ಏಶ್ಯನ್ ಏರ್‌ಗನ್: ಭಾರತ ನಂ. 1
Team Udayavani, Apr 1, 2019, 6:16 AM IST
ಹೊಸದಿಲ್ಲಿ: 10 ಮೀ. ಏರ್ ರೈಫಲ್ ಸ್ಪರ್ಧೆಯ ವೈಯಕ್ತಿಕ, ತಂಡ ವಿಭಾಗದಲ್ಲಿ ಭಾರತೀಯ ಶೂಟರ್ 4 ಚಿನ್ನದೊಂದಿಗೆ ಕ್ಲೀನ್‌ಸಿÌಪ್ ಸಾಧನೆ ಮಾಡುವ ಮೂಲಕ 12ನೇ “ಏಶ್ಯನ್ ಏರ್‌ಗನ್ ಚಾಂಪಿಯನ್‌ಶಿಪ್’ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಈವರೆಗಿನ 14 ಚಿನ್ನದ ಪದಕಗಳಲ್ಲಿ 12ನ್ನು ಗೆದ್ದಿರುವ ಭಾರತವೀಗ 4 ಬೆಳ್ಳಿ, 2 ಕಂಚು ಸೇರಿದಂತೆ 18 ಪದಕಗಳಿಂದ ಸಿಂಗಾರಗೊಂಡಿದೆ.
ಸ್ಪರ್ಧೆಯ 5ನೇ ದಿನವಾದ ರವಿವಾರ 10 ಮೀ. ಏರ್ ರೈಫಲ್ ವಿಭಾಗದ ಪುರುಷರ ಮತ್ತು ವನಿತೆಯ ವೈಯಕ್ತಿಕ ವಿಭಾಗದಲ್ಲಿ ಅನುಕ್ರಮವಾಗಿ ದಿವ್ಯಾಂಶ್ ಸಿಂಗ್, ಇಳವೇನಿಲ್ ವಲರಿವನ್ ಸ್ವರ್ಣ ಪದಕದಿಂದ ಸಂಭ್ರಮಿಸಿದರು. ಇದೇ ಸ್ಪರ್ಧೆಯ ಪುರುಷರ ಮತ್ತು ವನಿತೆಯರ ತಂಡ ವಿಭಾಗಗಳಲ್ಲೂ ಭಾರತ ಚಿನ್ನದ ಪದಕ ಜಯಿಸಿತು.
ಪುರುಷರ ವಿಭಾಗದ ಅರ್ಹತಾ ಸುತ್ತಿನಲ್ಲಿ 628.2 ಅಂಕಗಳಿಸಿದ ದಿವ್ಯಾಂಶ್ ಅಗ್ರಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದರು. ರವಿ ಕುಮಾರ್ (626.3) ಮತ್ತು ದೀಪಕ್ ಕುಮಾರ್ (626.2) ಕೂಡ ಫೈನಲ್‌ಗೆ
ಕಾಲಿಟ್ಟರು. ಫೈನಲ್‌ನಲ್ಲಿ 249.7 ಅಂಕ ಪಡೆದ ದಿವ್ಯಾಂಶ್ ಚಿನ್ನ ಗೆದ್ದರು. ತಂಡ ವಿಭಾಗದಲ್ಲಿ ಭಾರತ 1880.7 ಅಂಕಗಳಿಂದ ಕೊರಿಯವನ್ನು (1862.3) ಹಿಂದಿಕ್ಕಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು.
ಇಳವೇನಿಲ್‌ಗೆ ಮೊದಲ ಚಿನ್ನ
ವನಿತಾ ವಿಭಾಗದ ಫೈನಲ್‌ನಲ್ಲಿ ಇಳವೇನಿಲ್ 250.5 ಅಂಕ ಸಂಪಾದಿಸಿ ಚಿನ್ನಕ್ಕೆ ಮುತ್ತಿಕ್ಕಿದರು. ಫೈನಲ್ ಪ್ರವೇಶಿಸಿದ್ದ ಭಾರತ ಉಳಿದಿಬ್ಬರು ಶೂಟರ್‌ಗಳಾದ ಅಪೂರ್ವಿ ಚಾಂಡೇಲ 4ನೇ ಮತ್ತು ಮೇಘನಾ ಸಜ್ಜನರ್ 7ನೇ ಸ್ಥಾನಕ್ಕೆ ತೃಪ್ತಿಪಟ್ಟರು ತಂಡ ವಿಭಾಗದ ಫೈನಲ್‌ನಲ್ಲಿ ಇಳವೇನಿಲ್, ಅಪೂರ್ವಿ ಚಾಂಡೇಲ ಮತ್ತು ಮೇಘನಾ ಸಜ್ಜನರ್ ಅವರನ್ನೊಳಗೊಂಡ ಭಾರತ ತಂಡ 1878.6 ಅಂಕಗಳೊಂದಿಗೆ ಚಿನ್ನ ಗೆದ್ದು ಸಂಭ್ರಮಿಸಿತು.
ಸೋಮವಾರ ಜೂನಿಯರ್ ವಿಭಾಗದ 10 ಮೀ. ಏರ್ ರೈಫಲ್ ಸ್ಪರ್ಧೆಯೊಂದಿಗೆ ಈ ಕೂಟ ಕೊನೆಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Squash event: ಭಾರತದ ಅನಾಹತ್,ಮಲೇಷ್ಯಾದ ಚಂದರನ್ ಚಾಂಪಿಯನ್
Pro Kabaddi: ಬೆಂಗಳೂರು ಬುಲ್ಸ್ ಗೆ 18ನೇ ಸೋಲು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.