ಏಷ್ಯಾ ಕಪ್ 2022 ವೇಳಾಪಟ್ಟಿ ಪ್ರಕಟ: ಇಂಡೋ – ಪಾಕ್ ಮುಖಾಮುಖಿ ಯಾವಾಗ ?
Team Udayavani, Aug 2, 2022, 6:23 PM IST
ದುಬೈ: ಯುಎಇನಲ್ಲಿ ನಡೆಯಲಿರುವ 15 ಆವೃತ್ತಿಯ ಏಷ್ಯಾ ಕಪ್ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಗಿದೆ.
ಆಗಸ್ಟ್ 27 ರಿಂದ ಸೆಪ್ಟಂಬರ್ 11ರವರೆಗೆ ಏಷ್ಯಾ ಟಿ20 ಮಾದರಿಯಲ್ಲಿ ನಡೆಯಲಿದ್ದು, ಈ ಬಾರಿ ಶ್ರೀಲಂಕಾದಲ್ಲಿ ನಡೆಯಲಿದ್ದ ಪಂದ್ಯಾವಳಿಗಳು ಅಲ್ಲಿನ ರಾಜಕೀಯ ಬಿಕ್ಕಟ್ಟಿನ ಪರಿಣಾಮ ಯುಎಇನಲ್ಲಿ ನಡೆಯಲಿದೆ.
ಟೂರ್ನಿಯಲ್ಲಿ ಒಟ್ಟು 6 ತಂಡಗಳಿರುತ್ತವೆ. ಇದರಲ್ಲಿ ತಲಾ ಮೂರು ತಂಡಗಳಂತೆ ಎ,ಬಿ ಗ್ರೂಪ್ ಗಳಾಗಿ ಮಾಡಲಾಗುತ್ತದೆ. ಈಗಾಗಲೇ 5 ತಂಡಗಳ ನೇರವಾಗಿ ಟೂರ್ನಿಗೆ ಪ್ರವೇಶ ಪಡೆದುಕೊಂಡಿದೆ. ಇನ್ನು 1 ತಂಡ ಆಗಸ್ಟ್ 21 ರಿಂದ ನಡೆಯುವ ಅರ್ಹತಾ ಪಂದ್ಯದಿಂದ ಗೆದ್ದು ಪ್ರಧಾನ ಸುತ್ತಿಗೆ ತೇರ್ಗಡೆ ಆಗಬೇಕಿದೆ.
ಭಾರತ,ಪಾಕಿಸ್ತಾನ,ಬಾಂಗ್ಲಾದೇಶ,ಅಪಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಪ್ರಧಾನ ಸುತ್ತಿನಲ್ಲಿವೆ.
ಯುಎಇ, ಒಮನ್, ನೇಪಾಳ, ಹಾಂಕಾಂಗ್ ತಂಡಗಳು ಅರ್ಹತಾ ಪಂದ್ಯದಲ್ಲಿ ಸೆಣಸಾಟ ನಡೆಸಿ, ಒಂದು ತಂಡ ಮಾತ್ರ ಪ್ರಧಾನ ಸುತ್ತಿಗೆ ಬರುತ್ತದೆ.
ವೇಳಾಪಟ್ಟಿ: ಇಂದು ಏಷ್ಯಾ ಕಪ್ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಗಿದೆ. ಅವು ಹೀಗಿವೆ:
ಆಗಸ್ಟ್ 27:- ಶ್ರೀಲಂಕಾ vs ಅಫ್ಘಾನಿಸ್ತಾನ ( ಸ್ಥಳ : ದುಬೈ)
ಆಗಸ್ಟ್ 28 :- ಭಾರತ vs ಪಾಕಿಸ್ತಾನ ( ಸ್ಥಳ : ದುಬೈ)
ಆಗಸ್ಟ್ 30 :- ಬಾಂಗ್ಲಾದೇಶ vs ಅಫ್ಘಾನಿಸ್ತಾನ ( ಸ್ಥಳ : ಶಾರ್ಜಾ)
ಆಗಸ್ಟ್ 31 :- ಭಾರತ vs ಕ್ವಾಲಿಫೈಯರ್ ತಂಡ ( ಸ್ಥಳ : ದುಬೈ)
ಸೆಪ್ಟೆಂಬರ್ 1 :- ಶ್ರೀಲಂಕಾ vs ಬಾಂಗ್ಲಾದೇಶ ( ಸ್ಥಳ : ದುಬೈ)
ಸೆಪ್ಟೆಂಬರ್ 2 :- ಪಾಕಿಸ್ತಾನ vs ಕ್ವಾಲಿಫೈಯರ್ ತಂಡ ( ಸ್ಥಳ : ಶಾರ್ಜಾ)
ಎ,ಬಿ ಗ್ರೂಪ್ ನಲ್ಲಿ ಟಾಪ್ ಮಾಡಿದ ತಂಡದ ಸೂಪರ್ 4 ನಲ್ಲಿ ಮುಖಾಮುಖಿ ಆಗಲಿದ್ದು, ಸೆ.3 ರಿಂದ ಈ ಪಂದ್ಯಗಳು ಆರಂಭಗೊಳ್ಳಲಿದೆ. ಸೆ. 11 ರಂದು ದುಬೈಯಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನದಂತೆ ರಾತ್ರಿ 7:30 ಕ್ಕೆ ಪ್ರಸಾರವಾಗಲಿದೆ.
The wait is finally over as the battle for Asian supremacy commences on 27th August with the all-important final on 11th September.
The 15th edition of the Asia Cup will serve as ideal preparation ahead of the ICC T20 World Cup. pic.twitter.com/QfTskWX6RD
— Jay Shah (@JayShah) August 2, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.