Asia Cup, 2023 ; ಪಾಕ್ ಗೆ ಗೆಲ್ಲಲು 267 ರನ್ ಗಳ ಸವಾಲು ಮುಂದಿಟ್ಟ ಟೀಮ್ ಇಂಡಿಯಾ
ತಂಡಕ್ಕೆ ಆಧಾರವಾದ ಇಶಾನ್ ಕಿಶನ್ , ಹಾರ್ದಿಕ್ ಪಾಂಡ್ಯ ಸಮಯೋಚಿತ ಆಟ
Team Udayavani, Sep 2, 2023, 7:53 PM IST
ಪಲ್ಲೆಕೆಲೆ (ಶ್ರೀಲಂಕಾ): ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಶನಿವಾರ ನಡೆಯುತ್ತಿರುವ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ ಆರಂಭಿಕ ಆಘಾತದಿಂದ ಹೊರಬಂದು, ಇಶಾನ್ ಕಿಶನ್ , ಹಾರ್ದಿಕ್ ಪಾಂಡ್ಯ ಸಮಯೋಚಿತ ಆಟದ ನೆರವಿನಿಂದ ಬದ್ಧ ಎದುರಾಳಿ ಪಾಕಿಸ್ಥಾನಕ್ಕೆ ಗೆಲ್ಲಲು 267 ರನ್ ಗಳ ಸವಾಲನ್ನು ಮುಂದಿಟ್ಟಿದೆ. ಭಾರತ ತಂಡ 48.5 ಓವರ್ ಗಳಲ್ಲಿ 266 ರನ್ ಗಳಿಗೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.
“ಎ’ ವಿಭಾಗದ ಲೀಗ್ ಹಂತದ ಜಿದ್ದಾಜಿದ್ದಿ ಪಂದ್ಯಕ್ಕೆ ಆರಂಭದಲ್ಲಿ ಮಳೆಯಿಂದ ಅಡಚಣೆ ಯಾಯಿತು. ಭಾರತ ತಂಡ 15 ರನ್ ಆಗಿದ್ದ ವೇಳೆ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಶರ್ಮಾ 11ರನ್ (22 ಎಸೆತ) ಗಳಿಸಿ ಶಾಹೀನ್ ಅಫ್ರಿದಿ ಅವರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರೂ. ಆ ಬಳಿಕ ಭರವಸೆಯ ವಿರಾಟ್ ಕೊಹ್ಲಿ ಅವರು ತಂಡ 27 ರನ್ ಗಳಿಸಿದ್ದ ವೇಳೆ ಔಟಾದರು. 4 ರನ್ ಗಳಿಗೆ ನಿರ್ಗಮಿಸಿ ಭಾರಿ ನಿರಾಶರಾದರು. ಆರಂಭಿಕರಾಗಿ ಬಂದ ಶುಭಮನ್ ಗಿಲ್ 32 ಎಸೆತಗಳಲ್ಲಿ 10 ರನ್ ಗಳಿಸಿದರು.ಶ್ರೇಯಸ್ ಅಯ್ಯರ್ 14 ರನ್ ಗಳಿಗೆ ಔಟಾದರು.
ಆ ಬಳಿಕ ತಂಡಕ್ಕೆ ಆಧಾರವಾದ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಭರ್ಜರಿ ಜತೆಯಾಟವಾಡಿದರು. ತಂಡ ಗೌರವಯುತ ಮೊತ್ತ ಕಲೆಹಾಕಲು ಕಾರಣರಾದರು. ಇಶಾನ್ ಕಿಶನ್ 82(81ಎಸೆತ) ರನ್ ಗಳಿಸಿದ್ದ ವೇಳೆ ಹ್ಯಾರಿಸ್ ರೌಫ್ ಎಸೆದ ಚೆಂಡನ್ನು ಬಾಬರ್ ಅಜಮ್ ಅವರ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಶತಕದ ಕನಸು ಕಂಡಿದ್ದ ಅಭಿಮಾನಿಗಳು ಭಾರಿ ನಿರ್ಶರಾಗಬೇಕಾಯಿತು. ಪಾಂಡ್ಯ ತಾಳ್ಮೆಯ ಅಮೋಘ ಆಟವಾಡಿದರು. 87ರನ್ (90ಎಸೆತ) ಶಾಹೀನ್ ಅಫ್ರಿದಿ ಎಸೆದ ಚೆಂಡನ್ನು ಅಘಾ ಸಲ್ಮಾನ್ ಕೈಗಿತ್ತು ನಿರ್ಗಮಿಸಿದರು. ಮೊದಲ ಅಂತಾರಾಷ್ಟ್ರೀಯ ಏಕದಿನ ಶತಕ ಸಿಡಿಸುವ ಅವರ ಕನಸು ನುಚ್ಚುನೂರಾಯಿತು.
ರವೀಂದ್ರ ಜಡೇಜಾ 14, ಕೊನೆಯಲ್ಲಿ ಬಂದ ಜಸ್ಪ್ರೀತ್ ಬುಮ್ರಾ16 ರನ್ ಗಳಿಸಿದರು. ಪಾಕ್ ಪರ ಬಿಗಿ ದಾಳಿ ನಡೆಸಿದ ಶಾಹೀನ್ ಅಫ್ರಿದಿ 4 ವಿಕೆಟ್ ಪಡೆದು ಭಾರತದ ಬ್ಯಾಟ್ಸ್ ಮ್ಯಾನ್ ಗಳನ್ನು ಕಾಡಿದರು. ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ತಲಾ 3 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.