ಮತ್ತೆ ನಾಯಕನಾದ ಧೋನಿ
Team Udayavani, Sep 25, 2018, 5:13 PM IST
ದುಬೈ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಏಷ್ಯಾ ಕಪ್ ನ ಸೂಪರ್ ಫೋರ್ ವಿಭಾಗದ ಕೊನೆಯ ಅಫಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ಧೋನಿ ಭಾರತದ ನಾಯಕತ್ವ ವಹಿಸಿದ್ದಾರೆ. ಭಾರತ ತಂಡ ಈಗಾಗಲೇ ಫೈನಲ್ ತಲುಪಿರುವುದರಿಂದ ತಂಡದಲ್ಲಿ ಹಲವಾರು ಬದಲಾವಣೆ ಮಾಡಲಾಗಿದ್ದು, ಸರಣಿಯಲ್ಲಿ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮ ಗೆ ವಿಶ್ರಾಂತಿ ನೀಡಲಾಗಿದೆ.
ಈ ಪಂದ್ಯದಲ್ಲಿ ಅಫಘಾನಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಪಂದ್ಯಕ್ಕೆ ದೀಪಕ್ ಚಾಹರ್ ಪಾದಾರ್ಪಣೆ ಮಾಡಿದರೆ, ಕನ್ನಡಿಗರಾದ ಲೋಕೇಶ್ ರಾಹುಲ್, ಮನೀಶ್ ಪಾಂಡೆ, ಬೌಲರ್ ಗಳಾದ ಸಿದ್ದಾರ್ಥ್ ಕೌಲ್, ಖಲೀಲ್ ಅಹ್ಮದ್, ಪುನರಾಯ್ಕೆಯಾಗಿದ್ದಾರೆ.
ಈ ಪಂದ್ಯಕ್ಕೆ ಭಾರತ ಹಲವರಿಗೆ ವಿಶ್ರಾಂತಿ ನೀಡಿದ್ದು, ನಾಯಕ ರೋಹಿತ್ ಶರ್ಮ, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಬುಮ್ರಾ, ಚಾಹಲ್ ಪಂದ್ಯದಲ್ಲಿ ಈ ಕಣಕ್ಕಿಳಿಯುತ್ತಿಲ್ಲ. ಅಫ್ಘಾನ್ ತಂಡ ಎರಡು ಬದಲಾವಣೆ ಮಾಡಿದೆ. ಜಾವೇದ್ ಅಹಮದಿ ಮತ್ತು ನಿಜಾಬುಲ್ಲಾ ಜದ್ರಾನ್ ಈ ಪಂದ್ಯ ಆಡುತ್ತಿದ್ದಾರೆ.
ತಂಡಗಳು
ಭಾರತ: ಮಹೇಂದ್ರ ಧೋನಿ ( ನಾಯಕ/ ವಿ.ಕೀ ), ರಾಹುಲ್, ಅಂಬಟಿ ರಾಯುಡು, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್, ಕೇದಾರ್ ಜಾದವ್, ರವೀಂದ್ರ ಜಡೇಜ, ದೀಪಕ್ ಚಾಹರ್, ಸಿದ್ದಾರ್ಥ ಕೌಲ್, ಕುಲದೀಪ್ ಯಾದವ್, ಖಲೀಲ್ ಅಹಮದ್.
ಅಫಘಾನಿಸ್ತಾನ: ಅಸ್ಗರ್ ಅಫ್ಘಾನ್ ( ನಾಯಕ), ಮೊಹಮ್ಮದ್ ಶೆಹಜಾದ್( ವಿ.ಕೀ), ಜಾವೆದ್ ಅಹಮದಿ, ರೆಹಮತ್ ಶಾ, ಹಶ್ತಾಮುಲ್ಲಾಹ್ ಶಹಿದಿ, ನಿಜಾಬುಲ್ಲಾಹ್ ಜದ್ರಾನ್, ಮೊಹಮ್ಮದ್ ನಬಿ, ರಶೀದ್ ಖಾನ್, ಗುಲ್ಬದಿನ್ ನೈಬ್, ಅಫ್ತಾಬ್ ಅಲಾಮ್, ಮುಜೀಬ್ ರೆಹಮಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.