ಏಶ್ಯ ಕಪ್‌ ಹಾಕಿ ಸೂಪರ್‌ ಫೋರ್‌ ಪಾಕ್‌ ವಿರುದ್ಧ ಭಾರತ 4-0 ಪರಾಕ್ರಮ


Team Udayavani, Oct 22, 2017, 6:55 AM IST

PTI10_21_2017_000132B.jpg

ಢಾಕಾ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು ಸೂಪರ್‌-4 ಹಂತದ ಮುಖಾಮುಖೀಯಲ್ಲೂ ಬಗ್ಗುಬಡಿದ ಭಾರತ ಏಶ್ಯ ಕಪ್‌ ಹಾಕಿ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ಅಜೇಯವಾಗಿ ಲಗ್ಗೆ ಇರಿಸಿದೆ.  ಅಂತಿಮ ಕ್ವಾರ್ಟರ್‌ನಲ್ಲಿ ಮಿಂಚಿನ ಆಟವಾಡಿದ ಭಾರತ 4-0 ಅಂತರದಿಂದ ಪಾಕಿಸ್ಥಾನದ ಕತೆ ಮುಗಿಸಿತು. ಲೀಗ್‌ ಹಂತದಲ್ಲಿ ಭಾರತ 3-1 ಗೋಲುಗಳಿಂದ ಪಾಕಿಗೆ ಆಘಾತವಿಕ್ಕಿತ್ತು.

ರವಿವಾರ ಸಂಜೆ 5.30ಕ್ಕೆ ಪ್ರಶಸ್ತಿ ಸಮರ ಆರಂಭವಾಗಲಿದೆ. ಸೂಪರ್‌-4 ಹಂತದ ಅಗ್ರಸ್ಥಾನಿಯಾದ ಭಾರತ, ಇಲ್ಲಿ ದ್ವಿತೀಯ ಸ್ಥಾನ ಪಡೆದ ತಂಡವನ್ನು ಫೈನಲ್‌ನಲ್ಲಿ ಎದುರಿಸಲಿದೆ. ದಕ್ಷಿಣ ಕೊರಿಯಾ ಅಥವಾ ಮಲೇಶ್ಯಕ್ಕೆ ಈ ಅವಕಾಶ ಲಭಿಸಲಿದೆ.

ಶನಿವಾರದ ಪ್ರತಿಕೂಲ ಹವಾಮಾನದಿಂದಾಗಿ ಭಾರತ-ಪಾಕಿಸ್ಥಾನ ಪಂದ್ಯ ಒಂದೂವರೆ ಗಂಟೆ ವಿಳಂಬವಾಗಿ ಮೊದಲ್ಗೊಂಡಿತು. ಇದಕ್ಕೂ ಮೊದಲೇ ಮುಗಿಯಬೇಕಿದ್ದ ದಕ್ಷಿಣ ಕೊರಿಯಾ-ಮಲೇಶ್ಯ ಪಂದ್ಯ ಭಾರತ-ಪಾಕ್‌ ಮುಖಾಮುಖೀಯ ಬಳಿಕ ಆರಂಭಗೊಂಡಿತು.

ಅರ್ಧ ಹಾದಿ ಕ್ರಮಿಸುವ ತನಕ ಎರಡೂ ತಂಡಗಳಿಗೆ ಗೋಲು ಮರೀಚಿಕೆಯೇ ಆಯಿತು. 3ನೇ ಕ್ವಾರ್ಟರ್‌ನಲ್ಲಿ ಭಾರತ ಗೋಲಿನ ಖಾತೆ ತೆರೆದು, ಕೊನೆಯ ಕ್ವಾರ್ಟರ್‌ನಲ್ಲಿ ಮತ್ತೆ 3 ಗೋಲು ಸಿಡಿಸಿ ಪಾರಮ್ಯ ಮೆರೆಯಿತು. ಸತಿºàರ್‌ ಸಿಂಗ್‌ (39ನೇ ನಿಮಿಷ), ಹರ್ಮನ್‌ಪ್ರೀತ್‌ ಸಿಂಗ್‌ (51ನೇ ನಿಮಿಷ), ಲಲಿತ್‌ ಉಪಾಧ್ಯಾಯ (52ನೇ ನಿಮಿಷ) ಮತ್ತು ಗುರ್ಜಂತ್‌ ಸಿಂಗ್‌ (57ನೇ ನಿಮಿಷ) ಭಾರತದ ಗೋಲುವೀರರು.

