ಫೆಡ್ ಕಪ್ ಟೆನಿಸ್ ಹಾಂಕಾಂಗ್‌ಗೆ ಸೋಲುಣಿಸಿದ ಭಾರತ
Team Udayavani, Feb 10, 2018, 6:40 AM IST
ಹೊಸದಿಲ್ಲಿ: ಅಂಕಿತಾ ರೈನಾ ಮತ್ತು ಕರ್ಮಾನ್ ಕೌರ್ ಥಂಡಿ ಅವರ ಅಮೋಘ ಆಟದಿಂದಾಗಿ ಭಾರತವು ಫೆಡ್ ಕಪ್ ಟೆನಿಸ್ ಕೂಟದಲ್ಲಿ ಹಾಂಕಾಂಗ್ ವಿರುದ್ಧ 3-0 ಅಂತರದ ಗೆಲುವು ದಾಖಲಿಸಿದೆ. ಈ ಗೆಲುವಿನಿಂದ ಭಾರತ ಏಶ್ಯ-ಒಶಿಯಾನಿಯಾ ಬಣ ಒಂದರಲ್ಲಿ 1-0 ಮುನ್ನಡೆ ಸಾಧಿಸಿದೆ.
ಕರ್ಮಾನ್ ಕೌರ್ ಹಲವು ಅನಗತ್ಯ ತಪ್ಪುಗಳನ್ನು ಮಾಡಿದರೂ ಅಂತಿಮವಾಗಿ ಹಾಂಕಾಂಗಿನ ಎಡಿಸ್ ಚಾಂಗ್ ಅವರನ್ನು 6-3, 6-4 ಸೆಟ್‌ಗಳಿಂದ ಸೋಲಿಸಲು ಯಶಸ್ವಿಯಾದರು. ಕರ್ಮಾನ್ ಕಳೆದ ನಾಲ್ಕು ಪಂದ್ಯಗಳಲ್ಲಿ ಸೋತಿದ್ದರು. ಅವರು ಫೆಡ್ ಕಪ್ ಕೂಟದಲ್ಲಿ ಸರಿಯಾಗಿ ಒಂದು ವರ್ಷದ ಹಿಂದೆ ಗೆಲುವು ಸಾಧಿಸಿದ್ದರು.
ಇನ್ನೊಂದು ಪಂದ್ಯದಲ್ಲಿ ಅಂಕಿತಾ ಅವರು ಲಿಂಗ್ ಝಾಂಗ್ ಅವರನ್ನು 6-3, 6-2 ಸೆಟ್‌ಗಳಿಂದ ಸೋಲಿಸಿದರು. 2018ರ ಋತುವಿನಿಲ್ಲಿ ಇದು ಭಾರತದ ಮೊದಲ ಗೆಲುವು ಆಗಿದೆ. ಡಬಲ್ಸ್ ಪಂದ್ಯದಲ್ಲಿ ಪ್ರಾರ್ಥನಾ ತೊಂಬರೆ ಮತ್ತು ಪ್ರಾಂಜಲಾ ಯಡ್ಲಪಲ್ಲಿ ಅವರು ಕ್ವಾನ್ ಯಾವ್ ಮತ್ತು ಚಿಂಗ್ ಹು ವು ಅವರನ್ನು 6-2, 6-4 ಸೆಟ್‌ಗಳಿಂದ ಕೆಡಹಿದರು.
ಭಾರತ ಈ ಹಿಂದೆ 3-0 ಅಂತರದ ಗೆಲುವು ಸಾಧಿಸಿದ್ದು 2016ರ ಫೆಬ್ರಯರಿಯಲ್ಲಿ. ಅಂದು ಭಾರತ ಥಾçಲಂಡಿನಲ್ಲಿ ಕಜಾಕ್‌ಸ್ಥಾನ ತಂಡವನ್ನು 3-0 ಅಂತರದಿಂದ ಸೋಲಿಸಿತ್ತು. ಭಾರತ ಶನಿವಾರ ನಡೆಯುವ ಹೋರಾಟದಲ್ಲಿ ಚೈನೀಸ್ ತೈಪೆ ತಂಡವನ್ನು ಎದುರಿಸಲಿದೆ. ಭಾರತ ಈ ಹಿಂದೆ 2011ರಲ್ಲಿ ಚೈನೀಸ್ ತೈಪೆ ವಿರುದ್ಧ ಆಡಿತ್ತು ಮತ್ತು 1-2 ಅಂತರದಿಂದ ಸೋತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.