ಆರ್ಚರಿ ವಿಶ್ವಕಪ್: ಒಂದಂಕದ ಹಿನ್ನಡೆ
Team Udayavani, Jul 22, 2018, 9:58 AM IST
ಕೋಲ್ಕತಾ: ಕೇವಲ ಒಂದು ಅಂಕದ ಹಿನ್ನಡೆಯಿಂದಾಗಿ ಭಾರತದ ವನಿತಾ ತಂಡ ಆರ್ಚರಿ ವಿಶ್ವಕಪ್ ಕೂಟದ “ಕಂಪೌಂಡ್ ಟೀಮ್’ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಕಳೆದುಕೊಂಡಿದೆ, ಬೆಳ್ಳಿಗೆ ಸಮಾಧಾನಪಟ್ಟಿದೆ. ಶನಿವಾರದ ಫೈನಲ್‌ನಲ್ಲಿ ಫ್ರಾನ್ಸ್ ವನಿತೆ ಯರು ಆತಿಥೇಯ ಭಾರತವನ್ನು 229-228 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರು.
5 ಸಲ ಪರಿಪೂರ್ಣ 10 ಅಂಕ
ಜ್ಯೋತಿ ಸುರೇಖಾ ವೆನ್ನಮ್, ಮುಸ್ಕಾನ್ ಕಿರಾರ್ ಹಾಗೂ ತೃಷಾ ದೇಬ್ ಅವರನ್ನೊಳ ಗೊಂಡ ಭಾರತ ತಂಡ ಭರವಸೆಯ ಆರಂಭ ವನ್ನೇ ಕಂಡುಕೊಂಡಿತ್ತು. ಒಂದು ಹಂತದಲ್ಲಿ 59-57ರ ಮುನ್ನಡೆ ಕೂಡ ಸಾಧಿಸಿತ್ತು. ಆದರೆ ಫ್ರಾನ್ಸ್‌ನ ಸೋಫಿ ಡೋಡ್‌ಮಂಟ್ ಸತತ 5 ಸಲ ಪರಿಪೂರ್ಣ 10 ಅಂಕಗಳಿಗೆ ಗುರಿ ಇರಿಸಿ ಫ್ರಾನ್ಸ್‌ಗೆ ಮೇಲುಗೈ ಒದಗಿಸಿದರು. ಅವರಿಗೆ ಅಮೇಲಿ ಸ್ಯಾನ್ಸೆನಾಟ್ ಮತ್ತು ಸಾಂಡ್ರಾ ಹರ್ವೆ ಉತ್ತಮ ಬೆಂಬಲವಿತ್ತರು. ದ್ವಿತೀಯ ಎಂಡ್‌ನಲ್ಲಿ ಎರಡೂ ತಂಡಗಳು ಸಮಬಲ ದಲ್ಲಿದ್ದರೂ (116 ಅಂಕ) ತೃತೀಯ ಎಂಡ್‌ನಲ್ಲಿ ಭಾರತ ಗುರಿ ತಪ್ಪತೊಡಗಿತು. ಫ್ರಾನ್ಸ್ 174-169 ಅಂಕಗಳ ಮುನ್ನಡೆ ಪಡೆಯಿತು. 4ನೇ ಎಂಡ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿತು. 60ರಲ್ಲಿ 59 ಅಂಕಗಳನ್ನು ಕಲೆಹಾಕಿತು. ಆದರೂ ಪ್ರಯೋಜನವಾಗಲಿಲ್ಲ. ಫ್ರಾನ್ಸ್ ಚಿನ್ನಕ್ಕೆ ಗುರಿ ಇರಿಸಿಯೇ ಬಿಟ್ಟಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್ ಮೇಜರ್
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Ghaati: ಸ್ವೀಟಿ ಅಲ್ಲ ಘಾಟಿ; ಫಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ
Brahmavara ಬಂಟರ ಯಾನೆ ನಾಡವರ ಸಂಘ: ನಾಳೆ ನೂತನ ಪದಾಧಿಕಾರಿಗಳ ಪದಪ್ರದಾನ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.