Team India; ಭಾರತದ ಮಹಿಳಾ ಕೋಚ್ ಅಗಿ ಅಮೋಲ್ ಮಜುಮ್ದಾರ್ ನೇಮಕ
Team Udayavani, Oct 26, 2023, 11:16 AM IST
ನವದೆಹಲಿ: ಮುಂಬೈ ರಣಜಿ ತಂಡದ ಮಾಜಿ ನಾಯಕ ಅಮೋಲ್ ಮಜುಮ್ದಾರ್, ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.
ಬಹಳ ಹಿಂದೆಯೇ ಅವರ ಆಯ್ಕೆ ಖಚಿತವಾಗಿದ್ದರೂ, ನೇಮಕಾತಿ ಮಾತ್ರ ನಿಧಾನವಾಗಿ ನಡೆದಿದೆ. ಬಂದಿದ್ದ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರ, ಜತಿನ್ ಪರಾಂಜಪೆಯವರಿದ್ದ ಕ್ರಿಕೆಟ್ ಸಲಹಾ ಸಮಿತಿಯು ಮಜುಮ್ದಾರ್ ಹೆಸರನ್ನು ಅಂತಿಮಗೊಳಿಸಿದೆ.
ಈ ಹಿಂದೆ ಮುಂಬೈನ ರಮೇಶ್ ಪೊವಾರ್ ಕೋಚ್ ಆಗಿದ್ದರು. ಅವರಿಗೂ ಮಿಥಾಲಿ ರಾಜ್‌ಗೂ ತಕರಾರು ಬಂದ ನಂತರ, ಪೊವಾರ್ ಹೊರಬಿದ್ದರು. ಮತ್ತೂಮ್ಮೆ ಅವರೇ ಆ ಸ್ಥಾನಕ್ಕೆ ಬಂದರೂ, ಅವರನ್ನು ಬೆಂಗಳೂರಿನ ಎನ್‌ಸಿಎಗೆ ಸ್ಥಳಾಂತರ ಮಾಡಲಾಯಿತು. ಅವರ ಜಾಗದಲ್ಲಿ ತಾತ್ಕಾಲಿಕವಾಗಿ ಹೃಷೀಕೇಶ್ ಕಾನಿಟ್ಕರ್ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಕಾನಿಟ್ಕರ್ ಎನ್‌ಸಿಎ ಸಿಬ್ಬಂದಿಯೂ ಹೌದು. ಈಗ ಹೊಣೆಗಾರಿಕೆ ಮಜುಮ್ದಾರ್ ಹೆಗಲಿಗೇರಿದೆ.
ಮಜುಮ್ದಾರ್ 21 ವರ್ಷ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ಈ ವೇಳೆ 171 ಪಂದ್ಯಗಳನ್ನಾಡಿ 11,000 ರನ್ ಬಾರಿಸಿದ್ದಾರೆ. ಅದರಲ್ಲಿ 30 ಶತಕಗಳು ಸೇರಿವೆ. 100 ದೇಶೀಯ ಏಕದಿನದಲ್ಲಿ, 14 ಟಿ20ಗಳಲ್ಲಿ ಆಡಿದ್ದಾರೆ. ದೇಶೀಯ ಕ್ರಿಕೆಟ್ ನ ಅದ್ಭುತ ಆಟಗಾರರಲ್ಲಿ ಅವರೂ ಒಬ್ಬರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.