ಗೋಲಿಗಾಗಿ ಹೋರಾಟ
ಲೀಗ್‌ ಹಂತಕ್ಕಿಂತಲೂ ತೀವ್ರ ಪೈಪೋಟಿಯಿಂದ ಕೂಡಿದ ಈ ಪಂದ್ಯದಲ್ಲಿ ಎರಡೂ ತಂಡಗಳು ಗೋಲಿಗಾಗಿ ಹೋರಾಡುತ್ತಲೇ ಇದನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಯಶಸ್ವಿ ಹೋರಾಟ ಪ್ರದರ್ಶಿಸುತ್ತ ಬಂದವು. ಭಾರತಕ್ಕೆ ಪಂದ್ಯದ 2ನೇ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿತಾದರೂ ಇದಕ್ಕೆ ಪಾಕ್‌ ಮೇಲ್ಮನವಿ ಸಲ್ಲಿಸಿತು. ಇದು ಪಾಕ್‌ ಪರವಾಗಿಯೇ ಬಂತು. 7ನೇ ನಿಮಿಷದಲ್ಲಿ ಪಾಕಿಗೆ ಪೆನಾಲ್ಟಿ ಕಾರ್ನರ್‌ ಒಂದು ಲಭಿಸಿತಾದರೂ ಗೋಲಿ ಚಿಕ್ತೆ ಇದನ್ನು ತಡೆಯುವಲ್ಲಿ ಯಶಸ್ವಿಯಾದರು.

ಹೀಗೆ ಅರ್ಧ ಹಾದಿಯ ತನಕ ಎರಡೂ ತಂಡಗಳ ಆಟಗಾರರು ತೀವ್ರ ಪೈಪೋಟಿಯ ಆಟವನ್ನು ಪ್ರದರ್ಶಿಸುತ್ತ ತಮಗೆ ಲಭಿಸಿದ ಎಲ್ಲ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಕೈಚೆಲ್ಲುತ್ತ ಹೋದರು. 28ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಸ್ವಲ್ಪದರಲ್ಲೇ ಖಾತೆ ತೆರೆಯುವುದರಿಂದ ವಂಚಿತರಾದರು. ಹೀಗಾಗಿ 2ನೇ ಕ್ವಾರ್ಟರ್‌ ಮುಗಿದರೂ ಗೋಲಿನ ದರ್ಶನವಾಗಲೇ ಇಲ್ಲ.

ತೃತೀಯ ಕ್ವಾರ್ಟರ್‌ನಲ್ಲಿ ಭಾರತ ಗೋಲಿನ ಖಾತೆ ತೆರೆಯುವ ಮೂಲಕ ತನ್ನ ಹಿಡಿತವನ್ನು ಬಿಗಿಗೊಳಿಸಿತು. 39ನೇ ನಿಮಿಷದಲ್ಲಿ ಸತಿºàರ್‌ ಸಿಂಗ್‌ ಬಲ ಭಾಗದಿಂದ ಬಾರಿಸಿದ ಚೆಂಡು ಗೋಲುಪಟ್ಟಿಯ ಬಾಯಿಯ ತನಕ ಬಂತು. ಅಲ್ಲಿಯೇ ಇದ್ದ ಗುರ್ಜಂತ್‌ ಸಿಂಗ್‌ ಚೆಂಡನ್ನು ಪಡೆದು ಗೋಲುಪಟ್ಟಿಗೆ ತಳ್ಳಿದಂತೆ ಕಂಡುಬಂತು. ಆದರೆ ಸತಿºàರ್‌ ಹೊಡೆತಕ್ಕೇ ಚೆಂಡು ಪಾಕ್‌ ಗೋಲಿಯನ್ನು ವಂಚಿಸಿತು. ಚೆಂಡು ನೆಟ್‌ ಸೇರುವ ಮುನ್ನ ಕೊನೆಯ ಸಲ ಸ್ಟಿಕ್‌ ತಗುಲಿಸಿದ ಸತಿºàರ್‌ಗೆ ಗೋಲಿನ ಶ್ರೇಯಸ್ಸು ಸಂದಾಯವಾಯಿತು.

