ಏಷ್ಯಾ ಕಪ್ ಮುಂದೂಡಿಕೆ ಇಲ್ಲ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸ್ಪಷ್ಟನೆ
Team Udayavani, May 2, 2023, 8:00 AM IST
ಹೊಸದಿಲ್ಲಿ: ಏಷ್ಯಾ ಕಪ್ ಪಂದ್ಯಾವಳಿಯನ್ನು ಮುಂದೂಡುವ ಯಾವ ಪ್ರಸ್ತಾವವೂ ತನ್ನ ಮುಂದಿಲ್ಲ ಎಂಬುದಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸ್ಪಷ್ಟಪಡಿಸಿದೆ. ಇದಕ್ಕೆ ಸಂಬಂಧಿಸಿದ ಮಾಧ್ಯಮ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದೆ.
ಭಾರತ ತಂಡ ಪಾಕಿಸ್ಥಾನಕ್ಕೆ ತೆರಳದೇ ಇರುವುದರಿಂದ ಏಷ್ಯಾ ಕಪ್ ಪಂದ್ಯಾವಳಿಯನ್ನು ಮುಂದೂಡ ಲಾಗುವುದು, ಇದೇ ಸಮಯದಲ್ಲಿ ಪಾಕಿ ಸ್ಥಾನವನ್ನು ಹೊರಗಿರಿಸಿ ಇನ್ನೊಂದು ಪಂದ್ಯಾವಳಿಯನ್ನು ಆಯೋಜಿಸಲಾಗು ವುದು ಎಂಬುದಾಗಿ ಕೆಲವು ಮಾಧ್ಯ ಮಗಳಲ್ಲಿ ವರದಿ ಆಗಿತ್ತು. ಇದನ್ನು ಎಸಿಸಿ ತಳ್ಳಿಹಾಕಿದೆ.
ಏಕದಿನ ಮಾದರಿಯ 2023ರ ಏಷ್ಯಾ ಕಪ್ ಪಂದ್ಯಾವಳಿ ಪಾಕಿಸ್ಥಾನದ ಆತಿಥ್ಯದಲ್ಲಿ ನಡೆಯಬೇಕಿದೆ. ಆದರೆ ಪಾಕಿಸ್ಥಾನದಲ್ಲಿ ಭಾರತ ತಂಡ ಆಡದು ಎಂಬುದಾಗಿ ಬಿಸಿಸಿಐ ಕಾರ್ಯದರ್ಶಿಯೂ ಆಗಿರುವ ಎಸಿಸಿ ಚೇರ್ಮನ್ ಜಯ್ ಶಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ಥಾನ ಇನ್ನೊಂದು ಮಾರ್ಗೋ ಪಾಯವನ್ನೂ ಸೂಚಿಸಿತ್ತು. ಅದರಂತೆ ಏಷ್ಯಾ ಕಪ್ ಪಂದ್ಯಾವಳಿಯನ್ನು ಪಾಕಿ ಸ್ಥಾನದಲ್ಲೇ ನಡೆಸುವುದು, ಆದರೆ ಭಾರತ- ಪಾಕ್ ಮುಖಾಮುಖೀಯನ್ನು ತಟಸ್ಥ ತಾಣದಲ್ಲಿ (ದುಬಾೖ) ಏರ್ಪಡಿಸು ವುದು. ಆದರೆ ಬಿಸಿಸಿಐ ಇದಕ್ಕೂ ಒಪ್ಪುತ್ತಿಲ್ಲ. ಇಡೀ ಪಂದ್ಯಾವಳಿಯನ್ನೇ ಯುಎಇಗೆ ಸ್ಥಳಾಂತರಿಸಬೇಕೆಂದು ಬಿಸಿಸಿಐ ಪಟ್ಟು ಹಿಡಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
IFFI: ಪಾಪ್ ಸಂಗೀತಗಾರ ರಾಬಿ ವಿಲಿಯಮ್ಸ್ ಬೆಟರ್ ಮ್ಯಾನ್ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Mahaveera Hanuma: ಆಲ್ಬಂನಲ್ಲಿ ಹನುಮ ಗಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.