ಬ್ರಿಸ್ಬೇನ್ ಓಪನ್ ಟೆನಿಸ್ ಮೊದಲ ಸುತ್ತಲ್ಲೇ ಸೋತ ಸ್ಟೋಸರ್
Team Udayavani, Jan 1, 2018, 6:50 AM IST
ಬ್ರಿಸ್ಬೇನ್: ಬ್ರಿಸ್ಬೇನ್ ಇಂಟರ್ನ್ಯಾಶನಲ್ ಟೆನಿಸ್ ಪಂದ್ಯಾವಳಿಯಲ್ಲಿ ಆತಿಥೇಯ ನಾಡಿನ ಸಮಂತಾ ಸ್ಟೋಸರ್ ಮೊದಲ ಸುತ್ತಿನಲ್ಲೇ ಸೋತು ಆಸ್ಟ್ರೇಲಿಯದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ರವಿವಾರದ ಪಂದ್ಯದಲ್ಲಿ ಅವರು ಲಾತ್ವಿಯಾದ 7ನೇ ಶ್ರೇಯಾಂಕಿತೆ ಅನಸ್ತಾಸಿಜಾ ಸೆವಸ್ತೋವಾಗೆ 1-6, 3-6 ಅಂತರದಿಂದ ಶರಣಾದರು.
ಮಾಜಿ ಯುಎಸ್ ಓಪನ್ ಚಾಂಪಿಯನ್, ಫ್ರೆಂಚ್ ಓಪನ್ ಫೈನಲಿಸ್ಟ್ ಕೂಡ ಆಗಿರುವ ಸಮಂತಾ ಸ್ಟೋಸರ್ ಮೊದಲ ಸೆಟ್ನಲ್ಲಿ ತೀವ್ರ ನಿರಾಸೆಯ ಪ್ರದರ್ಶನ ನೀಡಿ ಕಳಪೆ ಫಾರ್ಮ್ಗೆ ಸಾಕ್ಷಿಯಾದರು. ದ್ವಿತೀಯ ಸೆಟ್ನಲ್ಲಿ ಸ್ವಲ್ಪಮಟ್ಟಿಗೆ ಪ್ರತಿರೋಧ ತೋರಿದರೂ ಸೆವಸ್ತೋವಾ ಆಟಕ್ಕೆ ಸಾಟಿಯಾಗಲಿಲ್ಲ.
ಗಾಯಾಳಾದ ಗಾರ್ಸಿಯಾ
ವಿಶ್ವದ 8ನೇ ಶ್ರೇಯಾಂಕದ ಫ್ರಾನ್ಸ್ ಆಟಗಾರ್ತಿ ಕ್ಯಾರೋಲಿನಾ ಗಾರ್ಸಿಯಾಗೂ ಇದು ಅದೃಷ್ಟದ ದಿನವಾಗಿರಲಿಲ್ಲ. ಗಾಯಾಳಾದ ಅವರು ಮೊದಲ ಸೆಟ್ ಬಳಿಕ ಪಂದ್ಯಾವಳಿಯಿಂದ ಹಿಂದೆ ಸರಿದರು. ಹೀಗಾಗಿ ಎದುರಾಳಿ ಅಲಿಜ್ ಕಾರ್ನೆಟ್ ದ್ವಿತೀಯ ಸುತ್ತಿಗೆ ಮುನ್ನಡೆದರು. ಆದರೆ ಮೊದಲ ಸೆಟ್ 6-3ರಿಂದ ಗಾರ್ಸಿಯಾ ಪಾಲಾಗಿತ್ತು. ಕಾರ್ನೆಟ್ ಅವರಿನ್ನು ಕ್ರೊವೇಶಿಯಾದ ಮಿರ್ಜಾನಾ ಲುಸಿಕ್ ಬರೋನಿ ವಿರುದ್ಧ ಆಡಲಿದ್ದಾರೆ. ದಿನದ ಇನ್ನೊಂದು ಪಂದ್ಯದಲ್ಲಿ ಬರೋನಿ 6-4, 4-6, 6-0 ಅಂತರದಿಂದ ಜರ್ಮನಿಯ ತಜಾನಾ ಮರಿಯಾ ಅವರನ್ನು ಪರಾಭವಗೊಳಿಸಿದರು.
ಸರ್ಬಿಯಾದ ಅಲೆಕ್ಸಾಂಡ್ರಾ ಕ್ರುನಿಕ್ ಜರ್ಮನಿಯ ಕರಿನಾ ವಿತಾಫ್ ಅವರನ್ನು ಭಾರೀ ಹೋರಾಟದ ಬಳಿಕ 7-5, 7-6 (2) ಅಂತರದಿಂದ ಸೋಲಿಸಿದರು. ಕ್ರುನಿಕ್ ಅವರ ದ್ವಿತೀಯ ಸುತ್ತಿನ ಎದುರಾಳಿ ಸ್ಪೇನಿನ ಅಗ್ರ ಶ್ರೇಯಾಂಕಿತ ಆಟಗಾರ್ತಿ ಗಾರ್ಬಿನ್ ಮುಗುರುಜಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.