Asia Cup 2023: 17 ಮಂದಿಯ ಶ್ರೇಷ್ಠ ತಂಡ ಪ್ರಕಟಿಸಿದ ಭಾರತ; ಸ್ಟಾರ್ ಆಟಗಾರನಿಗಿಲ್ಲ ಸ್ಥಾನ
ಯುವ ಆಟಗಾರನಿಗೆ ಒಲಿದ ಸ್ಥಾನ
Team Udayavani, Aug 21, 2023, 1:41 PM IST
ನವದೆಹಲಿ: ಏಷ್ಯಾ ತಂಡಗಳ ಕ್ರಿಕೆಟ್ ಹಣಾಹಣೆ ಏಷ್ಯಾಕಪ್ 2023 ರ ಪಂದ್ಯಾವಳಿಗೆ ಸೋಮವಾರ (ಆ.21 ರಂದು) ಟೀಮ್ ಇಂಡಿಯಾದ ತಂಡ ಪ್ರಕಟಗೊಂಡಿದೆ.
ತಂಡದ ಪ್ರಕಟನೆಯ ವೇಳೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಮುಂದೆ ಕೆಲವು ಜಟಿಲ ಸವಾಲುಗಳಿತ್ತು. ಮುಖ್ಯವಾಗಿ ಸ್ಪಿನ್ನರ್ ಗಳ ವಿಚಾರದಲ್ಲಿ ಕೆಲ ಸವಾಲುಗಳಿತ್ತು. ಏಷ್ಯಾ ಪಿಚ್ ಗಳಲ್ಲಿ ಸ್ಪಿನ್ ಮೋಡಿ ಹೆಚ್ಚಾಗಿ ನಡೆಯುವುದರಿಂದ ಈ ಸಾಲಿನಲ್ಲಿ ಕುಲದೀಪ್, ಚಹಲ್, ಜಡೇಜ, ಅಕ್ಷರ್ ಪಟೇಲ್ ಮತ್ತು ಆರ್. ಅಶ್ವಿನ್ ರೇಸ್‌ನಲ್ಲಿದ್ದರು. ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ನಡುವೆ, ಹಾಗೆಯೇ ಕೆ.ಎಲ್. ರಾಹುಲ್-ಶ್ರೇಯಸ್ ಅಯ್ಯರ್ ನಡುವೆ ಬಲವಾದ ಸ್ಪರ್ಧೆ ಇತ್ತು.
ಈ ಎಲ್ಲದರ ಬಗ್ಗೆ ಗಮನ ಹರಿಸಿ 17 ಮಂದಿಯ ಶ್ರೇಷ್ಠ ತಂಡವನ್ನು ಏಷ್ಯಾಕಪ್ ಗಾಗಿ ಆಯ್ಕೆ ಸಮಿತಿ ಪ್ರಕಟಿಸಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಅಜಿತ್ ಅಗರ್ಕರ್ ಪ್ರತಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು. ಅಜಿತ್ ಅಗರ್ಕರ್ ತಂಡವನ್ನು ಘೋಷಿಸಿದರು.
ಏಷ್ಯಾಕಪ್ ಗಾಗಿ ಟೀಮ್ ಇಂಡಿಯಾ ತಂಡ:
ರೋಹಿತ್ ಶರ್ಮಾ(ನಾ) ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, (ಉಪ ನಾಯಕ) ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.
ಮುಖ್ಯವಾಗಿ ಯಜುವೇಂದ್ರ ಚಹಲ್ ಅವರನ್ನು ಹೊರಗಿಡಲಾಗಿದೆ. ಸಂಜು ಸ್ಯಾಮ್ಸನ್ ಅವರನ್ನು ಬ್ಯಾಕಪ್ ಪ್ಲೇಯರ್ ಆಗಿ ಇಡಲಾಗಿದೆ.
ಶ್ರೀಲಂಕಾವನ್ನು ಹೊರತುಪಡಿಸಿ, ಏಷ್ಯಾ ಕಪ್ 2023 ರಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಈಗಾಗಲೇ ತಮ್ಮ ತಂಡವನ್ನು ಪ್ರಕಟಿಸಿವೆ. ಈ ಬಾರಿ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ನಡೆಯಲಿದೆ. ಭಾರತ ಪಾಕ್ ಗೆ ಪ್ರಯಾಣಿಸಲು ನಿರಾಕರಿಸಿರುವ ಕಾರಣ, ಕೆಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ.
ಏಷ್ಯಾಕಪ್ ಆ.31 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ vs ನೇಪಾಳ ತಂಡಗಳು ಹೋರಾಟ ನಡೆಸಲಿವೆ. ಸೆ.20 ರಂದು ಭಾರತ vs ಪಾಕಿಸ್ತಾನ ತಂಡಗಳು ಶ್ರೀಲಂಕಾದ ಮೈದಾನದಲ್ಲಿ ಆಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
“ಟೋಲ್‌ಗಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.