ಮುಶಫಿಕರ್  ರಹೀಂ ಸೂಪರ್‌ ಶತಕ: ಬಾಂಗ್ಲಾಗೆ ಸುಲಭ ಜಯ  


Team Udayavani, Sep 16, 2018, 11:53 AM IST

rahim.jpg

ಢಾಕಾ: ಮುಶಫಿಕರ್ ರಹೀಂ ಅವರ ಅಮೋಘ ಶತಕದಿಂದಾಗಿ ಆತಿಥೇಯ ಬಾಂಗ್ಲಾದೇಶವು ಏಶ್ಯಕಪ್‌ ಕ್ರಿಕೆಟ್‌ ಕೂಟದ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ತಂಡದೆದುರು 261 ರನ್‌ ಗಳಿಸಿ ಆಲೌಟಾಗಿದೆ.ಶ್ರೀಲಂಕಾ ಕೇವಲ 124 ರನ್ ಗೆ ಅಲ್ ಔಟ್ ಆಯಿತು. ಈ ಮೂಲಕ ಬಾಂಗ್ಲಾ 137ರನ್ ಗಳ ಭರ್ಜರಿ ಗೆಲುವು ಸಾಧಿಸಿತು. 

ಲಸಿತ ಮಾಲಿಂಗ ದಾಳಿಗೆ ಆರಂಭಿಕ ಕುಸಿತ ಕಂಡಿದ್ದ ಬಾಂಗ್ಲಾದೇಶವನ್ನು ಮುಶಫಿಕರ್ ರಹೀಂ ಆಧರಿಸಿದರು. ಅವರು ಮತ್ತು ಮೊಹಮ್ಮದ್‌ ಮಿಥುನ್‌ ಮೂರನೇ ವಿಕೆಟಿಗೆ ಸೇರಿಸಿದ ಶತಕದ ಜತೆಯಾಟದಿಂದಾಗಿ ಬಾಂಗ್ಲಾ ಚೇತರಿಸುವಂತಾಯಿತು. ಅಂತಿಮವಾಗಿ 49.3 ಓವರ್‌ಗಳಲ್ಲಿ 261 ರನ್‌ ಗಳಿಸಿ ಆಲೌಟಾಯಿತು.

ಮಾಲಿಂಗ ಮಾರಕ ದಾಳಿ
ದೀರ್ಘ‌ ಸಮಯದ ಬಳಿಕ ತಂಡಕ್ಕೆ ಮರಳಿದ್ದ ಲಸಿತ ಮಾಲಿಂಗ ಆರಂಭದಲ್ಲಿ ಬಾಂಗ್ಲಾ ಮೇಲೆ ಮಾರಕ ದಾಳಿ ಸಂಘಟಿಸಿದರು. ಆರಂಭಿಕ ತಮಿಮ್‌ ಇಕ್ಬಾಲ್‌ ಅವರನ್ನು ಗಾಯಗೊಳಿಸಿದ್ದ ಅವರು 1 ರನ್‌ ಗಳಿಸುವಷ್ಟರಲ್ಲಿ ಎರಡು ವಿಕೆಟ್‌ ಹಾರಿಸಿದ್ದರು. ಈ ಆಘಾತದ ನಡುವೆಯೂ ಮುಶ್ಫಿàಕರ್‌ ರಹೀಂ ಎಚ್ಚರಿಕೆಯ ಆಟವಾಡಿದರು. ಅವರು ಮತ್ತು ಮಿಥುನ್‌ ಶ್ರೀಲಂಕಾ ದಾಳಿಯನ್ನು ಸಮರ್ಥವಾಗಿ ಎದುರಿಸಿ ಇನ್ನಿಂಗ್ಸ್‌ ಕಟ್ಟತೊಡಗಿದರು. ಮೂರನೇ ವಿಕೆಟಿಗೆ 131 ರನ್ನುಗಳ ಜತೆಯಾಟ ನಡೆಸಿದ ಅವರಿಬ್ಬರು ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು.

ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದ ಈ ಜೋಡಿಯನ್ನು ಮತ್ತೆ ಮಾಲಿಂಗ ಮುರಿಯುವಲ್ಲಿ ಯಶಸ್ವಿಯಾದರು. 63 ರನ್‌ ಗಳಿಸಿದ ಮೊಹಮ್ಮದ್‌ ಮಿಥುನ್‌ ಅವರು ಮಾಲಿಂಗ ಅವರ ಮೂರನೇ ಬಲಿಯಾದರು. ಆಬಳಿಕ ಬಾಂಗ್ಲಾ ಮತ್ತೆ ಹಠಾತ್‌ ಕುಸಿಯತೊಡಗಿತು. 142 ರನ್‌ ತಲುಪುವಷ್ಟರಲ್ಲಿ ತಂಡ ಇನ್ನೆರಡು ವಿಕೆಟ್‌ ಕಳೆದುಕೊಂಡಿತು. ಆಬಳಿಕ ಮುಶ್ಫಿàಕರ್‌ ಬಾಲಂಗೋಚಿಗಳ ನೆರವು ಪಡೆದು ತಂಡದ ಮೊತ್ತ ಏರಿಸಲು ಪ್ರಯತ್ನಿಸಿದರು. ವೈಯಕ್ತಿಕವಾಗಿ ಶತಕ ಪೂರೈಸಿದ ಬಳಿಕ ಸ್ಫೋಟಕವಾಗಿ ಆಡಿದರು. 

