ಏಶ್ಯನ್ ಏರ್‌ಗನ್ ಚಾಂಪಿಯನ್‌ಶಿಪ್ ಮನು, ಸೌರಭ್ ಸ್ವರ್ಣ ಸಾಧನೆ
Team Udayavani, Mar 30, 2019, 6:00 AM IST
ಹೊಸದಿಲ್ಲಿ: “ಏಶ್ಯನ್ ಏರ್‌ಗನ್ ಚಾಂಪಿಯನ್‌ಶಿಪ್’ನಲ್ಲಿ ಯುವ ಶೂಟರ್ ಮನು ಭಾಕರ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಚೈನೀಸ್ ತೈಪೆಯಲ್ಲಿ ನಡೆಯುತ್ತಿರುವ ಈ ಕೂಟದ 3ನೇ ದಿನವಾದ ಶುಕ್ರವಾರ ಭಾರತಕ್ಕೆ 2 ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಒಲಿದಿವೆ.
ವನಿತಾ ವಿಭಾಗದ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಪುರುಷರ ತಂಡ ವಿಭಾಗದಲ್ಲಿ ಸೌರಭ್ ಚೌಧರಿ ಅವರನ್ನೊಳಗೊಂಡ ಭಾರತ ತಂಡ ಸ್ವರ್ಣ ಪದಕಕ್ಕೆ ಕೊರಳೊಡ್ಡಿದೆ. ಮಿಕ್ಸೆಡ್ ವಿಭಾಗದಲ್ಲಿ ನಿರಾಸೆ ಮೂಡಿಸಿದ್ದ ಅಭಿಷೇಕ್ ವರ್ಮ ವೈಯಕ್ತಿಕ ವಿಭಾಗದ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು.
ಭಾರತದ ವನಿತಾ ಪಿಸ್ತೂಲ್ ತಂಡ ಕಂಚಿನ ಪದಕ ಜಯಿಸಿದೆ. ಈ ಮೂಲಕ ಕೂಟದಲ್ಲಿ ಒಟ್ಟು 5 ಚಿನ್ನ, 3 ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿರುವ ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ. ಮಂಗಳವಾರದ ವರೆಗೆ ಈ ಕೂಟ ನಡೆಯುವುದರಿಂದ ಭಾರತದ ಶೂಟರ್ ಇನ್ನಷ್ಟು ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.
ಮನು ಅತ್ಯುತ್ತಮ ಪ್ರದರ್ಶನ
ಅರ್ಹತಾ ಸುತ್ತಿನಲ್ಲಿ 600 ಅಂಕಗಳಲ್ಲಿ 575 ಅಂಕ ಗಳಿಸಿದ ಮನು ಭಾಕರ್ ದ್ವಿತೀಯ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದರು. ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಮನು 239 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರು. ಹಾಂಕಾಂಗ್‌ನ ಶಿಂಗ್ ಹೊ ಚಿಂಗ್ ಬೆಳ್ಳಿ (237.9), ಯುಎಇಯ ವಫಾ ಅಲಾಲಿ ಕಂಚಿನ ಪದಕ ಜಯಿಸಿದರು. ಇದೇ ಸ್ಪರ್ಧೆಯಲ್ಲಿದ್ದ ಭಾರತದ ಮತ್ತೋರ್ವ ಸ್ಪರ್ಧಿ ಶ್ರೀ ನಿವೇತಾ 6ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ತಂಡ ವಿಭಾಗದ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚು ಒಲಿಯಿತು.
ಪುರುಷರಿಗೆ ಒಂದೇ ಪದಕ
ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಮೂವರು ಶೂಟರ್‌ಗಳು ಫೈನಲ್ ಪ್ರವೇಶಿಸಿದರೂ ಪದಕ ಜಯಿಸಿದ್ದು ಒಬ್ಬರು ಮಾತ್ರ. ಅರ್ಹತಾ ಸುತ್ತಿನಲ್ಲಿ ಸೌರಭ್ ಚೌಧರಿ 587 ಅಂಕ ಪಡೆದು ಅಗ್ರಸ್ಥಾನಿಯಾಗಿದ್ದರು. ರವೀಂದರ್ 4ನೇ ಸ್ಥಾನ (578 ಅಂಕ) ಮತ್ತು ಅಭಿಷೇಕ್ ವರ್ಮ 5ನೇ ಸ್ಥಾನ ಪಡೆದು (577 ಅಂಕ) ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್‌ನಲ್ಲಿ ಸೌರಭ್ ಅಗ್ರ 3ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. ಅಭಿಷೇಕ್ ವರ್ಮ ಕೇವಲ 0.2 ಅಂಕಗಳ ಅಂತರದಲ್ಲಿ ಚಿನ್ನದ ಪದಕ ತಪ್ಪಿಸಿಕೊಂಡು ಬೆಳ್ಳಿಗೆ ತೃಪ್ತರಾದರು (240.7). ಕೊರಿಯದ ಮೊಸೆ ಕಿಮ್ ಚಿನ್ನದ ಪದಕ (240. 9), ಕೊರಿಯದ ಮತ್ತೋರ್ವ ಆಟಗಾರ ತೆಯಿಹ್ವಾನ್ ಲೀ ಕಂಚಿನ ಪದಕ ಜಯಿಸಿದರು. ರವೀಂದರ್ 7ನೇ ಸ್ಥಾನಿಯಾದರು.
ತಂಡ ವಿಭಾಗದಲ್ಲಿ ಚಿನ್ನ
ಪುರುಷರ ವೈಯಕ್ತಿಕ ವಿಭಾಗದಲ್ಲಿ ನಿರಾಸೆ ಮೂಡಿಸಿದ ಭಾರತದ ಸೌರಭ್, ಅಭಿಷೇಕ್, ರವೀಂದರ್ ಜೋಡಿ ಇದೇ ಸ್ಪರ್ಧೆಯ ತಂಡ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕೊರಿಯಾ ತಂಡವನ್ನು ಹಿಂದಿಕ್ಕಿ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ (1,742 ಅಂಕ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.