IPL 2024: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಕೆಕೆಆರ್ ಬ್ಯಾಟರ್ ಬಿಗ್ ಹಿಟ್ಟರ್ ರಸ್ಸೆಲ್
Team Udayavani, Apr 4, 2024, 1:14 PM IST
ವಿಶಾಖಪಟ್ಟಣಂ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬಿಗ್ ಹಿಟ್ಟರ್ ಆಂದ್ರೆ ರಸ್ಸೆಲ್ ಅವರು ಈ ಬಾರಿಯ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟುವ ಮೂಲಕ ಬೌಲರ್ ಗಳನ್ನು ಹೈರಾಣಾಗಿಸುವ ರನ್ ಗಳಿಸುತ್ತಿದ್ದಾರೆ.
ವಿಶಾಖಪಟ್ಟಣಂನಲ್ಲಿ ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ರಸ್ಸೆಲ್ ಕೇವಲ 19 ಎಸೆತಗಳಲ್ಲಿ 41 ರನ್ ಗಳಿಸಿದರು. ಅವರು ಮೂರು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಬಾರಿಸಿದರು.
ಇದೇ ಪಂದ್ಯದಲ್ಲಿ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಅಳಿಸಿ ಹಾಕಿದ್ದಾರೆ. ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ಅವರನ್ನು ರಸೆಲ್ ದಾಟಿದ್ದಾರೆ.
ತನ್ನ ಐಪಿಎಲ್ ವೃತ್ತಿಜೀವನದಲ್ಲಿ 115 ಪಂದ್ಯಗಳನ್ನು ಆಡಿರುವ ರಸೆಲ್ 29.96 ರ ಸರಾಸರಿಯಲ್ಲಿ 2,367 ರನ್ ಗಳಿಸಿದ್ದಾರೆ. 176.11 ರ ಗಮನಾರ್ಹ ಸ್ಟ್ರೈಕ್ ರೇಟ್‌ನೊಂದಿಗೆ ರನ್ ಗಳಿಸಿರುವ ರಸೆಲ್ 11 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಅಜೇಯ 88 ಆಗಿದೆ. ಅವರು ಪ್ರಸ್ತುತ ಐಪಿಎಲ್ ನ ಸಾರ್ವಕಾಲಿಕ ರನ್ ಗಳಿಸುವವರ ಪಟ್ಟಿಯಲ್ಲಿ 44 ನೇ ಸ್ಥಾನವನ್ನು ಹೊಂದಿದ್ದಾರೆ.
2008 ರಿಂದ 2013 ರವರೆಗೆ ಮುಂಬೈ ಇಂಡಿಯನ್ಸ್ ಗಾಗಿ 78 ಐಪಿಎಲ್ ಪಂದ್ಯಗಳನ್ನು ಆಡಿರುವ ಸಚಿನ್ ತೆಂಡೂಲ್ಕರ್, 34.83 ರ ಸರಾಸರಿಯಲ್ಲಿ 2,334 ರನ್ ಗಳಿಸಿದ್ದರು. ತೆಂಡೂಲ್ಕರ್ ಅವರ ಐಪಿಎಲ್ ಪ್ರಯಾಣವು ಒಂದು ಶತಕ ಮತ್ತು 13 ಅರ್ಧಶತಕಗಳನ್ನು ಒಳಗೊಂಡಿತ್ತು. ಅವರು 2010 ರಲ್ಲಿ ಒಂದು ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಆರೆಂಜ್ ಕ್ಯಾಪ್ ಪಡೆದಿದ್ದರು. ಆ ಸೀಸನ್ ನಲ್ಲಿ 15 ಪಂದ್ಯಗಳಲ್ಲಿ 47.53 ಸರಾಸರಿಯಲ್ಲಿ 132 ಸ್ಟ್ರೈಕ್ ರೇಟ್ ನೊಂದಿಗೆ 618 ರನ್ ಗಳನ್ನು ಗಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.