೈನಲಿಗೆ ನೇರ ಪ್ರವೇಶ ಪಡೆದಿತ್ತು. ಇಲ್ಲಿ ಮಧುರೈ ಕಾಮರಾಜ ವಿ.ವಿ.ಯನ್ನು ನೇರ ಗೇಮ್‌ಗಳಿಂದ ಸೋಲಿಸಿ ಸತತ 17ನೇ ಬಾರಿ ಸೆಮಿ ಲೀಗ್ ಹಂತಕ್ಕೇರಿ ದಾಖಲೆ ಮಾಡಿತು.
ನಾಕೌಟ್ ಲೀಗ್ ಹಂತದ ಮೊದಲೆರಡು ಪಂದ್ಯಗಳಲ್ಲಿ ಮಂಗಳೂರು ವಿ.ವಿ. ತಂಡ ಕೊಯಮತ್ತೂರಿನ ಭಾರತೀಯರ್ ವಿ.ವಿ. ಮತ್ತು ಆತಿಥೇಯ ವಿಶಾಖಪಟ್ಟಣದ ಆಂಧ್ರ ವಿ.ವಿ. ತಂಡವನ್ನು ಸೋಲಿಸಿತು. ನಿರ್ಣಾ ಯಕ ಲೀಗ್ ಪಂದ್ಯದಲ್ಲಿ ಚೆನ್ನೈಯ ಅಣ್ಣಾ ವಿ.ವಿ. ತಂಡವನ್ನು 3 ಗೇಮ್‌ಗಳ ಕಠಿನ ಹೋರಾಟದಲ್ಲಿ ಪರಾಭವಗೊಳಿಸಿ ಪ್ರಶಸ್ತಿ ಜಯಿಸಿತು. ಮಂಗಳೂರು ವಿ.ವಿ. ಒಟ್ಟು 10ನೇ ಬಾರಿ ಅಖೀಲ ಭಾರತ ಅಂತರ್ ವಿ.ವಿ. ಮಟ್ಟದ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.
ಮಂಗಳೂರು ವಿ.ವಿ. ತಂಡದ ನಾಯಕಿ ಲಾವಣ್ಯಾ ಗಮನಾರ್ಹ ನಿರ್ವಹಣೆ ನೀಡಿದರು. ಚಂದನಾ, ಕವನಾ, ಪಲ್ಲವಿ, ತೇಜಶ್ರೀ, ಗಾಯತ್ರಿ, ಜಯಲಕ್ಷ್ಮೀ, ದಿವ್ಯಾ, ಮೇಘನಾ ಮತ್ತು ಸ್ನೇಹಾ ತಂಡದ ಇತರ ಆಟಗಾರ್ತಿಯರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.