10 ಮೀ ಏರ್ ರೈಫಲ್ ಶೂಟಿಂಗ್: ನಿರಾಸೆ ಅನುಭವಿಸಿದ ಅಪೂರ್ವಿ ಚಂಡೆಲಾ, ಇಳಾವೆನಿಲ್
Team Udayavani, Jul 24, 2021, 8:48 AM IST
ಟೋಕಿಯೋ: ಜಪಾನ್ ನ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಶೂಟರ್ ಗಳಾದ ಅಪೂರ್ವಿ ಚಂಡೆಲಾ ಮತ್ತು ಇಳಾವನ್ನಿಲ ವಾಳರಿವನ್ ನಿರಾಸೆ ಅನುಭವಿಸಿದ್ದಾರೆ.
ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಈ ಇಬ್ಬರು ಶೂಟರ್ ಗಳು ಫೈನಲ್ ಗೆ ಅರ್ಹತೆ ಗಿಟ್ಟಿಸಲು ವಿಫಲರಾದರು. ಅರ್ಹತಾ ಸುತ್ತಿನಲ್ಲಿ ಇಳಾವನ್ನಿಲ ಮತ್ತು ಅಪೂರ್ವಿ ಕ್ರಮವಾಗಿ 16 ಮತ್ತು 36ನೇ ಸ್ಥಾನ ಪಡೆದರು. ಇದರಿಂದಾಗಿ ಫೈನಲ್ ಗೆ ಅರ್ಹತೆ ಪಡೆಯದೆ ನಿರಾಸೆ ಅನುಭವಿಸಿದರು.
2016ರ ರಿಯೋ ಒಲಿಂಪಿಕ್ಸ್ ನಲ್ಲಿ ಅಪೂರ್ವಿ 34ನೇ ಸ್ಥಾನ ಪಡೆದಿದ್ದರು.
ಭಾವನೆಗಳ ಸಮಾಗಮ
“ಯುನೈಟೆಡ್ ಬೈ ಎಮೋಶನ್ಸ್’-ಇದು ಉದ್ಘಾಟನಾ ಕಾರ್ಯಕ್ರಮದ ಘೋಷವಾಕ್ಯ. ವಿಶ್ವದ 204 ದೇಶಗಳ ಆ್ಯತ್ಲೀಟ್‌ಗಳು ಪಾಲ್ಗೊಳ್ಳುವ ಈ ಕೂಟ ಭಾವನೆಗಳಿಂದಲೇ ಸಮಾಗಮವಾಗಬೇಕು. ಹಲವು ಸಂಕಷ್ಟ, ಸಂಭ್ರಮ, ವೈಶಿಷ್ಟ್ಯ, ವೈಪರೀತ್ಯಗಳಿರುವಾಗ ಕ್ರೀಡಾಸ್ಫೂರ್ತಿ ಎಂಬ ಭಾವವೊಂದೇ ಎಲ್ಲರನ್ನೂ ಒಗ್ಗೂಡಿಸಬೇಕು. ಅದಕ್ಕೆ ಅನುಗುಣ ವಾಗಿಯೇ ಸಾಂಸ್ಕೃತಿಕ, ಐತಿಹಾಸಿಕ ಕಾರ್ಯಕ್ರಮಗಳು ಸರಳವಾಗಿ ನಡೆದವು.
ಉದ್ಘಾಟನಾ ಕಾರ್ಯಕ್ರಮ ಆರಂಭವಾದ ಕೂಡಲೇ ಲೇಸರ್ ಕಿರಣಗಳ ಚಿತ್ತಾರ ಆರಂಭವಾಯಿತು. ಒಲಿಂಪಿಕ್ಸ್ ಲಾಂಛನದ ವಿವಿಧ ಬಣ್ಣಗಳು ಪ್ರಕಟವಾದವು. ಅಂತಿಮವಾಗಿ ಅದು ಅಭಿಮಾನಿಯಂತೆ ರೂಪು ತಳೆಯಿತು. ಸ್ಟೇಡಿಯಂ ಮೇಲ್ಭಾಗದ ಆಗಸದಲ್ಲಿ 1,824 ಡ್ರೋನ್‌ಗಳ ಮೂಲಕ ಅದ್ಭುತ ಸೃಷ್ಟಿಸಲಾಯಿತು. ಅಲ್ಲಿ ಈ ಬಾರಿಯ ಲಾಂಛನವನ್ನು ಸುಂದರವಾಗಿ ತೋರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.