ಬಿಲ್ಗಾರರು ವಿಶ್ವಕಪ್ ತಪ್ಪಿಸಿಕೊಳ್ಳಲು ಕೇಂದ್ರ ಕ್ರೀಡಾ ಸಚಿವಾಲಯ ಕಾರಣ
Team Udayavani, Apr 23, 2019, 11:58 AM IST
ಚಂಡೀಗಢ: ಕಳೆದ ಶನಿವಾರ ಕಡೆಯ ಕ್ಷಣದಲ್ಲಿ ಭಾರತೀಯ ಬಿಲ್ಗಾರರು ವಿಶ್ವಕಪ್ ಸ್ಪರ್ಧೆಯನ್ನು ತಪ್ಪಿಸಿಕೊಂಡಿದ್ದಕ್ಕೆ, ಕೇಂದ್ರ ಕ್ರೀಡಾ ಸಚಿವಾಲಯವೇ ಕಾರಣ ಎಂದು ಎಎಐ (ಭಾರತ ಬಿಲ್ಗಾರಿಕೆ ಸಂಸ್ಥೆ) ಕಾರ್ಯದರ್ಶಿ ಮಹಾಸಿಂಗ್ ಆರೋಪಿಸಿದ್ದಾರೆ.
ನಾವು 75 ದಿನಕ್ಕೂ ಮುನ್ನ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ಕೇಂದ್ರ ಕ್ರೀಡಾ ಇಲಾಖೆ ಅದನ್ನು ಪುರಸ್ಕರಿಸಿದ್ದು ಕಳೆದ ಸೋಮವಾರ. ಕಡೆಗೆ ಗಡಿಬಿಡಿಯಲ್ಲಿ ಟಿಕೆಟ್‌ಗಳನ್ನು ಖರೀದಿ ಮಾಡಬೇಕಾದ ಪರಿಸ್ಥಿತಿ ಬಂತು. ಆದ್ದರಿಂದ ಕಡೆಯ ಹಂತದಲ್ಲಿ ಸೂಕ್ತ ಬದಲಾವಣೆ ಸಾಧ್ಯವಾಗಲಿಲ್ಲ ಎಂದು ಮಹಾ ಸಿಂಗ್ ವಿವರಿಸಿದ್ದಾರೆ.
ಬಂದ್ ಆಗಿತ್ತು ಪಾಕ್ ವಾಯು ಮಾರ್ಗ
ಶನಿವಾರ ಕೊಲಂಬಿಯಾದ ಮೆಡೆಲಿನ್‌ಗೆ ತೆರಳಲು ದೀಪಿಕಾ ಕುಮಾರಿ, ಬೊಂಬಯ್ಲ ದೇವಿ, ಅತನು ದಾಸ್ ಸೇರಿದಂತೆ 22 ಮಂದಿ ಯಿದ್ದ ಭಾರತೀಯ ಬಿಲ್ಗಾರರ ತಂಡ ಹೊರಟು ನಿಂತಿತ್ತು. ಈ ವೇಳೆ ಮಾಹಿತಿ ನೀಡಿದ ಕೆಎಲ್‌ಎಂ ಡಚ್ ವಿಮಾನಯಾನ ಸಂಸ್ಥೆ, ಪಾಕಿಸ್ಥಾನದ ವಾಯುಮಾರ್ಗ ಮುಚ್ಚಿರುವುದರಿಂದ ವಿಮಾನ ಬೊಗೊಟಕ್ಕೆ ತೆರಳುವುದು 2 ಗಂಟೆ ತಡವಾಗುತ್ತದೆ. ಅಷ್ಟರಲ್ಲಿ ಬೊಗೊಟದಿಂದ ಮೆಡೆಲಿನ್‌ಗೆ ತೆರಳಬೇಕಿರುವ ಸಂಪರ್ಕ ವಿಮಾನ ಹೊರಟು ಹೋಗಿರುತ್ತದೆ ಎಂದು ಭಾರತೀಯರಿಗೆ ತಿಳಿಸಿತ್ತು. ಇದನ್ನು ಕೂಡಲೇ ಎಎಐಗೆ ಬಿಲ್ಗಾರರೊಬ್ಬರು ಕರೆ ಮಾಡಿ ತಿಳಿಸಿದ್ದರು. ಆ ಹಂತದಲ್ಲಿ ಪರಿಸ್ಥಿತಿಯನ್ನು ಸರಿಪಡಿಸಲು ಎಲ್ಲ ಯತ್ನ ಮಾಡಿದರೂ, ಫಲಕಾರಿಯಾಗದೇ ಕೂಟಕ್ಕೆ ತೆರಳುವುದನ್ನೇ ರದ್ದು ಮಾಡಬೇಕಾಗಿ ಬಂದಿತ್ತು.
ಈ ಅವ್ಯವಸ್ಥೆಗೆ ಕೇಂದ್ರ ಕ್ರೀಡಾ ಕಾರ್ಯ ದರ್ಶಿಗಳೇ ಉತ್ತರ ನೀಡ ಬೇಕು. ಆದರೆ ಇದುವರೆಗೂ ಅವರು ನಮ್ಮ ಕರೆ ಸ್ವೀಕರಿಸುತ್ತಿಲ್ಲ.
ಮಹಾಸಿಂಗ್ , ಭಾರತ ಬಿಲ್ಗಾರಿಕೆ ಸಂಸ್ಥೆ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.