ಮರಳಿ ಪ್ರಭುತ್ವ ಸ್ಥಾಪಿಸಲು ಭಾರತ ಯತ್ನ
Team Udayavani, Oct 11, 2017, 11:36 AM IST
ಢಾಕಾ: ವಿಶ್ವ ಮಟ್ಟದಲ್ಲಿ ಅಲ್ಲವಾದರೂ ಕನಿಷ್ಠ ಏಶ್ಯ ಮಟ್ಟದಲ್ಲಾದರೂ ತನ್ನ ಹಾಕಿ ಪ್ರಭು ತ್ವ ವನ್ನು ಮರಳಿ ಸ್ಥಾಪಿಸಲು ಭಾರತದ ಮುಂದೆ ಅವಕಾಶವೊಂದು ತೆರೆದುಕೊಂಡಿದೆ. ಬುಧವಾರದಿಂದ ಢಾಕಾದಲ್ಲಿ 10ನೇ ಏಶ್ಯ ಕಪ್ ಹಾಕಿ ಪಂದ್ಯಾವಳಿ ಆರಂಭವಾಗಲಿದ್ದು, ದಶಕದ ಬಳಿಕ ಭಾರತ ಚಾಂಪಿಯನ್ ಎನಿಸಿಕೊಳ್ಳುವ ಗುರಿ ಯೊಂದಿಗೆ ಕಣಕ್ಕಿಳಿಯಲಿದೆ. “ಎ’ ವಿಭಾಗದಲ್ಲಿ ರುವ 2 ಬಾರಿಯ ಚಾಂಪಿಯನ್ ಭಾರತ, ಬುಧವಾರದ ಮೊದಲ ಮುಖಾಮುಖೀಯಲ್ಲಿ ಜಪಾನ್ ವಿರುದ್ಧ ಸೆಣಸಲಿದೆ.
ಕಳೆದೆರಡು ಬಾರಿಯ ಚಾಂಪಿಯನ್, ಗರಿಷ್ಠ 4 ಸಲ ಪ್ರಶಸ್ತಿ ಗೆದ್ದಿರುವ ದಕ್ಷಿಣ ಕೊರಿಯಾ, 3 ಬಾರಿಯ ಚಾಂಪಿಯನ್ ಪಾಕಿಸ್ಥಾನ ಕಣದಲ್ಲಿರುವ ಅಪಾಯಕಾರಿ ತಂಡಗಳು. ಭಾರತ ಮತ್ತು ಪಾಕಿಸ್ಥಾನ ಒಂದೇ ವಿಭಾಗದಲ್ಲಿದ್ದು, ರವಿವಾರ ಸಂಜೆ ಹೋರಾಟಕ್ಕಿಳಿಯಲಿವೆ. ಶುಕ್ರವಾರ ಭಾರತ ಆತಿಥೇಯ ಬಾಂಗ್ಲಾದೇಶವನ್ನು ಎದುರಿಸಲಿದೆ.
ನೂತನ ಕೋಚ್‌ಗೆ ಅಗ್ನಿಪರೀಕ್ಷೆ ಈ ಪಂದ್ಯಾವಳಿ ಭಾರತದ ಹಾಕಿಪಟುಗಳಿಗೆಷ್ಟು ಮುಖ್ಯವೋ, ನೂತನ ಕೋಚ್ ಶೋರ್ಡ್ ಮರೀನ್ ಅವರಿಗೂ ಅಷ್ಟೇ ಮುಖ್ಯ. ರೊಲ್ಯಾಂಟ್ ಓಲ್ಟ್ಮನ್ಸ್ ಅವರನ್ನು ಈ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಹಾಲೆಂಡಿನ 43ರ ಹರೆಯದ ಮರೀನ್ ಅವರನ್ನು ಕೋಚ್ ಆಗಿ ನೇಮಿಸಲಾಗಿದೆ. ಕಳೆದ 4 ವರ್ಷಗಳ ಅವಧಿ ಯಲ್ಲಿ ಓಲ್ಟ್ಮನ್ಸ್ “ಏಶ್ಯನ್ ಪವರ್‌ಹೌಸ್’ ಭಾರತವನ್ನು ಉತ್ತಮ ರೀತಿಯಲ್ಲೇ ಪಳಗಿಸಿದ್ದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿದ್ದ ಭಾರತವನ್ನು 6ನೇ ಸ್ಥಾನಕ್ಕೆ ಏರಿಸಿದ್ದರು.
