Asian Champions Trophy ಹಾಕಿ ಸೆಮಿಫೈನಲ್ಸ್‌ ; ಇಂದು ಭಾರತಕ್ಕೆ ಜಪಾನ್‌ ಸವಾಲು

ಮಲೇಷ್ಯಾಕ್ಕೆ ಹಾಲಿ ಚಾಂಪಿಯನ್‌ ದ. ಕೊರಿಯ ಎದುರಾಳಿ

Team Udayavani, Aug 11, 2023, 7:00 AM IST

1-sadad

ಚೆನ್ನೈ: ಅಜೇಯ ಭಾರತ ತಂಡವು ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಕೂಟದಲ್ಲಿ ಶುಕ್ರವಾರ ನಡೆಯುವ ಎರಡನೇ ಸೆಮಿಫೈನಲ್‌ ಹೋರಾಟದಲ್ಲಿ ಜಪಾನ್‌ ತಂಡವನ್ನು ಎದುರಿಸಲಿದೆ.

ಇಲ್ಲಿನ ಮೇಯರ್‌ ರಾಧಾಕೃಷ್ಣನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೋರಾಟದಲ್ಲಿ ಭಾರತವೇ ಫೇವರಿಟ್‌ ತಂಡವಾಗಿದ್ದರೂ ಎದುರಾಳಿಯನ್ನು ಹಗುರವಾಗಿ ಕಾಣುವ ಸಾಧ್ಯತೆಯಿಲ್ಲ. ಲೀಗ್‌ ಹಂತದಲ್ಲಿ ಆಡಿದ ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿರುವ ಭಾರತವು ಇನ್ನೊಂದು ಪಂದ್ಯದಲ್ಲಿ ಡ್ರಾ ಸಾಧಿಸಿ ಅಜೇಯ ಸಾಧನೆ ಮಾಡಿದೆಯಲ್ಲದೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಭಾರತವು ದಾಖಲೆ ನಾಲ್ಕನೇ ಬಾರಿ ಈ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದೆ.

ಈ ಮೊದಲು ನಡೆಯುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಮಲೇಷ್ಯಾ ತಂಡವು ಹಾಲಿ ಚಾಂಪಿಯನ್‌ ದಕ್ಷಿಣ ಕೊರಿಯವನ್ನು ಎದುರಿಸಲಿದೆ. ಇದಕ್ಕಿಂತ ಮೊದಲು ಐದು ಮತ್ತು ಆರನೇ ಸ್ಥಾನಕ್ಕಾಗ ನಡೆಯುವ ಪಂದ್ಯದಲ್ಲಿ ಪಾಕಿಸ್ಥಾನವು ಚೀನಾ ತಂಡವನ್ನು ಎದುರಿಸಲಿದೆ.

ವಿಶ್ವ ರ್‍ಯಾಂಕಿಂಗ್‌ ಅನ್ನು ಗಮನಿಸಿದರೆ ಭಾರತವೇ ಬಲಿಷ್ಠ ತಂಡವೆಂದು ಹೇಳಬಹುದು. ಆದರೆ ಜಪಾನ್‌ ಈ ಹಿಂದೆ ಭಾರತವನ್ನು ಸೋಲಿಸಿದ ನಿದರ್ಶನವಿರುವ ಕಾರಣ ಈ ಪಂದ್ಯದಲ್ಲಿ ಭಾರತ ಎಚ್ಚರಿಕೆಯಿಂದ ಆಡುವ ಅಗತ್ಯವಿದೆ. ರ್‍ಯಾಂಕಿಂಗ್‌ನಲ್ಲಿ ಭಾರತ ಸದ್ಯ ನಾಲ್ಕನೇ ಸ್ಥಾನದಲ್ಲಿದ್ದರೆ ಜಪಾನ್‌ 19ನೇ ಸ್ಥಾನದಲ್ಲಿದೆ.

ಲೀಗ್‌ ಹಂತದಲ್ಲಿ ಭಾರತ ಅಮೋಘ ಆಟದ ಪ್ರದರ್ಶನ ನೀಡಿದೆ. ಆದರೆ ಜಪಾನ್‌ ತಂಡದ ವಿರುದ್ಧ ಮಾತ್ರ ಡ್ರಾ (1-1) ಸಾಧಿಸಿತ್ತು. ಭಾರತ ಈ ಹಿಂದೆ ಢಾಕಾದಲ್ಲಿ ನಡೆದ 2021ರ ಆವೃತ್ತಿಯ ಸೆಮಿಫೈನಲ್‌ನಲ್ಲಿ ಜಪಾನ್‌ಗೆ 3-5 ಗೋಲುಗಳಿಂದ ಸೋತಿತ್ತು. ಹೀಗಾಗಿ ಭಾರತ ಬಹಳಷ್ಟು ಎಚ್ಚರಿಕೆ ವಹಿಸಿ ಆಡಿ ಗೆಲ್ಲಲು ಪ್ರಯತ್ನಿಸಬೇಕಾಗಿದೆ. ಇದಕ್ಕಾಗಿ 60 ನಿಮಿಷಗಳ ಆಟದುದ್ದಕ್ಕೂ ಆಕ್ರಮಣಕಾರಿ ಆಟವನ್ನು ಮುಂದು ವರಿಸಿಕೊಂಡು ಹೋಗಲು ಮತ್ತು ಸ್ಥಿರ ನಿರ್ವಹಣೆ ನೀಡಲು ಭಾರತ ಪ್ರಯತ್ನಿಸಬೇಕಾಗಿದೆ.

ಲೀಗ್‌ ಹಂತದಲ್ಲಿ ಭಾರತ ಒಟ್ಟಾರೆ 20 ಗೋಲುಗಳನ್ನು ದಾಖಲಿಸಿದೆ. ಆದರೆ ಜಪಾನ್‌ ವಿರುದ್ಧ ಗೋಲು ದಾಖಲಿಸುವ ಹಲವು ಅವಕಾಶವನ್ನು ಕಳೆದುಕೊಂಡಿತ್ತು. ಕ್ರೆಗ್‌ ಫ‌ುಲ್ಟನ್‌ ನಾಯಕತ್ವದ ತಂಡವು ಜಪಾನ್‌ ವಿರುದ್ಧ 15 ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆದಿದ್ದರೂ ಒಮ್ಮೆ ಮಾತ್ರ ಗೋಲು ದಾಖಲಿಸಲು ಯಶಸ್ವಿಯಾಗಿತ್ತು. ಇದೀಗ ತಂಡವು ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ದಾಖಲಿಸಲು ಪ್ರಯತ್ನಿಸಬೇಕಾಗಿದೆ.
ಬುಧವಾರ ನಡೆದ ಪಂದ್ಯದಲ್ಲಿ ಪಾಕಿಸ್ಥಾನವನ್ನು 4-0 ಗೋಲುಗ ಳಿಂದ ಸೋಲಿಸಿರುವುದು ಭಾರತದ ಉತ್ಸಾಹವನ್ನು ಹೆಚ್ಚಿಸಿದೆ. ಪಂದ್ಯದ 4 ಕ್ವಾರ್ಟರ್‌ ಹಂತದಲ್ಲಿ ಸ್ಥಿರ ನಿರ್ವಹಣೆ ನೀಡಿ ಭಾರತ ಮೇಲುಗೈ ಸಾಧಿಸಿತ್ತು. ಅದೇ ಉತ್ಸಾಹದಲ್ಲಿ ಭಾರತವು ಜಪಾನ್‌ ವಿರುದ್ಧ ಆಡಬೇಕಾಗಿದೆ.

ಟಾಪ್ ನ್ಯೂಸ್

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.