![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 3, 2022, 7:57 PM IST
ಬೆಂಗಳೂರು : ಒಲಂಪಿಕ್ ಕ್ರೀಡೆಯಲ್ಲಿ ಭಾರತ ಮೊದಲ ಐದನೇ ಸ್ಥಾನದ ಒಳಗೆ ಬರಬೇಕು ಎಂಬ ಆಶಯ ನಮ್ಮದು, ಒಲಂಪಿಕ್ ಕ್ರೀಡೆಯಲ್ಲಿ ಭಾಗಿಯಾಗಿ ಚಿನ್ನ ಗೆದ್ದು ಬನ್ನಿ. ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ರೀಡಾಪಟುಗಳನ್ನು ಹುರಿದುಂಬಿಸಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ಖೇಲೋ ಇಂಡಿಯಾ 2021 ರ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಎರಡನೇ ಖೇಲೋ ಇಂಡಿಯಾ ಕಾರ್ಯಕ್ರಮದಲ್ಲಿ ಮೂರು ಸಾವಿರ ಕ್ರೀಡಾಪಟುಗಳು ಭಾಗಿಯಾಗಿದ್ದಾರೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಕಾರ್ಯಕ್ರಮಕ್ಕೆ ಇಷ್ಟು ಜನ ಕ್ರೀಡಾಪಟುಗಳು ಆಗಮಿಸಿರುವುದು ಸಂತಸದ ವಿಚಾರ ಅಲ್ಲದೆ ಒಲಿಂಪಿಕ್ ನಲ್ಲಿ ಭಾರತದ ಕ್ರೀಡಾಪಟುಗಳ ಕೊರತೆ ಇದೆ. ಕ್ರಿಕೆಟ್ ಒಂದನ್ನು ಬಿಟ್ಟು ಉಳಿದೆಲ್ಲಾ ಕ್ರೀಡೆಯಲ್ಲಿ ಕ್ರೀಡಾಪಟುಗಳ ಕೊರತೆ ಕಾಣುತ್ತಿತ್ತು ಆದರೆ ಇನ್ನು ಮುಂದೆ ಈ ರೀತಿ ಆಗಬಾರದು ಒಲಿಂಪಿಕ್ ಸೇರಿದಂತೆ ಎಲ್ಲಾ ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಭಾಗಿಯಾಗಬೇಕು. ಎಲ್ಲಾ ಕ್ರೀಡೆಗಳಲ್ಲಿ ಭಾಗಿಯಾಗೋ ಮೂಲಕ ಭಾರತದ ಹೆಸರನ್ನು ಉತ್ತುಂಗಕ್ಕೆ ಏರಿಸಬೇಕು ಎಂದು ಹೇಳಿದರು.
ಜೀವನದಲ್ಲಿ ಯಾರು ಸಫಲರಾಗಿಲ್ಲವೋ ಅವರು ಕ್ರೀಡೆಯ ಮೂಲಕ ಸಫಲರಾಗಿದ್ದಾರೆ. ಈಗ ಎಲ್ಲರಿಗೂ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗಿಯಾಗಿ ಗೆಲುವು ಸಾಧಿಸುವ ಕ್ಷಣ ಎದುರಾಗಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿ, ಉತ್ತಮ ಕ್ರೀಡೆಗಳನ್ನು ನೋಡಿ ಎಂದರು.
ಇದನ್ನೂ ಓದಿ : ಖೇಲೋ ಇಂಡಿಯಾ ಪ್ರಧಾನಿ ಮೋದಿ ಅವರ ಕನಸು : ಅನುರಾಗ್ ಠಾಕೂರ್
75ನೇ ವರ್ಷದ ಆಜಾದ್ ಕಿ ಅಮೃತ ಮಹೋತ್ಸವ ದಿನದಲ್ಲಿ. ಒಲಿಂಪಿಕ್ ಕ್ರೀಡೆಯಲ್ಲಿ ಭಾರತದ ಸ್ಥಾನ 5ನೇ ಸ್ಥಾನದ ಒಳಗೆ ಬರಬೇಕು ಅನ್ನೋ ಆಶಯ ಇದೆ ಅದೆಲ್ಲವನ್ನು ನೀವು ಈಡೇರಿಸುತ್ತೀರಿ ಎನ್ನುವ ನಂಬಿಕೆ ಇದೆ ಎಂದರು.
