IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್
Team Udayavani, May 5, 2024, 9:13 AM IST
ಬೆಂಗಳೂರು: ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಮತ್ತು ಮಾಜಿ ಆಟಗಾರ ಸುನೀಲ್ ಗಾವಸ್ಕರ್ ನಡುವಿನ ಮಾತಿನ ಚಕಮಕಿ ಮುಂದುವರಿದಿದೆ. ಕೆಲ ದಿನಗಳ ಹಿಂದೆ ‘ಬಾಕ್ಸ್ ನಲ್ಲಿ ಕುಳಿತು ಮಾತನಾಡುವವರಿಗೆ ಏನು ಗೊತ್ತು’ ಎಂಬ ವಿರಾಟ್ ಹೇಳಿಕೆಗೆ ಸುನೀಲ್ ಗಾವಸ್ಕರ್ ಗರಂ ಆಗಿದ್ದು, ಕಟು ಮಾತುಗಳಲ್ಲಿ ವಿರಾಟ್ ಕೊಹ್ಲಿಯನ್ನು ಟೀಕೆ ಮಾಡಿದ್ದಾರೆ.
ಅಹಮದಾಬಾದ್ ನಲ್ಲಿ ನಡೆದ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅವರು ತನ್ನ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡುವವರ ವಿರುದ್ಧ ಮಾತನಾಡಿದ್ದರು. “ಸ್ಟ್ರೈಕ್-ರೇಟ್ ಗಳ ಬಗ್ಗೆ ಮತ್ತು ನಾನು ಸ್ಪಿನ್ ಚೆನ್ನಾಗಿ ಆಡುತ್ತಿಲ್ಲ ಎನ್ನುವ ಬಗ್ಗೆ ಜನರು ಮಾತನಾಡುತ್ತಾರೆ. ಆದರೆ ನನಗೆ, ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲುವುದು ಮುಖ್ಯ. 15 ವರ್ಷಗಳಿಂದ ಇದನ್ನೇ ಮಾಡುತ್ತಿದ್ದೇನೆ. ನೀವು ಈ ಪರಿಸ್ಥಿಯಿಲ್ಲಿ ಇರದಿದ್ದರೆ ನೀವು ಬಾಕ್ಸ್ ನಲ್ಲಿ ಕುಳಿತು ಮಾತನಾಡಲು ಆಗದು. ಜನರು ಕುಳಿತು ಅವರ ಅಂದಾಜಿನಲ್ಲಿ ಮಾತನಾಡುತ್ತಾರೆ. ಆದರೆ ಪ್ರತಿದಿನ ಮೈದನಾದಲ್ಲಿ ಆಡುತ್ತಿರುವವರಿಗೆ ಮಾತ್ರ ಇಲ್ಲಿ ಏನಾಗುತ್ತಿದೆ ಎನ್ನುವುದು ಗೊತ್ತಿದೆ” ಎಂದು ಹೇಳಿದ್ದರು.
ಸುನಿಲ್ ಗಾವಸ್ಕರ್ ಶನಿವಾರ ಆರ್ ಸಿಬಿ – ಜಿಟಿ ಪಂದ್ಯದ ಮೊದಲು ಸಂದರ್ಶನವನ್ನು ಉಲ್ಲೇಖಿಸಿದರು, ಅದನ್ನು ಪದೇ ಪದೇ ತೋರಿಸುತ್ತಿದ್ದಂತೆ ಕಟುವಾದ ದಾಳಿ ನಡೆಸಿದರು. ಇಂತಹ ಹೇಳಿಗಳು ಐಪಿಎಲ್ ನಲ್ಲಿ ತಜ್ಞರಂತೆ ಕೆಲಸ ಮಾಡುತ್ತಿರುವ ಮಾಜಿ ಕ್ರಿಕೆಟಿಗರ ಜ್ಞಾನಕ್ಕೆ ನೇರವಾದ ಅವಮಾನ ಎಂದು ಅವರ ಅಭಿಪ್ರಾಯಪಟ್ಟಿದೆ.
“ಅವರ ಸ್ಟ್ರೈಕ್ ರೇಟ್ 118 ಆಗಿದ್ದಾಗ ಮಾತ್ರ ಕಾಮೇಂಟೇಟರ್ಸ್ ಪ್ರಶ್ನಿಸಿದ್ದಾರೆ. ನನಗೆ ತುಂಬಾ ಖಚಿತವಿಲ್ಲ. ನಾನು ಹೆಚ್ಚು ಪಂದ್ಯಗಳನ್ನು ನೋಡುವುದಿಲ್ಲ, ಹಾಗಾಗಿ ಇತರ ಕಾಮೆಂಟೇಟರ್ ಗಳು ಏನು ಹೇಳಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ ನೀವು ಆರಂಭಿಕರಾಗಿ ಬಂದು ನೀವು 14ನೇ ಅಥವಾ 15ನೇ ಓವರ್‌ನಲ್ಲಿ ಔಟಾದಾಗ 118 ಗಳ ಸ್ಟ್ರೈಕ್ ನಲ್ಲಿ ರನ್ ಗಳಿಸಿದಾಗಲೂ ನಿಮ್ಮನ್ನು ಹೊಗಳಬೇಕು ಎಂದರೆ ಅದು ವಿಚಿತ್ರ” ಎಂದು ಗಾವಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.
Gavaskar owning kohli 😭😭😭pic.twitter.com/g5j2WiVtJW
— ‘ (@Dhoniverse_) May 4, 2024
” ನಮಗೆ ಹೊರಗಿನ ಮಾತುಗಳ ಬಗ್ಗೆ ಕಾಳಜಿ ಇಲ್ಲ ಎಂದು ಈ ಹುಡುಗರೆಲ್ಲ ಮಾತನಾಡುತ್ತಾರೆ. ಹೌದಾ! ಹಾಗಾದರೆ ನೀವು ಯಾವುದೇ ಹೊರಗಿನ ಟೀಕೆಗಳಿಗೆ ಯಾಕೆ ಉತ್ತರಿಸುತ್ತಿದ್ದೀರಿ. ನಾವೆಲ್ಲರೂ ಬಹಳಷ್ಟು ಅಲ್ಲದಿದ್ದರೂ ಕ್ರಿಕೆಟ್ ಆಡಿದ್ದೇವೆ. ನಮಗೆ ಯಾವುದೇ ಅಜೆಂಡಾಗಳಿಲ್ಲ. ನಾವು ನೋಡುವ ವಿಷಯಗಳ ಬಗ್ಗೆ ನಾವು ಮಾತನಾಡುತ್ತೇವೆ, ನಮಗೆ ನಮ್ಮ ಇಷ್ಟಗಳು ಮತ್ತು ಇಷ್ಟವಿಲ್ಲದಿದ್ದರೂ ಸಹ, ನಾವು ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದರ ಕುರಿತು ಮಾತನಾಡುತ್ತೇವೆ” ಎಂದು ವಿರಾಟ್ ಹೆಸರು ಹೇಳದೆ ಟೀಕೆ ಮಾಡಿದರು.
So according to Gavaskar saab, no matter how much people cry on kohli everyday Kohli shouldn’t reply his critics 😂😂pic.twitter.com/9yiAYtXrg8
— POTT⁷⁶⁵ (@KlolZone) May 4, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.