Asian Champions Trophy ಸೆಮಿಫೈನಲ್ : ಕೊರಿಯಾ ವಿರುದ್ಧ ಭಾರತ ಫೇವರಿಟ್
Team Udayavani, Sep 16, 2024, 6:30 AM IST
ಹುಲುನ್‌ಬಿಯುರ್ (ಚೀನ): ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿರುವ ಭಾರತ, ಸೋಮವಾರದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಕೊರಿಯಾ ವಿರುದ್ಧ ಸೆಣಸಲಿದೆ. ಕೂಟದ ಐದೂ ಲೀಗ್ ಪಂದ್ಯಗಳನ್ನು ಗೆದ್ದಿರುವ ಹರ್ಮನ್‌ಪ್ರೀತ್ ಸಿಂಗ್ ಪಡೆ ಉಪಾಂತ್ಯದ ನೆಚ್ಚಿನ ತಂಡ ಎಂಬುದರಲ್ಲಿ ಅನುಮಾನವಿಲ್ಲ. ಇನ್ನೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ಥಾನ-ಚೀನ ಎದುರಾಗಲಿವೆ.
ಲೀಗ್ ಹಂತದಲ್ಲಿ ಭಾರತ 3-1 ಅಂತರದಿಂದ ಕೊರಿಯಾವನ್ನು ಹಿಮ್ಮೆಟ್ಟಿಸಿತ್ತು. ಕೊನೆಯ ಲೀಗ್ ಮುಖಾಮುಖಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು 2-1 ಗೋಲುಗಳಿಂದ ಮಣಿಸುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಎಲ್ಲ ವಿಭಾಗಗಳಲ್ಲೂ ಮೇಲುಗೈ
ಕೂಟದುದ್ದಕ್ಕೂ ಎಲ್ಲ ವಿಭಾಗಗಳಲ್ಲೂ ಭಾರತ ಪ್ರಭುತ್ವ ಸಾಧಿಸುತ್ತಲೇ ಬಂದಿದೆ. ಫಾರ್ವರ್ಡ್‌ಲೈನ್, ಮಿಡ್‌ಫಿàಲ್ಡ್, ಡಿಫೆನ್ಸ್ ವಿಭಾಗಗಳಲ್ಲಿ ಅಮೋಘ ಪ್ರದರ್ಶನ ನೀಡಿದೆ. ಸ್ಟ್ರೈಕರ್ ಫಾರ್ಮ್ ಅಮೋಘ ಮಟ್ಟದಲ್ಲಿದೆ. ಫೀಲ್ಡ್ ಗೋಲ್ ಬಾರಿಸುವುದರಲ್ಲಿ ಭರ್ಜರಿ ಯಶಸ್ಸು ಕಂಡಿರುವುದು ಪ್ಲಸ್ ಪಾಯಿಂಟ್. ಯುವ ಫಾರ್ವರ್ಡ್ ಆಟಗಾರರಾದ ಸುಖ್‌ಜೀತ್ ಸಿಂಗ್, ಅಭಿಷೇಕ್, ಉತ್ತಮ್ ಸಿಂಗ್, ಗುಜೋìತ್ ಸಿಂಗ್, ಅರೈಜೀತ್ ಸಿಂಗ್ ಹುಂಡಾಲ್ ಅವರೆಲ್ಲ ಗಮನ ಸೆಳೆಯುವ ಪ್ರದರ್ಶನ ನೀಡುತ್ತ ಬಂದಿದ್ದಾರೆ.
ಹಾಗೆಯೇ ಮಿಡ್‌ಫಿàಲ್ಡ್ ವಿಭಾಗದಲ್ಲಿ ರಾಜ್‌ಕುಮಾರ್ ಪಾಲ್ ಅತ್ಯಾಕರ್ಷಕ ಫೀಲ್ಡ್ ಗೋಲ್ ಮೂಲಕ ಹ್ಯಾಟ್ರಿಕ್ ಕೂಡ ಸಾಧಿಸಿದ್ದಾರೆ. ಹಿರಿಯ ಆಟಗಾರರಾದ ಮನ್‌ಪ್ರೀತ್ ಸಿಂಗ್, ಉಪನಾಯಕ ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮ ಕೂಡ ಉತ್ತಮ ಲಯದಲ್ಲಿದ್ದಾರೆ. ಪಿ.ಆರ್. ಶ್ರೀಜೇಶ್ ಸ್ಥಾನವನ್ನು ತುಂಬಿರುವ ಕೃಶನ್ ಬಹಾದೂರ್ ಪಾಠಕ್ ಮತ್ತು ಸೂರಜ್ ಕರ್ಕೆರಾ ಎದುರಾಳಿಗಳಿಗೆ ಬಿಟ್ಟುಕೊಟ್ಟದ್ದು 4 ಗೋಲು ಮಾತ್ರ.
ವಿಶ್ವದ ಶ್ರೇಷ್ಠ ಡ್ರ್ಯಾಗ್‌ಫ್ಲಿಕರ್‌ಗಳಲ್ಲಿ ಒಬ್ಬರಾಗಿರುವ ನಾಯಕ ಹರ್ಮನ್‌ಪ್ರೀತ್ ಸಿಂಗ್ ಕಪ್ತಾನನ ಆಟದ ಮೂಲಕ ಮಿಂಚುತ್ತಿದ್ದಾರೆ. ಇವರೆಲ್ಲರ ಫಾರ್ಮ್ ಕೊರಿಯಾವನ್ನು ಮಣಿಸಲು ಧಾರಾಳ ಸಾಕು. ಕೊರಿಯಾ 5 ಲೀಗ್ ಪಂದ್ಯಗಳಲ್ಲಿ ಗೆದ್ದದ್ದು ಒಂದನ್ನು ಮಾತ್ರ. ಮೂರನ್ನು ಡ್ರಾ ಮಾಡಿಕೊಂಡರೆ, ಒಂದರಲ್ಲಿ ಸೋಲನುಭವಿಸಿದೆ. ಅಂಕಪಟ್ಟಿಯಲ್ಲಿ ಲಭಿಸಿದ್ದು 4ನೇ ಸ್ಥಾನ.
ಭಾರತ-ಪಾಕ್ ಫೈನಲ್?
ಪಾಕಿಸ್ಥಾನ-ಚೀನ ಮೊದಲ ಸೆಮಿಫೈನಲ್‌ನಲ್ಲಿ ಸೆಣಸಾಡಲಿದ್ದು (ಅಪರಾಹ್ನ 1.00), ಇಲ್ಲಿ ಪಾಕ್ ಫೇವರಿಟ್ ಆಗಿ ಗೋಚರಿಸುತ್ತಿದೆ. ