ನಂ.1 ಡಬಲ್ಸ್ ತಾರೆಯರಾದ ಅಶ್ವಿನಿ, ಶಿಖಾಗೇಕಿಲ್ಲ ಸ್ಥಾನ ?
ರಾಜ್ಯದ ಪ್ರತಿಭಾವಂತ ಡಬಲ್ಸ್ ಆಟಗಾರ್ತಿಯರನ್ನು ನಿರ್ಲಕ್ಷಿ ಸಿದ ಭಾರತ ಬ್ಯಾಡ್ಮಿಂಟನ್ ಸಂಸ್ಥೆ
Team Udayavani, Dec 1, 2019, 5:30 AM IST
ಬೆಂಗಳೂರು: ಭಾರತ ಬ್ಯಾಡ್ಮಿಂಟನ್ ತಂಡದ ಆಯ್ಕೆ ಪ್ರಕ್ರಿಯೆ ಯಲ್ಲಿ ಎಲ್ಲವೂ ಸರಿಯಿದೆಯಾ?
ಹೀಗೊಂದು ಅನುಮಾನ ಮೂಡಿದೆ. ಇದಕ್ಕೆ ಕಾರಣ ರವಿವಾರ
ದಿಂದ ನೇಪಾಲದಲ್ಲಿ ಆರಂಭವಾಗುವ ದಕ್ಷಿಣ ಏಷ್ಯನ್ ಗೇಮ್ಸ್‌ಗೆ ಆಯ್ಕೆ ಯಾಗಿರುವ ಭಾರತ ಬ್ಯಾಡ್ಮಿಂಟನ್ ತಂಡ. ಇದರಲ್ಲಿ ದೇಶದ ನಂ.1 ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಕರ್ನಾಟಕದ ಪುತ್ತೂರು ಮೂಲದ ಅಶ್ವಿನಿ ಭಟ್ ಹಾಗೂ ಶಿಖಾ ಗೌತಮ್‌ರನ್ನು ಕೈಬಿಡಲಾಗಿದೆ. ಹೈದರಾಬಾದ್‌ನಲ್ಲಿರುವ ಗೋಪಿಚಂದ್ ಅಕಾಡೆಮಿ ಯಲ್ಲಿ ತರಬೇತಿ ಪಡೆದ 8 ಮಂದಿ ಯನ್ನು ಆಯ್ಕೆ ಮಾಡಲಾಗಿದೆ. ಅಷ್ಟು ಮಾತ್ರವಲ್ಲ ವಿಶ್ವದಲ್ಲಿ 203ನೇ ಶ್ರೇಯಾಂಕದಲ್ಲಿರುವ ಗೋಪಿಚಂದ್ ಪುತ್ರಿ, 16ರ ಹರೆಯದ ಗಾಯತ್ರಿಗೂ ಸ್ಥಾನ ಸಿಕ್ಕಿದೆ. 135ನೇ ಸ್ಥಾನ ಪಡೆದಿ ರುವ ರಾಜ್ಯದ ಇಬ್ಬರು ಪ್ರತಿಭಾನ್ವಿತೆಯರಿಗೆ ಮಾತ್ರ ಸ್ಥಾನ ಸಿಕ್ಕಿಲ್ಲ.
ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ (ಬಿಎಐ) ಈ ನಿರ್ಧಾರ ವ್ಯಾಪಕ ಟೀಕೆಗೆ ಕಾರಣವಾಗಿದೆ. ಯಾವ ಆಧಾರದಲ್ಲಿ ತಂಡವನ್ನು ರಚಿಸಿದ್ದೀರಿ? ಪ್ರತಿಭಾವಂತರಿಗೆ ಏಕೆ ಅನ್ಯಾಯ ಎಸಗಿದ್ದೀರಿ? ಎಂದು ಮಹಾರಾಷ್ಟ್ರದ ಪ್ರತಿಭಾವಂತ ಬ್ಯಾಡ್ಮಿಂಟನ್ ಆಟಗಾರ್ತಿ ಪ್ರಜಕ್ತಾ ಸಾವಂತ್ ಕಟುವಾಗಿ ಪ್ರಶ್ನಿಸಿದ್ದಾರೆ. ಸ್ವತಃ ಪ್ರಜಕ್ತಾ ಈ ರೀತಿಯ ಅನ್ಯಾಯಗಳ ವಿರುದ್ಧ ದೀರ್ಘಕಾಲದಿಂದ ಹೋರಾಡುತ್ತಿದ್ದಾರೆ.
ಗೌಪ್ಯವಾಗಿ ತಂಡ ರಚನೆ?
