ಆ್ಯಶಸ್‌: ಇಂಗ್ಲೆಂಡ್‌ ದಿಟ್ಟ ಉತ್ತರ


Team Udayavani, Aug 3, 2019, 5:48 AM IST

AP8_2_2019_000197A

ಎಜ್‌ಬಾಸ್ಟನ್: ಆ್ಯಶಸ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ದಿಟ್ಟ ಉತ್ತರ ನೀಡಿದೆ. ಆಸ್ಟ್ರೇಲಿಯ ತಂಡವನ್ನು 284 ರನ್ನಿಗೆ ನಿಯಂತ್ರಿಸಲು ಯಶಸ್ವಿಯಾದ ಇಂಗ್ಲೆಂಡ್‌ ಆಬಳಿಕ ಬ್ಯಾಟಿಂಗ್‌ನಲ್ಲಿ ಉತ್ತಮ ನಿರ್ವಹಣೆ ದಾಖಲಿಸಿದೆ. ಎರಡನೇ ದಿನದ ಟೀ ವಿರಾಮದ ವೇಳೆ ತಂಡವು ಎರಡು ವಿಕೆಟ್‌ ಕಳೆದುಕೊಂಡಿದ್ದು 170 ರನ್‌ ಗಳಿಸಿದೆ. ಮೊದಲ ಇನ್ನಿಂಗ್ಸ್‌ ನಲ್ಲಿ ಮುನ್ನಡೆ ಸಾಧಿಸಲು ಆತಿಥೇಯ ತಂಡ 114 ರನ್‌ ಗಳಿಸಬೇಕಾಗಿದೆ.

ಜಾಸನ್‌ ರಾಯ್‌ ಅವರನ್ನು ಬೇಗನೇ ಕಳೆದುಕೊಂಡ ಬಳಿಕ ನಾಯಕ ಜೋ ರೂಟ್‌ ಮತ್ತು ರೋರಿ ಬರ್ನ್ಸ್ ತಂಡವನ್ನು ಆಧರಿಸಿದರು. ದ್ವಿತೀಯ ವಿಕೆಟಿಗೆ 132 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಅಪಾಯದಿಂದ ಪಾರು ಮಾಡಿ ದರು. ಈ ಜೋಡಿಯನ್ನು ಪೀಟರ್‌ ಸಿಡ್ಲ್ ಮುರಿದರು. 57 ರನ್‌ ಗಳಿಸಿದ ರೂಟ್‌ ಅವರು ಸಿಡ್ಲ್ಗೆ ಬಲಿಯಾದರು. ಬರ್ನ್ಸ್ 82 ರನ್ನುಗಳಿಂದ ಆಡುತ್ತಿದ್ದಾರೆ.

ಸ್ಮಿತ್‌ ಏಕಾಂಗಿ ಹೋರಾಟ
ಸ್ಟುವರ್ಟ್‌ ಬ್ರಾಡ್‌ ಸಹಿತ ಇಂಗ್ಲೆಂಡಿನ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ ಆಗಾಗ್ಗೆ ವಿಕೆಟ್‌ ಕಳೆದುಕೊಳ್ಳುತ್ತ ಹೋಯಿತು. 122 ರನ್‌ ತಲುಪಿದಾಗ ತಂಡ 8 ವಿಕೆಟ್‌ ಕಳೆದುಕೊಂಡು ಸಂಕಷ್ಟ ಅನುಭವಿಸಿತ್ತು. ಈ ಹಂತದಲ್ಲಿ ಸ್ಟೀವನ್‌ ಸ್ಮಿತ್‌ ಅವರಿಗೆ ಹೆಗಲು ಕೊಟ್ಟವರು ಪೀಟರ್‌ ಸಿಡ್ಲ್. 9ನೇ ವಿಕೆಟಿಗೆ ಅವರಿಬ್ಬರೂ 88 ರನ್ನುಗಳ ಜತೆಯಾಟ ನಡೆಸಿದ್ದರಿಂದ ತಂಡ ಸಾಧಾರಣ ಮೊತ್ತ ಪೇರಿಸುವಂತಾಯಿತು. ಸ್ಮಿತ್‌ ಅಂತಿಮ ವಿಕೆಟಿಗೆ ನಥನ್‌ ಲಿಯೋನ್‌ ಜೆಎ 74 ರನ್‌ ಪೇರಿಸಿದರು. ಕೊನೆಯವರಾಗಿ ಔಟಾಗುವ ಮೊದಲು ಸ್ಮಿತ್‌ 144 ರನ್‌ ಹೊಡೆದಿದ್ದರು. ಅವರು 16 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ್ದರು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ 284 (ಸ್ಟೀವನ್‌ ಸ್ಮಿತ್‌ 144, ಸಿಡ್ಲ್ 44, ಬ್ರಾಡ್‌ 86ಕ್ಕೆ 5, ವೋಕ್ಸ್‌ 58ಕ್ಕೆ 3); ಇಂಗ್ಲೆಂಡ್‌ 2 ವಿಕೆಟಿಗೆ 170 (ಎರಡನೇ ದಿನದ ಟಿ ವಿರಾಮದ ವೇಳೆಗೆ).

