Asia Badminton; ಬಂಗಾರದ ಕನಸು: ಥಾಯ್ಲೆಂಡ್ ಎದುರಾಳಿ
Team Udayavani, Feb 17, 2024, 11:28 PM IST
ಶಾ ಆಲಂ (ಮಲೇಷ್ಯಾ): ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವನಿತೆಯರು ಮೊದಲ ಸಲ ಫೈನಲ್‌ಗೆ ಲಗ್ಗೆ ಇರಿಸಿದ್ದು, ಪ್ರಶಸ್ತಿಯ ನಿರೀಕ್ಷೆ ಮೂಡಿಸಿದ್ದಾರೆ. 2016 ಮತ್ತು 2020ರಲ್ಲಿ ಭಾರತ ಕಂಚಿನ ಪದಕ ಜಯಿಸಿತ್ತು.
ಸೆಮಿಫೈನಲ್‌ನಲ್ಲಿ ಭಾರತ 2 ಬಾರಿಯ ಮಾಜಿ ಚಾಂಪಿಯನ್ ಜಪಾನ್ ವಿರುದ್ಧ 3-2 ಅಂತರದ ರೋಚಕ ಗೆಲುವು ಸಾಧಿಸಿತು.
ಸಿಂಧು ಪರಾಭವ
ಪಿ.ವಿ. ಸಿಂಧು ಜಪಾನ್‌ನ ಎಡಗೈ ಆಟಗಾರ್ತಿ ಅಯಾ ಒಹೊರಿ ವಿರುದ್ಧ 13-21, 20-22 ರಿಂದ ಸೋತರು.
ಮೊದಲ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ನಾಮಿ ಮತ್ಸುಯಮಾ – ಚಿಹಾರು ಶಿಡಾ ವಿರುದ್ಧ 21-17, 16-21, 22- 20 ಅಂತರದಿಂದ ಗೆದ್ದು ಸ್ಪರ್ಧೆಯನ್ನು 1-1 ಸಮಬಲಕ್ಕೆ ತಂದರು.
ದ್ವಿತೀಯ ಸಿಂಗಲ್ಸ್‌ನಲ್ಲಿ ನೊಜೊಮೊ ಒಕು ಹಾರಾ ವಿರುದ್ಧ ಅಶ್ಮಿತಾ ಚಾಲಿಹಾ 21-17, 21-14 ಅಂತರದ ಗೆಲುವು ಸಾಧಿಸಿದರು. ಭಾರತ 2-1ರಿಂದ ಮುನ್ನಡೆಯಿತು.
ತನಿಷಾ ಕ್ರಾಸ್ಟೊ ಗಾಯಾಳಾದ ಕಾರಣ ಪಿ.ವಿ. ಸಿಂಧು ಡಬಲ್ಸ್‌ನಲ್ಲಿ ಸೆಣಸುವುದು ಅನಿವಾರ್ಯವಾಯಿತು. ಅವರು ಹಾಗೂ ಅಶ್ವಿನಿ ಪೊನ್ನಪ್ಪ ಜತೆಗೂಡಿ ಕಣಕ್ಕಿಳಿದರು. ಆದರೆ ವಿಶ್ವದ 11ನೇ ರ್‍ಯಾಂಕಿಂಗ್ ಜೋಡಿಯಾದ ರೇನಾ ಮಿಯೌರಾ-ಅಯಾಕೊ ಸಕುರಾ ಮೊಟೊ ವಿರುದ್ಧ ಇವರ ಆಟ ನಡೆಯಲಿಲ್ಲ. ಜಪಾನೀ ಜೋಡಿ 21-14, 21-11ರಿಂದ ಗೆದ್ದು ಬಂದಿತು. ಸ್ಪರ್ಧೆ 2-2 ಸಮಬಲದಲ್ಲಿ ನೆಲೆಸಿತು.
ಈ ಹಂತದಲ್ಲಿ ಭಾರತಕ್ಕೆ ಸ್ಮರ ಣೀಯ ಗೆಲುವನ್ನು ತಂದಿತ್ತ ಹೆಗ್ಗಳಿಕೆ 17ರ ಹರೆಯದ ಅನ್ಮೋಲ್ ಖರಬ್ ಅವರಿಗೆ ಸಲ್ಲುತ್ತದೆ. ಅವರು ವಿಶ್ವದ 29ನೇ ರ್‍ಯಾಂಕಿಂಗ್ ಆಟಗಾರ್ತಿ ನತ್ಸುಕಿ ನಿದೈರಾ ವಿರುದ್ಧ 21-14, 21-18 ಅಂತರದ ಗೆಲುವು ಸಾಧಿಸಿ ಭಾರತವನ್ನು ಫೈನಲ್‌ಗೆ ಕೊಂಡೊಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.