ಅಶಿಸ್ತಿನ ರಾಯುಡುಗೆ 2 ಪಂದ್ಯ ನಿಷೇಧ
Team Udayavani, Feb 1, 2018, 6:30 AM IST
ಹೊಸದಿಲ್ಲಿ: ಕರ್ನಾಟಕ ವಿರುದ್ಧದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದ ವೇಳೆ ಅಂಪಾಯರ್‌ಗಳೊಂದಿಗೆ ಅಸಭ್ಯವಾಗಿ ವರ್ತಿಸಿದ ಹೈದರಾಬಾದ್ ತಂಡದ ನಾಯಕ ಅಂಬಾಟಿ ರಾಯುಡು ಅವರಿಗೆ ಬಿಸಿಸಿಐ 2 ಪಂದ್ಯಗಳ ನಿಷೇಧ ಹೇರಿದೆ.
ಈ ಪಂದ್ಯದ ವೇಳೆ ರಾಯುಡು ಬೌಂಡರಿ ವಿಚಾರಕ್ಕೆ ಸಂಬಂಧಿಸಿದಂತೆ ಅಂಪಾಯರ್ ಹಾಗೂ ಎದುರಾಳಿ ನಾಯಕ ವಿನಯ್ ಕುಮಾರ್ ಜತೆ ವಾದಕ್ಕಿಳಿದಿದ್ದರು. ಮೈದಾನದ ಅಂಪಾಯರ್‌ಗಳಾದ ಅಭಿಜಿತ್ ದೇಶ್‌ಮುಖ್, ಉಲ್ಲಾಸ್ ವಿಠuಲರಾವ್ ಗಂಧೆ ಹಾಗೂ ತೃತೀಯ ಅಂಪಾಯರ್ ಅನಿಲ್ ದಾಂಡೇಕರ್ ಸಲ್ಲಿಸಿದ ವರದಿಯನ್ನಾಧರಿಸಿ ಬಿಸಿಸಿಐ ಕಠಿನ ಕ್ರಮಕ್ಕೆ ಮುಂದಾಗಿದೆ. ಈ ಸಂದರ್ಭದಲ್ಲಿ ರಾಯುಡು ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯ ಕಂಡುಬರಲಿಲ್ಲ ಎಂದು ಬಿಸಿಸಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಇದರಿಂದ ಮುಂಬರುವ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಮೊದಲೆರಡು ಪಂದ್ಯಗಳಿಂದ ರಾಯುಡು ಹೊರಗುಳಿಯಲಿದ್ದಾರೆ.
ಅಂದೇನು ಸಂಭವಿಸಿತ್ತು?
ಕರ್ನಾಟಕದ ಇನ್ನಿಂಗ್ಸ್ ವೇಳೆ ಮೊಹಮ್ಮದ್ ಸಿರಾಜ್ ಎಸೆತವೊಂದನ್ನು ಕರುಣ್ ನಾಯರ್ ಫ್ಲಿಕ್ ಮಾಡಿದಾಗ ಚೆಂಡು ಮಿಡ್ ವಿಕೆಟ್ ಮೂಲಕ ಬೌಂಡರಿ ರೇಖೆಯತ್ತ ಧಾವಿಸಿತ್ತು. ಅಲ್ಲಿ ಮೆಹದಿ ಹಸನ್ ಚೆಂಡನ್ನು ತಡೆದಿದ್ದರು. ಇದರಿಂದ ನಾಯರ್‌ಗೆ 2 ರನ್ ಲಭಿಸಿತ್ತು. ಕರ್ನಾಟಕ 5ಕ್ಕೆ 203 ರನ್ ಪೇರಿಸಿ ಇನ್ನಿಂಗ್ಸ್ ಮುಗಿಸಿತು.
ಆದರೆ ವೀಡಿಯೋ ದೃಶ್ಯಾವಳಿಯನ್ನು ಅವಲೋಕಿಸುವಾಗ, ಚೆಂಡನ್ನು ತಡೆಯುವಾಗ ಮೆಹಿಹಸನ್ ಕಾಲು ಬೌಂಡರಿ ಗೆರೆಗೆ ತಾಗಿದ್ದು ಕಂಡುಬಂತು. ಇದನ್ನು ವಿನಯ್ ಕುಮಾರ್ ಅಂಪಾಯರ್ ಗಂಧೆ ಗಮನಕ್ಕೆ ತಂದರು. ಅವರು ಹೆಚ್ಚುವರಿ 2 ರನ್ ನೀಡಿದರು. ಇದನ್ನು ಪ್ರಶ್ನಿಸುವ ವೇಳೆ ರಾಯುಡು ತೀರಾ ಅಶಿಸ್ತಿನಿಂದ ವರ್ತಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.