ಪರ್ತ್ ಟೆಸ್ಟ್: ಕಾಂಗರೂಗಳನ್ನು ಕಾಡಿದ ಮಾಲನ್-ಬೇರ್‌ಸ್ಟೊ
Team Udayavani, Dec 15, 2017, 7:00 AM IST
ಪರ್ತ್: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ಮಾಲನ್ ಮತ್ತು ಜಾನಿ ಬೇರ್‌ಸ್ಟೊ ಸೇರಿಕೊಂಡು ಪರ್ತ್ ಟೆಸ್ಟ್‌ನಲ್ಲಿ ಇಂಗ್ಲೆಂಡಿನ ಪರದಾಟವನ್ನು ತಪ್ಪಿಸಿದ್ದಾರೆ. ಮೊದಲ ದಿನದ ಅಂತ್ಯಕ್ಕೆ ಇಂಗ್ಲೆಂಡ್ 4 ವಿಕೆಟಿಗೆ 305 ರನ್ ಗಳಿಸಿದೆ.
ಎಡಗೈ ಆಟಗಾರ ಡೇವಿಡ್ ಮಾಲನ್ ಮೊದಲ ಟೆಸ್ಟ್ ಶತಕದ ಸಂಭ್ರಮವನ್ನಾಚರಿಸಿದ್ದು, 110 ರನ್ ಬಾರಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರೊಂದಿಗೆ 75 ರನ್ ಮಾಡಿರುವ ಬೇರ್‌ಸ್ಟೊ ಇದ್ದಾರೆ. ಇವರಿಬ್ಬರಿಂದ ಮುರಿಯದ 5ನೇ ವಿಕೆಟಿಗೆ 174 ರನ್ ಸಂಗ್ರಹಗೊಂಡಿದೆ. ಇದು 1936ರ ಬಳಿಕ ಆ್ಯಶಸ್‌ನಲ್ಲಿ ಇಂಗ್ಲೆಂಡಿನ 5ನೇ ವಿಕೆಟಿಗೆ ಪೇರಿಸಲ್ಪಟ್ಟ ಅತ್ಯಧಿಕ ಗಳಿಕೆ. ಅಂದು ಡೆನ್ನಿಸ್ ಕಾಂಪ್ಟನ್-ಎಡ್ಡಿ ಪೇಂಟರ್ 206 ರನ್ ಒಟ್ಟುಗೂಡಿಸಿದ್ದರು.
8ನೇ ಟೆಸ್ಟ್ ಆಡುತ್ತಿರುವ ಮಾಲನ್ 174 ಎಸೆತ ಎದುರಿಸಿದ್ದು, 15 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದ್ದಾರೆ. ಬೇರ್‌ಸ್ಟೊ ಪಾಲಿಗೆ ಇದು 18ನೇ ಅರ್ಧ ಶತಕ. ಶುಕ್ರವಾರ ಇದು 4ನೇ ಶತಕವಾಗಿ ಪರಿವರ್ತನೆಗೊಳ್ಳಲೂಬಹುದು. ಮಾಲನ್ ಪರ್ತ್‌ನಲ್ಲಿ ಶತಕದ ಖಾತೆ ತೆರೆದ ಇಂಗ್ಲೆಂಡಿನ 5ನೇ ಆಟಗಾರ. ಬ್ರಿಯಾನ್ ಲ್ಯೂಕ್‌ಹರ್ಸ್ಡ್, ಕ್ರಿಸ್ ಬ್ರಾಡ್, ಜಾಕ್ ರಿಚರ್ಡ್ಸ್ ಮತ್ತು ಬೆನ್ ಸ್ಟೋಕ್ಸ್ ಉಳಿದವರು. ಸ್ಟೋಕ್ಸ್ 2013ರ ಪರ್ತ್ ಟೆಸ್ಟ್‌ನಲ್ಲಿ ಶತಕ ಹೊಡೆದ ಬಳಿಕ ಆ್ಯಶಸ್‌ನಲ್ಲಿ ಇಂಗ್ಲೆಂಡ್ ಪರ ದಾಖಲಾದ ಮೊದಲ ಸೆಂಚುರಿ ಇದಾಗಿದೆ.
