ಆ್ಯಶಸ್ ಟೆಸ್ಟ್: ಜಾಕ್ ಕ್ರಾಲಿ ಅಜೇಯ ಶತಕ; ಇಂಗ್ಲೆಂಡ್ ದಿಟ್ಟ ಉತ್ತರ
ಆಸ್ಟ್ರೇಲಿಯ 317ಕ್ಕೆ ಆಲೌಟ್
Team Udayavani, Jul 21, 2023, 5:00 AM IST
ಮ್ಯಾಂಚೆಸ್ಟರ್: ಇಂಗ್ಲೆಂಡ್ ತಂಡದೆದುರಿನ ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ ತಂಡವು ಕ್ರಿಸ್ ವೋಕ್ಸ್ ಅವರ ದಾಳಿಗೆ ಕುಸಿದು 317 ರನ್ನಿಗೆ ಆಲೌಟಾಗಿದೆ.
ಪಂದ್ಯದ ಮೊದಲ ದಿನ ಮಾರ್ನಸ್ ಲಬುಶೇನ್ ಮತ್ತು ಮಿಚೆಲ್ ಮಾರ್ಷ್ ಅವರ ಅರ್ಧಶತಕದಿಂದಾಗಿ ಆಸ್ಟ್ರೇಲಿಯ ತಂಡವು 8 ವಿಕೆಟಿಗೆ 299 ರನ್ ಪೇರಿಸಿತ್ತು. ದ್ವಿತೀಯ ದಿನ ಆಟ ಮುಂದುವರಿಸಿದ ಪ್ರವಾಸಿ ತಂಡ 317 ರನ್ ಗಳಿಸಿ ಆಲೌಟಾಯಿತು.
ಜಾಕ್ ಕ್ರಾಲಿ ಶತಕ
ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ತಂಡವು ಟೀ ವಿರಾಮದ ವೇಳೆಗೆ ಎರಡು ವಿಕೆಟಿಗೆ 239 ರನ್ ಗಳಿಸಿ ಆಡುತ್ತಿದೆ. ಆರಂಭಿಕ ಆಟಗಾರ ಜಾಕ್ ಕ್ರಾಲಿ ಅವರ ಸೊಗಸಾದ ಶತಕ ಮತ್ತು ಅವರು ಮೊಯಿನ್ ಅಲಿ ಅವರೊಂದಿಗೆ ದ್ವಿತೀಯ ವಿಕೆಟಿಗೆ ಸೇರಿಸಿದ 121 ರನ್ ನೆರವಿನಿಂದ ಇಂಗ್ಲೆಂಡ್ ಉತ್ತಮ ಮೊತ್ತ ಪೇರಿಸುವತ್ತ ಹೊರಟಿದೆ. ಮೊಯಿನ್ ಅಲಿ 54 ರನ್ ಗಳಿಸಿ ಔಟಾದರೆ ಕ್ರಾಲಿ 132 ರನ್ ಗಳಿಸಿ ಆಡುತ್ತಿದ್ದಾರೆ. ಬಿರುಸಿನ ಆಟದ ಪ್ರದರ್ಶನ ನೀಡಿದ ಅವರು ಕೇವಲ 95 ಎಸೆತಗಳಿಂದ ಶತಕ ಪೂರ್ತಿಗೊಳಿಸಿದ್ದು 12 ಬೌಂಡರಿ ಮತ್ತು 1 ಸಿಕ್ಸರ್ ಹೊಡೆದಿದ್ದಾರೆ. ಅವರೊಂದಿಗೆ ಜೋ ರೂಟ್ 44 ರನ್ನುಗಳೊಂದಿಗೆ ಆಡುತ್ತಿದ್ದಾರೆ. ಅವರಿಬ್ಬರು ಈಗಾಗಲೇ ಮುರಿಯದ ಮೂರನೇ ವಿಕೆಟಿಗೆ 86 ಎಸೆತಗಳಿಂದ 109 ರನ್ ಪೇರಿಸಿದ್ದಾರೆ.
ಎಚ್ಚರಿಕೆಯ ಆಟ
ಕ್ರಿಸ್ ವೋಕ್ಸ್ ಸಹಿತ ಇಂಗ್ಲೆಂಡ್ ದಾಳಿಯನ್ನು ತಾಳ್ಮೆಯಿಂದ ಎದುರಿಸಿದ ಆಸ್ಟ್ರೇಲಿಯ ಆಟಗಾರರು ಎಚ್ಚರಿಕೆಯಿಂದ ಆಡಿ ರನ್ ಪೇರಿಸತೊಡಗಿದರು. ಲಬುಶೇನ್, ಸ್ಟೀವನ್ ಸ್ಮಿತ್, ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್ ಮತ್ತು ಸ್ಟಾರ್ಕ್ ಅವರ ಉಪಯುಕ್ತ ಆಟದಿಂದಾಗಿ ಆಸ್ಟ್ರೇಲಿಯ ಉತ್ತಮ ಮೊತ್ತ ಪೇರಿಸಲು ಯಶಸ್ವಿಯಾಯಿತು. ಲಬುಶೇನ್ ಮತ್ತು ಮಾರ್ಷ್ ಅರ್ಧಶತಕ ಹೊಡೆದರು. ಬಿಗು ದಾಳಿ ಸಂಘಟಿಸಿದ ಕ್ರಿಸ್ ವೋಕ್ಸ್ 62 ರನ್ನಿಗೆ 5 ವಿಕೆಟ್ ಉರುಳಿಸಿದರೆ ಬ್ರಾಡ್ 2 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.