ನಿಜಕ್ಕಾದರೆ ಭಾರತ ಕಳೆದ ಸಲವೇ ಚಾಂಪಿಯನ್ ಆಗುವುದರಲ್ಲಿತ್ತು. ಮಲೇಶ್ಯದ ಇಪೋದಲ್ಲಿ ನಡೆದ ಕೂಡದಲ್ಲಿ ಫೈನಲ್ ತನಕ ಸಾಗಿ ಅಲ್ಲಿ ದಕ್ಷಿಣ ಕೊರಿಯಾಕ್ಕೆ 3-4ರಿಂದ ಶರಣಾಯಿತು. ಇದೂ ಸೇರಿದಂತೆ ಗರಿಷ್ಠ 5 ಸಲ ರನ್ನರ್ ಅಪ್ ಆದ ಭಾರತ ಪ್ರಶಸ್ತಿಯನ್ನು ಸ್ವಲ್ಪದರಲ್ಲೇ ಕಳೆದುಕೊಂಡಿತ್ತು.
ಆರಂಭಿಕ ಪಂದ್ಯದ ಸವಾಲು
ಈ ಬಾರಿ ಮನ್‌ಪ್ರೀತ್ ಸಿಂಗ್ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. “ಆರಂಭಿಕ ಪಂದ್ಯ ಯಾವತ್ತೂ ಸವಾಲಿನದ್ದಾಗಿರುತ್ತದೆ. ಆದರೆ ಈ ಸವಾಲಿಗೆ ಸಜ್ಜಾಗಿದ್ದೇವೆ’ ಎಂದಿದ್ದಾರೆ ಮನ್‌ಪ್ರೀತ್.
ಜಪಾನ್ ವಿರುದ್ಧ ಭಾರತ ಕೊನೆಯ ಸಲ “ಸುಲ್ತಾನ್ ಅಜ್ಲಾನ್ ಷಾ ಕಪ್’ ಪಂದ್ಯಾವಳಿಯಲ್ಲಿ ಆಡಿತ್ತು. ಭಾರೀ ಹೋರಾಟದ ಬಳಿಕ ಭಾರತ 4-3 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದೇ ಕೂಟದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಜಪಾನ್ 3-2 ಗೋಲುಗಳಿಂದ ಆಘಾತವಿಕ್ಕಿದ್ದನ್ನು ಮರೆಯು ವಂತಿಲ್ಲ. ಕ್ಷಿಪ್ರಗತಿಯಲ್ಲಿ ಪ್ರಗತಿ ಕಾಣುತ್ತಿರುವ ಏಶ್ಯನ್ ತಂಡವೆಂಬ ಹೆಗ್ಗಳಿಕೆ ಜಪಾನ್‌ನದ್ದು.
ಈ ಕೂಟಕ್ಕಾಗಿ ಭಾರತ ಯುವ ಆಟಗಾರರ ಮೇಲೆ ಹೆಚ್ಚಿನ ವಿಶ್ವಾಸವಿರಿಸಿದೆ. ಆಕಾಶ್ ಚಿಕ್ತೆ, ಸೂರಜ್ ಕರ್ಕೇರ ಗೋಲ್‌ಕೀಪರ್‌ಗಳಾಗಿ ಮುಂದುವರಿದಿದ್ದಾರೆ. ಡಿಫೆಂಡರ್‌ಗಳಾದ ಹರ್ಮನ್‌ಪ್ರೀತ್ ಸಿಂಗ್, ಸುರೇಂದರ್ ಕುಮಾರ್ ತಂಡಕ್ಕೆ ಮರಳಿದ್ದಾರೆ. ಸ್ಟಾರ್ ಆಟಗಾರರದ ಆಕಾಶ್‌ದೀಪ್ ಸಿಂಗ್, ಮಾಜಿ ನಾಯಕ ಸರ್ದಾರ್ ಸಿಂಗ್, ಸತಿºàರ್ ಸಿಂಗ್, ಎಸ್.ವಿ. ಸುನೀಲ್ ಕೂಡ ತಂಡಕ್ಕೆ ವಾಪಸಾಗಿದ್ದಾರೆ. ಕರ್ನಾಟಕದ ಸುನೀಲ್ ಉಪನಾಯಕರಾಗಿದ್ದಾರೆ.
ಮುಂದಿನ 15 ತಿಂಗಳಲ್ಲಿ ನಡೆಯುವ ವರ್ಲ್ಡ್ ಲೀಗ್ ಫೈನಲ್, ಏಶ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ವಿಶ್ವಕಪ್‌ಗೆ ಈ ಪಂದ್ಯಾವಳಿಯೊಂದು ದಿಕ್ಸೂಚಿಯಾಗಲಿರುವು ದರಿಂದ ಎಲ್ಲ ತಂಡಗಳೂ ಶಕ್ತಿಮೀರಿ ಹೋರಾಟ ನಡೆಸುವುದರಲ್ಲಿ ಅನುಮಾನವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.