ಆ್ಯಶಸ್: ಸಿಡ್ನಿ ಪಂದ್ಯಕ್ಕೆ ಎರಡೂ ತಂಡ ಪ್ರಕಟ
Team Udayavani, Jan 5, 2022, 5:10 AM IST
ಸಿಡ್ನಿ: “ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ಬುಧವಾರ ಆರಂಭವಾಗಲಿರುವ ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯಕ್ಕೆ ಎರಡೂ ತಂಡಗಳ ಆಡುವ ಬಳಗ ಅಂತಿಮಗೊಂಡಿದೆ.
ಆಸ್ಟ್ರೇಲಿಯ ತಂಡಕ್ಕೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಉಸ್ಮಾನ್ ಖ್ವಾಜಾ ಮರಳಿದ್ದಾರೆ. ಕೋವಿಡ್ ಸೋಂಕಿಗೆ ಒಳಗಾಗಿರುವ ಟ್ರ್ಯಾವಿಸ್ ಹೆಡ್ ಸ್ಥಾನವನ್ನು ಖ್ವಾಜಾ ತುಂಬಲಿದ್ದಾರೆ. ಜೋಶ್ ಹ್ಯಾಝಲ್‌ವುಡ್ ಇನ್ನೂ ಚೇತರಿಸದ ಕಾರಣ ಆಯ್ಕೆಗೆ ಪರಿಗಣಿಸಲ್ಪಡಲಿಲ್ಲ.
ಇಂಗ್ಲೆಂಡ್ ಸೀನಿಯರ್ ಪೇಸ್ ಬೌಲರ್ ಸ್ಟುವರ್ಟ್ ಬ್ರಾಡ್ ಅವರನ್ನು ಮರಳಿ ಕರೆಸಿಕೊಂಡಿದೆ. ಗಾಯಾಳು ಓಲೀ ರಾಬಿನ್ಸನ್ ಗಾಯಾಳಾಗಿದ್ದಾರೆ. ಈಗಾಗಲೇ ಆ್ಯಶಸ್ ಉಳಿಸಿಕೊಂಡಿರುವ ಆಸ್ಟ್ರೇಲಿಯ 3-0 ಮುನ್ನಡೆಯಲ್ಲಿದೆ.
ಇದನ್ನೂ ಓದಿ:ಠಾಕೂರ್ ಸೂಪರ್ ಬೌಲಿಂಗ್; ಭಾರತ ತಿರುಗೇಟು
ಆಸ್ಟ್ರೇಲಿಯ ತಂಡ: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್,ಲಬುಶೇನ್, ಸ್ಟೀವನ್ ಸ್ಮಿತ್, ಉಸ್ಮಾನ್ ಖ್ವಾಜಾ, ಕ್ಯಾಮರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಕಮಿನ್ಸ್ (ನಾಯಕ), ಸ್ಟಾರ್ಕ್, ನಥನ್ ಲಿಯೋನ್, ಸ್ಕಾಟ್ ಬೋಲ್ಯಾಂಡ್.
ಇಂಗ್ಲೆಂಡ್ ತಂಡ: ಹಸೀಬ್ ಹಮೀದ್, ಜಾಕ್ ಕ್ರಾಲಿ, ಡೇವಿಡ್ ಮಲಾನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಜಾನಿ ಬೇರ್‌ಸ್ಟೊ, ಜಾಸ್ ಬಟ್ಲರ್, ಮಾರ್ಕ್ ವುಡ್, ಜಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KSDL ಲಾಭಾಂಶ ₹108 ಕೋಟಿ ಸರ್ಕಾರಕ್ಕೆ ಹಸ್ತಾಂತರ
2024ರಲ್ಲಿ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ರೆಸಿಪಿ ಯಾವುದು ಗೊತ್ತಾ?
Panaji: ಡಿ.19 ರಂದು ಮುಕ್ತಿ ಸಂಗ್ರಾಮದಲ್ಲಿ ಹೋರಾಡಿದ ಹುತಾತ್ಮರಿಗೆ ಸನ್ಮಾನ, ಗೌರವ
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Signature Bag: ನಿನ್ನೆ ಪ್ಯಾಲೆಸ್ತೀನ್ ಬೆಂಬಲ, ಇಂದು ಬಾಂಗ್ಲಾ ಪರ ಕೈ ಚೀಲ ತಂದ ಸಂಸದೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.