ಹಾಲಿ ಚಾಂಪಿಯನ್ ಜಪಾನ್ಗೆ ಸತತ 2ನೇ ಜಯ
Team Udayavani, Jul 25, 2017, 7:10 AM IST
ಬೆಂಗಳೂರು: ಉದ್ಯಾನನಗರಿಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಮಹಿಳಾ ಬಾಸ್ಕೆಟ್ಬಾಲ್ ಕೂಟದ 2ನೇ ದಿನ ಆಸ್ಟ್ರೇಲಿಯಾ, ಜಪಾನ್ ಹಾಗೂ ನ್ಯೂಜಿಲೆಂಡ್ ತಂಡಗಳು ಕ್ರಮವಾಗಿ ಗೆಲುವು ಕಂಡಿವೆ.
ಸೋಮವಾರ ನಡೆದ ಪಂದ್ಯದಲ್ಲಿ ಜಪಾನ್ ಹಾಗೂ ಆಸೀಸ್ ತಂಡಗಳು ಸತತ 2ನೇ ಗೆಲುವು ಪಡೆದವು ಎನ್ನುವುದು ದಿನದ ವಿಶೇಷತೆಯಾಗಿತ್ತು.
ಹಾಲಿ ಚಾಂಪಿಯನ್ ಜಪಾನ್ಗೆ 2ನೇ ಜಯ: ಕೊರಿಯಾ ವಿರುದಟಛಿದ ನಡೆದ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಪಾನ್ 70-56 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು. ಇದು ಕೂಟದಲ್ಲಿ ಜಪಾನ್ ಆಟ ಗಾರ್ತಿಯರಿಗೆ ಸಿಕ್ಕಿದ ಸತತ 2ನೇ ಗೆಲುವು. ಮೊದಲ ಪಂದ್ಯದಲ್ಲಿ ಫಿಲಿಪ್ಪೀನ್ಸ್ ವಿರುದ್ಧ ಜಪಾನ್ ಭರ್ಜರಿ ಗೆಲುವು ಸಾಧಿಸಿದ್ದನ್ನು ಸ್ಮರಿಸಬಹುದು.
ಎಂದಿನ ಉತ್ಸಾಹದ ಆಟ ಪ್ರದರ್ಶಿಸಿದ ಜಪಾನ್ ತಂಡಕ್ಕೆ ಆಟಗಾರ್ತಿ ಯರಾದ ಮೊಯೆಕೊ, ಮನಾಮಿ, ಮಾಕಿ, ಅಸಾಮಿ ಯೊಶಿದಾ ನೆರವಾದರು.ಲೀಗ್ ಹಂತದ ಕೊನೆ ಪಂದ್ಯದಲ್ಲಿ ಜಪಾನ್ ತಂಡವು ಫಿಲಿಪ್ಪೀನ್ಸ್ಅನ್ನು ಎದುರಿಸಲಿದೆ.
ಫಿಲಿಪ್ಪೀನ್ಸ್ ವಿರುದ್ಧ ಗೆದ್ದ ಆಸೀಸ್:
ಆಸ್ಟ್ರೇಲಿಯಾ ವಿರುದ್ಧ ಗೆದ್ದ ಫಿಲಿಪ್ಪೀನ್ಸ್ 107-65 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು. ಆಸೀಸ್ ಆಟಗಾರ್ತಿಯರಿಗೂ ಇದು ಕೂಟದಲ್ಲಿ ಸತತ 2ನೇ ಗೆಲುವು ಎನ್ನುವುದು ವಿಶೇಷ. ಮೊದಲ ಅವಧಿಯಲ್ಲಿ ಆಸ್ಟ್ರೇಲಿಯಾ 68-23 ಅಂಕಗಳಿಂದ ಮುಂದಿತ್ತು. ಆದರೆ 2ನೇ ಅವಧಿಯಲ್ಲಿ ಫಿಲಿಪ್ಪೀನ್ಸ್ ಮಿಂಚಿನ ಆಟ ಪ್ರದರ್ಶಿಸಿತು. 39-42 ಅಂತರದ ದಿಟ್ಟ ಆಟ ಪ್ರದರ್ಶಿಸಿತು.
ಆದರೆ ಆಸೀಸ್ ಕೈನಿಂದ ಗೆಲುವು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಆಸೀಸ್ ಪ್ರಬಲ ಜಪಾನ್ ತಂಡವನ್ನು ಎದುರಿಸಲಿದೆ.
ರಿಪಬ್ಲಿಕ್ ಕೊರಿಯಾಗೆ ಶಾಕ್ ನೀಡಿದ
ಕಿವೀಸ್: ನ್ಯೂಜಿಲೆಂಡ್ ತಂಡ 71-50 ಅಂಕಗಳ ಅಂತರದಿಂದ ರಿಪಬ್ಲಿಕ್ ಕೊರಿಯಾ ತಂಡವನ್ನು ಮಣಿಸಿತು. ನ್ಯೂಜಿಲೆಂಡ್ ತಂಡದ ಪರ ಜಿಲಿಯಾನ್ ಹಾರ್ಮೊನ್ 23 ಅಂಕಪಡೆದು ತಂಡದ ಗೆಲುವಿನಲ್ಲಿ ಅತ್ಯಧಿಕ ಅಂಕ ಪಡೆದ ಆಟಗಾರ್ತಿ ಎನಿಸಿಕೊಂಡರು. ಕಿವೀಸ್ಗೆ ಇದು ಮೊದಲ ಗೆಲುವು. ಮೊದಲ ಪಂದ್ಯದಲ್ಲಿ ಚೀನಾ ತಂಡದ ವಿರುದ್ಧ ನ್ಯೂಜಿಲೆಂಡ್ ಸೋಲು ಕಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.