Asian Champions Trophy: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ… ಪಾಠಕ್ ಗೋಲ್‌ಕೀಪರ್
Team Udayavani, Aug 29, 2024, 8:55 AM IST
ಹೊಸದಿಲ್ಲಿ: ಪಿ.ಆರ್. ಶ್ರೀಜೇಶ್ ಅವರ ನಿವೃತ್ತಿಯಿಂದ ತೆರವಾದ ಭಾರತೀಯ ಹಾಕಿ ಗೋಲ್ ಕೀಪರ್ ಸ್ಥಾನವನ್ನು ಕಿೃಶನ್ ಬಹಾದೂರ್ ಪಾಠಕ್ ತುಂಬಲಿದ್ದಾರೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆಂದು ಬುಧವಾರ ಪ್ರಕಟ ಗೊಂಡ ತಂಡದಲ್ಲಿ ಪಾಠಕ್ ಅವರಿಗೆ ಪ್ರಧಾನ ಗೋಲ್ ಕೀಪಿಂಗ್ ಜವಾಬ್ದಾರಿ ನೀಡಲಾಗಿದೆ. ಸೂರಜ್ ಕರ್ಕೇರ ಮೀಸಲು ಕೀಪರ್ ಆಗಿದ್ದಾರೆ.
ಇಷ್ಟು ಕಾಲ ಕಿೃಶನ್ ಬಹಾದೂರ್ ಪಾಠಕ್ ಮೀಸಲು ಕೀಪರ್ ಆಗಿದ್ದರು. ಶ್ರೀಜೇಶ್ ಗೈರಿನ ವೇಳೆಯಷ್ಟೇ ಇವರಿಗೆ ಅವಕಾಶ ಸಿಗುತ್ತಿತ್ತು. ಇನ್ನು ಪೂರ್ಣಾ ವಧಿಗೆ ಈ ಹುದ್ದೆಯನ್ನು ನಿಭಾ ಯಿಸಬಹುದಾಗಿದೆ.
ಐವರಿಗೆ ವಿಶ್ರಾಂತಿ
ತಂಡವನ್ನು ಹರ್ಮನ್‌ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ. ಆದರೆ ಉಪನಾಯಕತ್ವದಲ್ಲಿ ಬದಲಾವಣೆ ಸಂಭವಿಸಿದೆ. ಹಾರ್ದಿಕ್ ಸಿಂಗ್ ಅವರಿಗೆ ವಿಶ್ರಾಂತಿ ನೀಡಿದ ಕಾರಣ ಅನುಭವಿ ಮಿಡ್‌ಫಿಲ್ಡರ್ ವಿವೇಕ್ ಸಾಗರ್ ಪ್ರಸಾದ್ ಈ ಜವಾಬ್ದಾರಿ ವಹಿಸಲಿದ್ದಾರೆ. ವಿಶ್ರಾಂತಿ ಪಡೆದ ಇತರ ಪ್ರಮುಖರೆಂದರೆ ಮನ್‌ದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ಶಮ್ಶೆರ್ ಸಿಂಗ್ ಮತ್ತು ಗುರ್ಜಂತ್ ಸಿಂಗ್.
ಪಂದ್ಯಾವಳಿ ಸೆ. 8ರಿಂದ 17ರ ತನಕ ಚೀನದ ಹುಲುನ್‌ಬುಯಿರ್‌ನಲ್ಲಿ ನಡೆಯಲಿದೆ. ಭಾರತ ಹಾಲಿ ಚಾಂಪಿ ಯನ್ ಎಂಬುದು ವಿಶೇಷ. ಭಾರತ ತನ್ನ ಮೊದಲ ಪಂದ್ಯವನ್ನು ಸೆ. 8ರಂದು ಚೀನ ವಿರುದ್ಧ ಆಡಲಿದೆ. ಬಳಿಕ ಜಪಾನ್ (ಸೆ. 9), ಮಲೇಷ್ಯಾ (ಸೆ. 11), ಕೊರಿಯಾ (ಸೆ. 12) ಹಾಗೂ ಪಾಕಿಸ್ಥಾನವನ್ನು (ಸೆ. 14) ಎದುರಿಸಲಿದೆ.
ಭಾರತ ತಂಡ
ಗೋಲ್‌ಕೀಪರ್: ಕಿೃಶನ್ ಬಹಾ ದೂರ್ ಪಾಠಕ್, ಸೂರಜ್ ಕರ್ಕೇರ. ಡಿಫೆಂಡರ್: ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್ ಪ್ರೀತ್ ಸಿಂಗ್ (ನಾಯಕ), ಜುಗ್ರಾಜ್ ಸಿಂಗ್, ಸಂಜಯ್, ಸುಮಿತ್. ಮಿಡ್ ಫೀಲ್ಡರ್: ರಾಜ್‌ಕುಮಾರ್ ಪಾಲ್, ನೀಲಕಂಠ ಶರ್ಮ, ವಿವೇಕ್ ಸಾಗರ್ ಪ್ರಸಾದ್, ಮನ್‌ಪ್ರೀತ್ ಸಿಂಗ್, ಮೊಹಮ್ಮದ್ ರಾಹೀಲ್ ಮೌಸೀನ್.
ಫಾರ್ವರ್ಡ್ಸ್: ಅಭಿಷೇಕ್, ಸುಖಜೀತ್ ಸಿಂಗ್, ಅರೈಜೀತ್ ಸಿಂಗ್ ಹುಂಡಾಲ್, ಉತ್ತಮ್ ಸಿಂಗ್, ಗುರ್ಜೋತ್ ಸಿಂಗ್.
ಇದನ್ನೂ ಓದಿ: Ballari: ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್… ಪೊಲೀಸರಿಂದ ಬ್ಯಾಗ್ ಪರಿಶೀಲನೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.