ಭಾರತ ತಂಡವನ್ನು ಗೌಪ್ಯವಾಗಿ ರಚಿಸಲಾಗಿದೆ ಎನ್ನಲಾಗಿದೆ. ಈ ಬೆಳವಣಿಗೆಗಳ ಬಗ್ಗೆ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯನ್ನು “ಉದಯವಾಣಿ’ ಸಂಪರ್ಕಿಸಿದಾಗ ನಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಕಾರ್ಯದರ್ಶಿ ರಾಜೇಶ್ ತಿಳಿಸಿದ್ದಾರೆ.
11ರಲ್ಲಿ 8 ಮಂದಿ ಗೋಪಿಚಂದ್ ಅಕಾಡೆಮಿಯವರು!
ದಕ್ಷಿಣ ಏಷ್ಯನ್ ಕೂಟಕ್ಕೆ ಆರಿಸಿದ ಬ್ಯಾಡ್ಮಿಂಟನ್ ತಂಡದಲ್ಲಿ 11 ಮಂದಿಯಿದ್ದಾರೆ. ಇದರಲ್ಲಿ 8 ಮಂದಿ ಗೋಪಿಚಂದ್ ಅಕಾಡೆಮಿಯವರೇ ಆಗಿದ್ದಾರೆ.! ಸೌರಭ್ ವರ್ಮ, ಸಿರಿಲ್ ವರ್ಮ, ಗಾಯತ್ರಿ ಗೋಪಿಚಂದ್, ಉತ್ಕರ್ಷ ರಾವ್, ಮೇಘನಾ ಜಕ್ಕಂಪುಡಿ, ಕುಹೂ ಗರ್ಗ್, ಅನುಷ್ಕಾ ಪಾರೀಖ್, ಶ್ರಿಯಾಂಶಿ ಪ್ರದೇಶಿ ಅವರು ಗೋಪಿಚಂದ್ ಅಕಾಡೆಮಿಯ ಆಟಗಾರರು. ಉಳಿದಂತೆ ಲಕ್ಷ್ಯಸೇನ್ ಹಾಗೂ ಸಿದ್ಧಾರ್ಥ್ ಪ್ರತಾಪ್ ಅವರು ಪ್ರಕಾಶ್ ಪಡುಕೋಣೆ ಅಕಾಡೆಮಿಯವರಾಗಿದ್ದಾರೆ. ಆಕರ್ಷಿ ಕಶ್ಯಪ್, ಹೈದರಾಬಾದ್‌ನ ಸುಚಿತ್ರಾ ಅಕಾಡೆಮಿಯ ಆಟಗಾರ್ತಿ.
ವರ್ಷದಲ್ಲಿ 3 ಪ್ರಶಸ್ತಿ ಗೆದ್ದ ಅಶ್ವಿನಿ-ಶಿಖಾ
ಡಬಲ್ಸ್‌ನಲ್ಲಿ ದೇಶದ ನಂ.1 ಆಟಗಾರ್ತಿಯಾಗಿರುವ ರಾಜ್ಯದ ಅಶ್ವಿನಿ ಭಟ್ ಹಾಗೂ ಶಿಖಾ ಗೌತಮ್ ತಂಡದಲ್ಲಿ ಸ್ಥಾನ ಪಡೆಯದಿರುವ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿವೆ. ಫೆಬ್ರವರಿಯಲ್ಲಿ ಗುವಾಹಾಟಿಯಲ್ಲಿ ನಡೆದ ರಾಷ್ಟ್ರೀಯ ಬ್ಯಾಡ್ಮಿಂಟನ್ ಮಹಿಳಾ ಡಬಲ್ಸ್ ಟ್ರೋಫಿಯನ್ನು ಈ ಜೋಡಿ ಗೆದ್ದಿತ್ತು. ಇದು ಕರ್ನಾಟಕಕ್ಕೆ 20 ವರ್ಷಗಳ ಬಳಿಕ ಸಿಕ್ಕಿರುವ ಪ್ರಶಸ್ತಿ. ಇದಾದ ಬಳಿಕ ಜುಲೈಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಶ್ರೇಯಾಂಕ ಕೂಟದಲ್ಲೂ ಇದೇ ಜೋಡಿ ಪ್ರಶಸ್ತಿ ಗೆದ್ದಿತ್ತು. ಇತ್ತೀಚೆಗೆ ಪುಣೆಯಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಬ್ಯಾಡ್ಮಿಂಟನ್ ಕೂಟದಲ್ಲೂ ಗೆದ್ದಿತ್ತು. ಒಂದೇ ವರ್ಷದಲ್ಲಿ ಮೂರು ಪ್ರಶಸ್ತಿ ಜಯಿಸಿದ್ದರು.
ದಕ್ಷಿಣ ಏಷ್ಯನ್ ಬ್ಯಾಡ್ಮಿಂಟನ್ ಕುರಿತಾಗಿ ಆಟಗಾರರ ಆಯ್ಕೆ ನಡೆಸುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. -ರಾಜೇಶ್, ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಕಾರ್ಯದರ್ಶಿ
-ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.