9ನೇ ವಿಕೆಟ್‌ ಪತನದ ಬಳಿಕ ಕೈಗೆ ಗಾಯಗೊಂಡಿದ್ದ ತಮಿಮ್‌ ಇಕ್ಬಾಲ್‌ ಮತ್ತೆ ಆಡಲು ಬಂದರು. ಅವರು ಮುಶಫಿಕರ್ ಜತೆ ಅಂತಿಮ ವಿಕೆಟಿಗೆ 32 ರನ್‌ ಪೇರಿಸಿದರು. ಅಂತಿಮ ಓವರಿನ ಮೊದಲೆರಡು ಎಸೆತವನ್ನು ಸಿಕ್ಸರ್‌ಗೆ ತಳ್ಳಿದ್ದ ಮುಶಫಿಕರ್ ಮೂರನೇ ಎಸೆತದಲ್ಲಿ ಔಟಾದರು. 150 ಎಸೆತ ಎದುರಿಸಿದ ಅವರು 14 ರನ್‌ ಗಳಿಸಿ ಔಟಾದರು. 11 ಬೌಂಡರಿ ಮತ್ತು 4 ಸಿಕ್ಸರ್‌ ಸಿಡಿಸಿ ರಂಜಿಸಿದರು.

ತಮಿಮ್‌ ಇಕ್ಬಾಲ್‌ಗೆ ಗಾಯ
ಢಾಕಾ:
ಬಾಂಗ್ಲಾದೇಶ ಆರಂಭಿಕ ತಮಿಮ್‌ ಇಕ್ಬಾಲ್‌ ಅವರು ಶ್ರೀಲಂಕಾ ವಿರುದ್ಧ ಶನಿವಾರ ನಡೆದ ಏಶ್ಯಕಪ್‌ ಕ್ರಿಕೆಟ್‌ ಕೂಟದ ಆರಂಭಿಕ ಪಂದ್ಯದ ವೇಳೆ ಎಡಕೈಗೆ ಗಾಯ ಮಾಡಿಕೊಂಡಿದ್ದಾರೆ. ಕಡಿಮೆಪಕ್ಷ ಆರು ವಾರ ವಿಶ್ರಾಂತಿ ಪಡೆಯಬೇಕಾಗಿದೆ. ಅವರು ಬಾಂಗ್ಲಾ ಇನ್ನಿಂಗ್ಸ್‌ನ ಕೊನೆಯಲ್ಲಿ ಆಡಲು ಬಂದಿದ್ದರು. ಅವರು ಈ ಸರಣಿಯಲ್ಲಿ ಆಡುವುದು ಅನುಮಾನವಾಗಿದೆ.
ದ್ವಿತೀಯ ಓವರ್‌ ವೇಳೆ ಸುರಂಗ ಲಕ್ಮಲ್‌ ಅವರ ಎಸೆತವೊಂದು ಇಕ್ಬಾಲ್‌ ಅವರ ಎಡ ಕೈಗೆ ಬಡಿದಿತ್ತು. ತತ್‌ಕ್ಷಣವೇ ಫಿಸಿಯೋ ಅವರಿಗೆ ಬರುವಂತೆ ಸನ್ನೆ ಮಾಡಿದರು. ಆಬಳಿಕ ಆಸ್ಪತ್ರೆಗೆ ಕೊಂಡೊಯ್ದು ಸ್ಕ್ಯಾನ್‌ ನಡೆಸಲಾಯಿತು. ತೋರು ಬೆರಳಿನ ಬದಿ ಕ್ರ್ಯಾಕ್‌ ಆಗಿರುವುದು ಸ್ಕ್ಯಾನ್‌ನಲ್ಲಿ ಗೋಚರಿಸಿದ್ದು ವಿಶ್ರಾಂತಿ ಪಡೆಯುವಂತೆ  ಸೂಚಿಸಲಾಗಿದೆ. ಇಕ್ಬಾಲ್‌ ಗಾಯಗೊಂಡಿರುವುದು ಬಾಂಗ್ಲಾಕ್ಕೆ ಬಲವಾದ ಹೊಡೆತ ಬಿದ್ದಿದೆ.

ಟಾಪ್ ನ್ಯೂಸ್

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Prashant Kishor

Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

supreme-Court

Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್‌ ರದ್ದು: ಸುಪ್ರೀಂ ಕೋರ್ಟ್‌

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

HDK–Siddu

Alleged: ಇದು 60 ಪರ್ಸೆಂಟ್‌ ಲಂಚದ ಕಾಂಗ್ರೆಸ್‌ ಸರಕಾರ: ಎಚ್‌.ಡಿ.ಕುಮಾರಸ್ವಾಮಿ ಆರೋಪ

Kalpeni Island: ಲಕ್ಷದ್ವೀಪದಲ್ಲಿ ಯುರೋಪ್‌ನ ಯುದ್ಧ ನೌಕೆ ಅವಶೇಷ ಪತ್ತೆ!

Kalpeni Island: ಲಕ್ಷದ್ವೀಪದಲ್ಲಿ ಯುರೋಪ್‌ನ ಯುದ್ಧ ನೌಕೆ ಅವಶೇಷ ಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Hazare Trophy : ಕರ್ನಾಟಕಕ್ಕೆ ನೇರ ಕ್ವಾ. ಫೈನಲ್‌ ಟಿಕೆಟ್‌

Vijay Hazare Trophy : ಕರ್ನಾಟಕಕ್ಕೆ ನೇರ ಕ್ವಾ. ಫೈನಲ್‌ ಟಿಕೆಟ್‌

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Prashant Kishor

Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

1

Udupi: ಇನ್‌ಸ್ಟಾಗ್ರಾಂ ಲಿಂಕ್‌ ಬಳಸಿ 12.46 ಲಕ್ಷ ರೂ. ಕಳೆದುಕೊಂಡ ಯುವತಿ

4

Bajpe: ಗುರುಪುರ ಪೇಟೆಯ ಹಲವೆಡೆ ಕಳವು

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.