ಕೋವಿಡ್ 19 ಕಳವಳ: ಏಷ್ಯಾ ಕಪ್ ಕ್ರಿಕೆಟ್ ನಡೆಯುವುದು ಡೌಟು
Team Udayavani, Mar 31, 2020, 3:42 PM IST
ಹೊಸದಿಲ್ಲಿ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಆಯೋಜಿಸುವ ಏಷ್ಯಾಕಪ್ ಟಿ20 ಕ್ರಿಕೆಟ್ ಕೂಟ ಕೋವಿಡ್-19 ವೈರಸ್ ನಿಂದಾಗಿ ಮುಂದಿನ ವರ್ಷಕ್ಕೆ ಮುಂದೂಡುವ ಸಾಧ್ಯತೆ ಹೆಚ್ಚಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಮುಂದಿನ ಆರು ತಿಂಗಳು ವಿಶ್ವದಲ್ಲಿ ಕ್ರೀಡಾ ಚಟುವಟಿಕೆಗಳು ನಡೆಯುವುದು ಅಸಾಧ್ಯ, ಹೀಗಾಗಿ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಏಷ್ಯಾಕಪ್ ನಡೆಯುವುದು ಅನುಮಾನ ಎಂದು ಬಿಸಿಸಿಐನ ಸದಸ್ಯರೊಬ್ಬರು ತಿಳಿಸಿದ್ದಾರೆ.
2018ರಲ್ಲಿ ಪಾಕಿಸ್ಥಾನದಲ್ಲಿ ಏಷ್ಯಾಕಪ್ ನಡೆಯುವುದು ಎಂದು ಘೋಷಣೆಯಾಗಿತ್ತು, ಆದರೆ ಭಾರತ ಭದ್ರತಾ ನೆಪವೊಡ್ಡಿ ಅಲ್ಲಿಗೆ ತೆರಳಲು ನಿರಾಕರಿಸಿತ್ತು. ಇದೀಗ ತಟಸ್ಥತಾಣ ದುಬೈನಲ್ಲಿ ಕೂಟ ನಡೆಸುವುದು ಎಂದು ಹೇಳಲಾಗಿದೆಯಾದರೂ ಖಚಿತಗೊಂಡಿಲ್ಲ.
ಭಾರತ ಸೇರಿದಂತೆ ಕೂಟದಲ್ಲಿ ಏಷ್ಯಾದ ಒಟ್ಟು 6 ರಾಷ್ಟ್ರಗಳು ಪಾಲ್ಗೊಳ್ಳಲಿವೆ. ಮಾ.3ರಂದು ಎಸಿಸಿ ಅಧಿಕೃತ ಸ್ಥಳವನ್ನು ಪ್ರಕಟಿಸುವುದಕ್ಕೆ ಸಭೆ ಕರೆದಿತ್ತು. ಆದರೆ ಕೋವಿಡ್-19 ವೈರಸ್ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.