Asia Cup Cricket: ಭಾರತದ ನಾರಿಯರಿಗೆ ಸಾಟಿ ಯಾರು!

ಶ್ರೀಲಂಕಾದಲ್ಲಿ ಶುಕ್ರವಾರ 9ನೇ ಟಿ20 ಏಷ್ಯಾ ಕಪ್‌ ಆರಂಭ

Team Udayavani, Jul 17, 2024, 7:05 AM IST

Asia Cup Cricket:

ಹೊಸದಿಲ್ಲಿ: ವನಿತೆಯರ 9ನೇ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಕ್ಷಣಗಣನೆ ಮೊದಲ್ಗೊಂಡಿದೆ. ನಾಡಿದ್ದು ಶುಕ್ರವಾರದಿಂದ ಮೊದಲ್ಗೊಂಡು ಜು. 28ರ ತನಕ ಶ್ರೀಲಂಕಾದ ಡಂಬುಲದಲ್ಲಿ ಟಿ20 ಮಾದರಿಯಲ್ಲಿ ಕೂಟ ನಡೆಯ ಲಿದೆ. ಈ ಹಿನ್ನೆಲೆಯಲ್ಲಿ ಹಿಂದಿನ 8 ಏಷ್ಯಾ ಕಪ್‌ಗ್ಳ ಕಿರು ಅವಲೋಕನ ಮಾಡಲಾಗಿದೆ. ಈ 8 ಕೂಟಗಳಲ್ಲಿ ಭಾರತ 7 ಸಲ ಚಾಂಪಿಯನ್‌ ಆಗುವ ಮೂಲಕ ಪ್ರಭುತ್ವ ಸ್ಥಾಪಿಸಿರುವುದು ವಿಶೇಷ.

2004: ಏಕದಿನ ಸರಣಿ

ವನಿತಾ ಏಷ್ಯಾ ಕಪ್‌ ಕ್ರಿಕೆಟ್‌ ಮೊದ ಲ್ಗೊಂಡಿದ್ದು 2004ರಲ್ಲಿ. ಆಗ ಇದು ಏಕದಿನ ಮಾದರಿಯಲ್ಲಿತ್ತು. ಪಾಲ್ಗೊಂ ಡಿದ್ದು ಎರಡೇ ತಂಡಗಳು, ಭಾರತ ಮತ್ತು ಆತಿಥೇಯ ಶ್ರೀಲಂಕಾ. ಇತ್ತಂಡಗಳು 5 ಪಂದ್ಯಗಳ ಸರಣಿಯನ್ನಾಡಿದವು. ಭಾರತ ಎಲ್ಲ 5 ಪಂದ್ಯಗಳನ್ನು ಜಯಿಸಿ ಏಷ್ಯಾ ಕಪ್‌ ಚಾಂಪಿಯನ್‌ ಎನಿಸಿತು.

2005-06: ಪಾಕ್‌ ಆತಿಥ್ಯ

ದ್ವಿತೀಯ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಆತಿಥ್ಯ ಪಾಕಿಸ್ಥಾನದ ಕರಾಚಿ ಪಾಲಾಯಿತು. ಪಾಕ್‌ ವನಿತಾ ತಂಡ ಕೂಡ ಪಾಲ್ಗೊಂಡಿತು.  ಫೈನಲ್‌ನಲ್ಲಿ ಶ್ರೀಲಂಕಾವನ್ನು 97 ರನ್ನುಗಳಿಂದ ಮಣಿಸಿದ ಭಾರತ ಮತ್ತೆ ಚಾಂಪಿಯನ್‌ ಆಗಿ ಮೂಡಿಬಂತು.

2006: ಭಾರತ ಹ್ಯಾಟ್ರಿಕ್‌

2006ರಲ್ಲಿ ಭಾರತ ಮೊದಲ ಸಲ ಆತಿಥ್ಯ ವಹಿಸಿತು. ಪಂದ್ಯಾವಳಿಯ ತಾಣ ಜೈಪುರ. ಹಿಂದಿನ ಮಾದರಿಯಲ್ಲೇ ನಡೆದ ಈ ಕೂಟದ ಫೈನಲ್‌ನಲ್ಲಿ ಮತ್ತೆ ಭಾರತ-ಶ್ರೀಲಂಕಾ ಎದುರಾದವು. ಭಾರತ 8 ವಿಕೆಟ್‌ಗಳಿಂದ ಗೆದ್ದು ಹ್ಯಾಟ್ರಿಕ್‌ ಸಾಧಿಸಿತು.