ಮೊದಲೆರಡೂ ಟೆಸ್ಟ್ ಪಂದ್ಯಗಳನ್ನು ಸೋತ ಒತ್ತಡದ ನಡುವೆಯೇ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆರಿಸಿಕೊಂಡಿತ್ತು. ಆದರೆ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಮತ್ತೆ ತಂಡವನ್ನು ಕಾಡಿತು. ದಾಖಲೆಯ 150ನೇ ಟೆಸ್ಟ್ ಆಡಲಿಳಿದ ಕುಕ್ (7), ವಿನ್ಸ್ (25) ಮತ್ತು ನಾಯಕ ರೂಟ್ (20) ಬೇಗನೇ ಪೆವಿಲಿಯನ್ ಸೇರಿಕೊಂಡರು. ಆರಂಭಕಾರ ಮಾರ್ಕ್ ಸ್ಟೋನ್‌ಮ್ಯಾನ್ ಮಾತ್ರ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು 56 ರನ್ ಬಾರಿಸಿದರು (110 ಎಸೆತ, 10 ಬೌಂಡರಿ). ಈ 4 ವಿಕೆಟ್ 131 ರನ್ ಆಗುವಷ್ಟರಲ್ಲಿ ಉರುಳಿತು.
ಸಚಿನ್ ದಾಖಲೆ ಮುರಿದ ಕುಕ್
ಆರಂಭಕಾರ ಅಲಸ್ಟೇರ್ ಕುಕ್ 150 ಟೆಸ್ಟ್ ಆಡಿದ ವಿಶ್ವದ 8ನೇ ಹಾಗೂ ಇಂಗ್ಲೆಂಡಿನ ಮೊದಲ ಕ್ರಿಕೆಟಿಗನೆನಿಸಿದರು. ಇದನ್ನು ಸ್ಮರಣೀಯಗೊಳಿಸಲು ಅವರಿಂದಾಗಲಿಲ್ಲ. ಆದರೆ 150 ಟೆಸ್ಟ್‌ಗಳನ್ನು ಅತಿ ಕಡಿಮೆ ಅವಧಿಯಲ್ಲಿ ಆಡಿದ ದಾಖಲೆ ಕುಕ್ ಆವರದಾಯಿತು. ಇದಕ್ಕಾಗಿ ಅವರು 11 ವರ್ಷ, 288 ದಿನ ತೆಗೆದುಕೊಂಡರು. ಉಳಿದವರೆಲ್ಲ 14ಕ್ಕೂ ಹೆಚ್ಚು ವರ್ಷ ತೆಗೆದುಕೊಂಡಿದ್ದರು.
ಕುಕ್ ಅತಿ ಕಡಿಮೆ ವಯಸ್ಸಿನಲ್ಲಿ 150 ಟೆಸ್ಟ್ ಆಡಿದ ದಾಖಲೆಯನ್ನೂ ಸ್ಥಾಪಿಸಿದರು (32 ವರ್ಷ, 254 ದಿನ). ಹಿಂದಿನ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಲ್ಲಿತ್ತು (35 ವರ್ಷ, 106 ದಿನ).
ಇಂಗ್ಲೆಂಡ್ 1966ರ ಬಳಿಕ ಮೊದಲ ಬಾರಿಗೆ ಆಸ್ಟ್ರೇಲಿಯದಲ್ಲಿ ಆಡಲಾದ ಟೆಸ್ಟ್ ಪಂದ್ಯದ ಮೊದಲ ದಿನ 300 ಪ್ಲಸ್ ರನ್ ಪೇರಿಸಿತು. ಅಂದಿನ ಮೆಲ್ಬರ್ನ್ ಟೆಸ್ಟ್ ಪಂದ್ಯದ ಪ್ರಥಮ ದಿನ 5ಕ್ಕೆ 312 ರನ್ ಒಟ್ಟುಗೂಡಿಸಿತ್ತು. ಅಂದಹಾಗೆ, ಪರ್ತ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 300 ರನ್ ಗಳಿಸಿದ ಸಂದರ್ಭದಲ್ಲಿ ಇಂಗ್ಲೆಂಡ್ ಸೋತದ್ದಿಲ್ಲ!
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-4 ವಿಕೆಟಿಗೆ 305 (ಮಾಲನ್ ಬ್ಯಾಟಿಂಗ್ 110, ಬೇರ್‌ಸ್ಟೊ ಬ್ಯಾಟಿಂಗ್ 75, ಸ್ಟೋನ್‌ಮ್ಯಾನ್ 56, ಸ್ಟಾರ್ಕ್ 79ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.