![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Dec 16, 2021, 5:40 AM IST
ಅಡಿಲೇಡ್: ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಅಜೇಯ ದಾಖಲೆ ಹೊಂದಿರುವ ಆಸ್ಟ್ರೇಲಿಯ ಇದೇ ಹುರುಪಿನಲ್ಲಿ ಗುರುವಾರದಿಂದ “ಅಡಿಲೇಡ್ ಓವಲ್’ನಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಇದು ಆ್ಯಶಸ್ ಸರಣಿಯ ದ್ವಿತೀಯ ಟೆಸ್ಟ್ ಆಗಿದ್ದು, ಬ್ರಿಸ್ಬೇನ್‌ನಲ್ಲಿ ಸಾಧಿಸಿದ 9 ವಿಕೆಟ್ ಗೆಲುವು ಕೂಡ ಕಾಂಗರೂಗಳ ಉತ್ಸಾಹವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.
ಹಗಲು-ರಾತ್ರಿ ಟೆಸ್ಟ್ ಪಂದ್ಯಗಳ 6 ವರ್ಷಗಳ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಆಸ್ಟ್ರೇಲಿಯದ ಹೆಗ್ಗುರುತೇ ಕಾಣಿಸುತ್ತದೆ. ಆಡಿದ ಎಂಟೂ ಟೆಸ್ಟ್‌ಗಳಲ್ಲಿ ಗೆದ್ದ ಹಿರಿಮೆ ಕಾಂಗರೂಗಳದು. ಇದರಲ್ಲಿ 4 ಗೆಲುವು ಅಡಿಲೇಡ್‌ನಲ್ಲೇ ಒಲಿದಿದೆ. 2017ರಲ್ಲಿ ಇಂಗ್ಲೆಂಡ್ ವಿರುದ್ಧ 120 ರನ್ ಗೆಲುವು ಸಾಧಿಸಿದ್ದು ಇದೇ ಅಂಗಳದಲ್ಲಿ.
ಅಡಿಲೇಡ್ ದಾಖಲೆಯೂ ಆಸ್ಟ್ರೇಲಿಯ ಪರವಾಗಿದೆ. ಇತ್ತಂಡಗಳು ಈವರೆಗೆ 32 ಸಲ ಮುಖಾಮುಖಿ ಆಗಿವೆ. ಆಸ್ಟ್ರೇಲಿಯ 18, ಇಂಗ್ಲೆಂಡ್ 9ರಲ್ಲಿ ಗೆದ್ದಿವೆ. 5 ಟೆಸ್ಟ್ ಡ್ರಾಗೊಂಡಿವೆ.
ಕಮಿನ್ಸ್ ಯಶಸ್ವಿ ನಾಯಕತ್ವ
ತಮ್ಮ ಮೊದಲ ಟೆಸ್ಟ್ ಕ್ಯಾಪ್ಟನ್ಸಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿರುವ ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲೂ ಘಾತಕವಾಗಿ ಪರಿಣಮಿಸಿರುವುದು ಆಸ್ಟ್ರೇಲಿಯದ ಪಾಲಿಗೊಂದು ಸಿಹಿ ಸುದ್ದಿ. ಆದರೆ ಮತ್ತೋರ್ವ ವೇಗಿ ಜೋಶ್ ಹ್ಯಾಝಲ್‌ವುಡ್ ಗಾಯಾಳಾಗಿ ಹೊರಬಿದ್ದಿದ್ದಾರೆ. ಈ ಸ್ಥಾನದಲ್ಲಿ ಜೇ ರಿಚರ್ಡ್‌ಸನ್ ಕಾಣಿಸಿಕೊಳ್ಳಲಿರು ವುದರಿಂದ ಹೆಚ್ಚಿನ ಆತಂಕವೇನೂ ಇಲ್ಲ.
ಇದನ್ನೂ ಓದಿ:ಎನ್‌ಕೌಂಟರ್: ಎ+ ಕೆಟಗರಿಯ ಹಿಜ್ಬುಲ್ ಉಗ್ರನ ಹತ್ಯೆ
ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮೊದಲ ಟೆಸ್ಟ್ ವೇಳೆ ಗಾಯಾಳಾಗಿದ್ದರೂ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ. ಮೆನೆಗೆ ತೆರಳಿದ ಅವರು ಈಗಾಗಲೇ ಅಡಿಲೇಡ್‌ಗೆ ಆಗಮಿಸಿ ತಂಡವನ್ನು ಕೂಡಿಕೊಂಡಿದ್ದಾರೆ.
ಬ್ರಿಸ್ಬೇನ್‌ನಲ್ಲಿ 150 ರನ್ ಬಾರಿಸಿದ್ದ ಹೆಡ್ ಸೇರಿದಂತೆ ಲಬುಶೇನ್, ಸ್ಮಿತ್, ಗ್ರೀನ್ ಅವರನ್ನೊಳಗೊಂಡ ಕಾಂಗರೂ ಬ್ಯಾಟಿಂಗ್ ಬಲಿಷ್ಠವಾಗಿದೆ.
ಆ್ಯಂಡಿ, ಬ್ರಾಡ್ ಕಣಕ್ಕೆ
ಇಂಗ್ಲೆಂಡಿಗೆ ಈ ಟೆಸ್ಟ್ ಪಂದ್ಯದಲ್ಲಿ ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಸೇವೆ ಲಭಿಸುವುದರಿಂದ ಉತ್ತಮ ಹೋರಾಟ ನೀಡೀತು ಎಂಬುದೊಂದು ಲೆಕ್ಕಾಚಾರ. ಬೆನ್ ಸ್ಟೋಕ್ಸ್ ಕೂಡ ಗಾಯದಿಂದ ಚೇತರಿಸಿಕೊಂಡಿದ್ದಾರೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.