2008: ಭಾರತ ಅಜೇಯ

4ನೇ ವನಿತಾ ಏಷ್ಯಾ ಕಪ್‌ ಪಂದ್ಯಾವಳಿ 2008ರಲ್ಲಿ ಶ್ರೀಲಂಕಾದಲ್ಲಿ ಏರ್ಪಟ್ಟಿತು. ಫೈನಲ್‌ನಲ್ಲಿ ಬಲಿಷ್ಠ ಭಾರತಕ್ಕೆ ಮತ್ತೆ ಶ್ರೀಲಂಕಾ ಎದುರಾಯಿತು. ಭಾರತ 177 ರನ್ನುಗಳ ಬೃಹತ್‌ ಅಂತರದಿಂದ ಗೆದ್ದು ಸತತ 4ನೇ ಸಲ ಟ್ರೋಫಿ ಮೇಲೆ ಹಕ್ಕು ಚಲಾಯಿಸಿತು.

2012: ಟಿ20 ಮಾದರಿ

ಇಲ್ಲಿಯ ತನಕ ಏಕದಿನ ಮಾದರಿ ಯಲ್ಲಿ ನಡೆಯುತ್ತಿದ್ದ ಏಷ್ಯಾ ಕಪ್‌ ಪಂದ್ಯಾವಳಿ, 2012ರಿಂದ ಟಿ20ಗೆ ಪರಿವರ್ತನೆಗೊಂಡಿತು. ಇದರ ಆತಿಥ್ಯ ವಹಿಸಿದ್ದು ಚೀನದ ಗ್ವಾಂಗ್‌ಝೂ. ಇಲ್ಲಿಯೂ ಭಾರತವೇ ಕಪ್‌ ಎತ್ತಿತು. “ಫಾರ್‌ ಎ ಚೇಂಜ್‌’ ಎಂಬಂತೆ, ಫೈನಲ್‌ನಲ್ಲಿ ಭಾರತಕ್ಕೆ ಎದುರಾದ ತಂಡ ಶ್ರೀಲಂಕಾ ಅಲ್ಲ, ಪಾಕಿಸ್ಥಾನ. ಗೆಲುವಿನ ಅಂತರ 19 ರನ್‌.

2016: ಡಬಲ್‌ ಹ್ಯಾಟ್ರಿಕ್‌

6ನೇ ಏಷ್ಯಾ ಕಪ್‌ ಪಂದ್ಯಾವಳಿಯನ್ನು ಥಾಯ್ಲೆಂಡ್‌ನ‌ಲ್ಲಿ ಆಡಲಾಯಿತು. ಮತ್ತೂಮ್ಮೆ ಭಾರತ-ಪಾಕಿಸ್ಥಾನ ತಂಡ ಗಳು ಫೈನಲ್‌ನಲ್ಲಿ ಎದುರಾದವು. 17 ರನ್ನುಗಳಿಂದ ಗೆದ್ದ ಭಾರತ ಪ್ರಶಸ್ತಿಗಳ ಡಬಲ್‌ ಹ್ಯಾಟ್ರಿಕ್‌ ಸಾಧಿಸಿತು.

2018: ಬಾಂಗ್ಲಾ ವಿಕ್ರಮ

ಮಲೇಷ್ಯಾದಲ್ಲಿ 7ನೇ ಟೂರ್ನಿ ಏರ್ಪಟ್ಟಿತು. 6 ಬಾರಿಯ ಚಾಂಪಿ ಯನ್‌ ಭಾರತಕ್ಕೆ ಇಲ್ಲಿ ಮೊದಲ ಸಲ ಸೋಲಿನ ಬಿಸಿ ತಟ್ಟಿತು. ಭಾರತ ತಂಡ ಫೈನಲಿಗೇನೋ ಬಂದಿತ್ತು. ಆದರೆ ಎದುರಾಳಿ ಬಾಂಗ್ಲಾದೇಶದ ಕೈಯಲ್ಲಿ 3 ವಿಕೆಟ್‌ ಸೋಲನುಭವಿಸಿ ಪ್ರಶಸ್ತಿಯಿಂದ ವಂಚಿತವಾಯಿತು.