41ನೇ ನಿಮಿಷದಲ್ಲಿ ಭಾರತಕ್ಕೆ ಮತ್ತೂಂದು ಪೆನಾಲ್ಟಿ ಕಾರ್ನರ್‌ ಹಾದಿ ತೆರೆಯಲ್ಪಟ್ಟಿತು. ಆದರೆ ಹರ್ಮನ್‌ಪ್ರೀತ್‌ ಸಿಂಗ್‌ ಎಡವಿದರು. 3ನೇ ಕ್ವಾರ್ಟರ್‌ ತನಕ ಭಾರತ ಈ ಏಕೈಕ ಗೋಲಿನ ಮುನ್ನಡೆಯನ್ನು ಕಾಯ್ದುಕೊಂಡಿತು.

ಭಾರತದ ಮಿಂಚಿನ ಆಟ
4ನೇ ಕ್ವಾರ್ಟರ್‌ನಲ್ಲಿ ಭಾರತ ಮಿಂಚಿನ ಗತಿಯ ಆಟವಾಡಿತು. ಆರಂಭದಲ್ಲೇ ವರುಣ್‌ ಗೋಲು ಗಳಿಕೆಯ ಉತ್ತಮ ಅವಕಾಶವೊಂದನ್ನು ಕಳೆದುಕೊಂಡರೂ, 48ನೇ ಹಾಗೂ 49ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ಗಳು ವ್ಯರ್ಥವಾದರೂ ಮುಂದಿನ ಹಂತದಲ್ಲಿ ಭಾರತ ಎದುರಾಳಿ ಮೇಲಿನ ಹಿಡಿತವನ್ನು ಬಿಗಿಗೊಳಿಸಿತು. 6 ನಿಮಿಷಗಳ ಅಂತರದಲ್ಲಿ 3 ಗೋಲು ಬಾರಿಸಿ ವಿಜೃಂಭಿಸಿತು.

ಟಾಪ್ ನ್ಯೂಸ್

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

PUNJAB

Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

Agarwal

Vijay Hazare Trophy; ಮಯಾಂಕ್‌ ಅಗರ್ವಾಲ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Team India; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

TeamIndia; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

ನಿತೀಶ್‌ ಕುಮಾರ್‌ ಆಕರ್ಷಕ ಶತಕ; ಫಾಲೋಆನ್‌ ಅವಮಾನದಿಂದ ಪಾರು

INDvAUS: ನಿತೀಶ್‌ ಕುಮಾರ್‌ ಆಕರ್ಷಕ ಶತಕ; ಫಾಲೋಆನ್‌ ಅವಮಾನದಿಂದ ಪಾರು

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

saavu

ಮಂಜನಾಡಿ ಗ್ಯಾಸ್‌ ಸ್ಫೋ*ಟ ಪ್ರಕರಣ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

1-tallur

ತಲ್ಲೂರು: ಪಿಕಪ್‌- ಕಾರು ಢಿಕ್ಕಿ

1-gooli

Gangolli:ಅರ್ಧ ಗಂಟೆಗೂ ಹೆಚ್ಚು ಭೀತಿ ಮೂಡಿಸಿದ ಗೂಳಿ ಕಾಳಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.