ಒಡಿಸ್ಸಾದಲ್ಲಿ ಮೊದಲ ಬಾರಿಗೆ ಖೇಲೋ ಇಂಡಿಯಾ ನಡೆದಾಗ 118 ವಿವಿಗಳು ಮಾತ್ರ ಭಾಗಿಯಾಗಿದ್ದವು. ಆದರೆ ಇಂದು 208 ವಿವಿಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ ಎಂದರು.
ಯೋಗ ಮತ್ತು ಮಲ್ಲಕಂಬವನ್ನು ಕೂಡ ಕ್ರೀಡೆಗೆ ಸೇರಿಸಲಾಗಿದೆ. ಅಲ್ಲದೆ ಗ್ರಾಮೀಣ ಆಟವನ್ನೂ ಕ್ರೀಡೆಗೆ ಸೇರಿಸಿ, ವಿಶ್ವದ ಗಮನ ಸೆಳೆದಿದ್ದೇವೆ.
ಕ್ರೀಡಾಕೊಟದಲ್ಲಿ ಗೆದ್ದ ಜೈನ್ ವಿವಿಗೆ ಅಭಿನಂದನೆ ಸಲ್ಲಿಸಿದ ಸಚಿವರು ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನ ಹೊಂದಿರೋ ದೇಶ ನಮ್ಮದು.
ಇದೇ ರೀತಿಯ ಕ್ರೀಡೆಗಳ ಮೂಲಕ, ಆಟಡ ಮೂಲಕ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿ ಗೆಲ್ಲಲು ಸಾಧ್ಯ, ನಾನು ಚಿಕ್ಕವನಾಗಿದ್ದಾಗ ಗುರೂಜಿಯವರು ಒಂದು ಮಾತು ಹೇಳಿದ್ದರು ‘ಕಷ್ಟ ಪಟ್ಟವನಿಗೆ ಸುಖ ಸಿಗಲಿದೆ ಅಂತ. ಸೋಲು ಅನ್ನೋದನ್ನ ತಳ್ಳಿ, ಗೆಲ್ಲುವತ್ತ ಮನಸು ಮಾಡಬೇಕು ಎಂದು ಕ್ರೀಡಾಳುಗಳನ್ನು ಹುರಿದುಂಬಿಸಿದರು.
ಕರ್ನಾಟಕ ಸರ್ಕಾರ 75ಜನ ಕ್ರೀಡಾಪಟುಗಳನ್ನ ದತ್ತು ತೆಗೆದುಕೊಂಡಿದೆ. ಎಲ್ಲಾ ರಾಜ್ಯ ಸರ್ಕಾರಗಳು ಕೂಡ ದತ್ತು ತೆಗೆದುಕೊಂಡು ಕ್ರೀಡೆಗೆ ಪ್ರೋತ್ಸಾಹ ನೀಡಬೇಕು. ಭಾರತ ಮುಂದೆ ಒಲಿಂಪಿಕ್ ನಲ್ಲಿ ದೊಡ್ಡ ಸಾಧನೆ ಮಾಡಲಿದೆ, ಗೆಲುವು ಸಾಧಿಸೋ ಮೂಲಕ ಉನ್ನತ ಸ್ಥಾನಕ್ಕೆ ಹೋಗಲಿದೆ. ಬೆವರು ಹರಿಸೋ ಮೂಲಕ ಎಲ್ಲರೂ ಕ್ರೀಡೆಯಲ್ಲಿ ಭಾಗಿಯಾಗಿದ್ದಾರೆ. ಒಲಿಂಪಿಕ್ ನಲ್ಲಿ ಭಾಗಿಯಾಗಿ ಚಿನ್ನ ಗೆದ್ದು ಬನ್ನಿ ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.