2022: ಮತ್ತೆ ಭಾರತ

ಕೋವಿಡ್‌ ಕಾರಣ 2020ರ ಟೂರ್ನಿ ನಡೆಯಲಿಲ್ಲ. 2022ರಲ್ಲಿ ಪಂದ್ಯಾವಳಿ ಮುಂದುವರಿಯಿತು. ಬಾಂಗ್ಲಾದೇಶ ಆತಿಥ್ಯ ವಹಿಸಿತ್ತು. ಆದರೆ ಹಾಲಿ ಚಾಂಪಿಯನ್‌ ಆಗಿದ್ದ ಬಾಂಗ್ಲಾ ಫೈನಲಿಗೇ ಬರಲಿಲ್ಲ. ಮತ್ತೆ ಭಾರತ-ಶ್ರೀಲಂಕಾ ಎದುರಾದವು. 8 ವಿಕೆಟ್‌ಗಳಿಂದ ಗೆದ್ದ ಭಾರತ 7ನೇ ಸಲ ಕಪ್‌ ಎತ್ತಿತು.

ಟಾಪ್ ನ್ಯೂಸ್

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Mahalingapura: ಶಾಸಕರ ವಿರುದ್ದ ಮುಂದುವರೆದ ಪುರಸಭೆ ಸದಸ್ಯರ ಹೋರಾಟ…

Mahalingapura: ಶಾಸಕರ ವಿರುದ್ದ ಮುಂದುವರೆದ ಪುರಸಭೆ ಸದಸ್ಯರ ಹೋರಾಟ…

Reliance-Disney Merger: ರಿಲಯನ್ಸ್‌ – ಡಿಸ್ನಿ ಒಪ್ಪಂದಕ್ಕೆ ಸಿಸಿಐ ಹಸಿರು ನಿಶಾನೆ

Reliance-Disney Merger: ರಿಲಯನ್ಸ್‌ – ಡಿಸ್ನಿ ಒಪ್ಪಂದಕ್ಕೆ ಸಿಸಿಐ ಹಸಿರು ನಿಶಾನೆ

CCBCCB ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಸೆರೆ

CCB ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಸೆರೆ

Biopic: ಬೆಳ್ಳಿತೆರೆ ಮೇಲೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಜೀವನಾಧಾರಿತ ಚಿತ್ರ

Biopic: ಬೆಳ್ಳಿತೆರೆ ಮೇಲೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಜೀವನಾಧಾರಿತ ಚಿತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jay-shah

ICC Chairman;ಅಡೆತಡೆಗಳನ್ನು ಕಿತ್ತುಹಾಕಲು ಪ್ರಯತ್ನ, ಟೆಸ್ಟ್ ಕ್ರಿಕೆಟ್‌ಗೆ ಆದ್ಯತೆ:ಜಯ್ ಶಾ

KL Rahul; ಲಕ್ನೋ ನಾಯಕತ್ವ ತೊರೆದ ರಾಹುಲ್‌?

KL Rahul; ಲಕ್ನೋ ನಾಯಕತ್ವ ತೊರೆದ ರಾಹುಲ್‌?

Paralympics Games Paris 2024

Paralympics; ಪ್ಯಾರಿಸ್‌ ನಲ್ಲಿ ಪ್ಯಾರಾಲಿಂಪಿಕ್ಸ್‌ ಕಲರವ| 17ನೇ ಆವೃತ್ತಿಯ ಕ್ರೀಡಾಕೂಟ

US Open 2024: Victory for the defending champions

US Open 2024: ಹಾಲಿ ಚಾಂಪಿಯನ್ನರಿಗೆ ಗೆಲುವು

Maharaja Trophy: Shimoga hat-trick of wins

Maharaja Trophy: ಶಿವಮೊಗ್ಗ ಗೆಲುವಿನ ಹ್ಯಾಟ್ರಿಕ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

Perdoor: ಅಕ್ರಮ ಗಣಿಗಾರಿಕೆ ಹಿಟಾಚಿ ವಶಕ್ಕೆ; ಪ್ರಕರಣ ದಾಖಲು

Perdoor: ಅಕ್ರಮ ಗಣಿಗಾರಿಕೆ ಹಿಟಾಚಿ ವಶಕ್ಕೆ; ಪ್ರಕರಣ ದಾಖಲು

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

Siddapura ಕುಳ್ಳುಂಜೆ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆ

Siddapura ಕುಳ್ಳುಂಜೆ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆ

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.