ನೆಹ್ರ ವೀಕ್ಷಕ ವಿವರಣೆಕಾರ
Team Udayavani, Nov 16, 2017, 6:15 AM IST
ಕೋಲ್ಕತಾ: ನ್ಯೂಜಿಲ್ಯಾಂಡ್ ವಿರುದ್ಧ ದಿಲ್ಲಿಯಲ್ಲಿ ನ. 1ರಂದು ನಡೆದ ಮೊದಲ ಟ್ವೆಂಟಿ20 ಪಂದ್ಯದ ಬಳಿಕ ಎಲ್ಲ ಮಾದರಿಯ ಕ್ರಿಕೆಟಿನಿಂದ ನಿವೃತ್ತಿಯಾದ ವೇಗಿ ಆಶಿಷ್ ನೆಹ್ರ ಗುರುವಾರದಿಂದ ಹೊಸ ಇನ್ನಿಂಗ್ಸ್ ಆರಂಭಸಲಿದ್ದಾರೆ.
ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಗುರುವಾರದಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಅವರು ವೀಕ್ಷಕವಿವರಣೆಕಾರರಾಗಿ ಪಾದಾರ್ಪಣೆಗೈಯಲಿದ್ದಾರೆ.
ಹೊಸ ಇನ್ನಿಂಗ್ಸ್ ಆರಂಭಿಸಲಿರುವ ನೆಹ್ರ ಅವರನ್ನು ವೀರೇಂದ್ರ ಸೆಹವಾಗ್ ಟ್ವೀಟ್ ಮೂಲಕ ಸ್ವಾಗತಿಸಿದ್ದಾರೆ.
ವೀಕ್ಷಕವಿವರಣೆಕಾರರಾಗಿ ಕಾರ್ಯ ನಿರ್ವಹಿಸಲಿರುವ ನೆಹ್ರ ಅವರನ್ನು ನಿಮ್ಮದೇ ರೀತಿಯಲ್ಲಿ ಸಂಭ್ರಮದಿಂದ ಸ್ವಾಗತಿಸಿ ಎಂದು ಸೆಹವಾಗ್ ಟ್ವೀಟ್ ಮಾಡಿದ್ದಾರೆ.
ಕುಟುಂಬದ ಜತೆ ನಾನು ಸಮಯ ಕಳೆಯಬೇಕಾಗಿದೆ. ಆದರೆ ಕ್ರಿಕೆಟ್‌ಗೆ ಸಂಬಂಧಿಸಿ ಏನಾದರೂ ಕೆಲಸ ಮಾಡುವ ಮನಸ್ಸಿದೆ. ಯಾಕೆಂದರೆ ಕಳೆದ 25 ವರ್ಷಗಳಿಂದ ಆನು ಕ್ರಿಕೆಟ್ ಆಟವನ್ನು ಆನಂದಿಸಿದ್ದೇನೆ. ಆದರೆ ಯಾವ ರೀತಿಯ ಕೆಲಸವೆಂದು ತೀರ್ಮಾನಿಸಿಲ್ಲ. ಇದು ಕೋಚಿಂಗ್ ಅಥವಾ ವೀಕ್ಷಕವಿವರಣೆಕಾರರಾಗಿ ಇರಬಹುದು. ಕಲವೇ ದಿನಗಳಲ್ಲಿ ಇದು ನಿಮಗೆ ತಿಳಿಯಲಿದೆ ಎಂದು ನೆಹ್ರ ನಿವೃತ್ತಿಯಾದ ತತ್‌ಕ್ಷಣ ಪ್ರತಿಕ್ರಿಯೆ ನೀಡಿದ್ದರು.
2003ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯ ಅವರ ಸ್ಮರಣೀಯ ಪಂದ್ಯಗಳಲ್ಲಿ ಒಂದಾಗಿದೆ. ಈ ಪಂದ್ಯದಲ್ಲಿ ಅವರು ತನ್ನ ಶ್ರೇಷ್ಠ ನಿರ್ವಹಣೆ 23 ರನ್ನಿಗೆ 6 ವಿಕೆಟ್ ಕಿತ್ತು ಭಾರತದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡಿದ್ದರು.
199ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೋದಲ್ಲಿ ನಡೆದ ಟೆಸ್ಟ್‌ನಲ್ಲಿ ಆಡುವ ಮೂಲಕ ನೆಹ್ರ ಟೆಸ್ಟ್‌ಗೆ ಪಾದಾರ್ಪಣೆಗೈದಿದ್ದರು. ಭಾರತ ಪರ 17 ಟೆಸ್ಟ್ ಆಡಿರುವ ಅವರು 44 ವಿಕೆಟ್ ಉರುಳಿಸಿದ್ದಾರೆ. 2001ರಲ್ಲಿ ಏಕದಿನ ಕ್ರಿಕೆಟಿಗೆ ಪಾದಾರ್ಪಣೆಗೆದಿದ್ದ ಅವರು 120 ಏಕದಿನ ಪಂದ್ಯವನ್ನಾಡಿ 157 ವಿಕೆಟ್ ಹಾರಿಸಿದ್ದಾರೆ. ನೆಹ್ರ 27 ಟ್ವೆಂಟಿ20 ಪಂದ್ಯ ಆಡಿದ್ದು34 ವಿಕೆಟ್ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.