ಕೊಹ್ಲಿ ದಾಖಲೆ ಮುರಿದ ಸ್ಮಿತ್‌
ಇಂಗ್ಲೆಂಡ್‌ ವಿರುದ್ಧದ ಆ್ಯಶಸ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಸ್ಟೀವನ್‌ ಸ್ಮಿತ್‌ ಅವರು ವಿರಾಟ್‌ ಕೊಹ್ಲಿ ಅವರ ಅತೀ ವೇಗದ 24ನೇ ಶತಕ ದಾಖಲೆಯನ್ನು ಮುರಿದಿದ್ದಾರೆ.

ಸ್ಮಿತ್‌ ಅವರು ಇದೀಗ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ವೇಗದ 24ನೇ ಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯದವರೇ ಆದ ಸರ್‌ ಡಾನ್‌ ಬ್ರಾಡ್ಮನ್‌ ಕೇವಲ 66 ಇನ್ನಿಂಗ್ಸ್‌ ಗಳಲ್ಲಿ ಈ ಸಾಧನೆ ಮಾಡಿದ್ದರು.

ವಿರಾಟ್‌ ಕೊಹ್ಲಿ 123 ಇನ್ನಿಂಗ್ಸ್‌ಗಳಲ್ಲಿ 24ನೇ ಶತಕ ಸಿಡಿಸಿ ದಾಖಲೆ ಮಾಡಿದ್ದರು. ಈ ದಾಖಲೆಯನ್ನು ಇದೀಗ ಸ್ಮಿತ್‌ ಅಳಿಸಿ ಹಾಕಿದ್ದಾರೆ. ಸ್ಮಿತ್‌ ಕೇವಲ 118 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಪೂರ್ತಿಗೊಳಿಸಿದರು. ಸಚಿನ್‌ ತಂಡುಲ್ಕರ್‌ ಈ ಸಾಧನೆ ಮಾಡಲು 125 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು.

ಟಾಪ್ ನ್ಯೂಸ್

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

1-weewq

Ranji; ಬಂಗಾಲ ಬಿಗಿ ಹಿಡಿತ : ಇನ್ನಿಂಗ್ಸ್‌ ಜಯದತ್ತ ಮುಂಬಯಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

1-pro

Pro Kabaddi: ಜೈಪುರ್‌ ಮೇಲೆ ಪಾಟ್ನಾ ಸವಾರಿ

1-ewewq

ODI; ಹ್ಯಾರಿಸ್‌ ರೌಫ್ ಗೆ ಹೆದರಿದ ಆಸೀಸ್‌ : 9 ವಿಕೆಟ್‌ಗಳಿಂದ ಗೆದ್ದ ಪಾಕಿಸ್ಥಾನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

1-weewq

Ranji; ಬಂಗಾಲ ಬಿಗಿ ಹಿಡಿತ : ಇನ್ನಿಂಗ್ಸ್‌ ಜಯದತ್ತ ಮುಂಬಯಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.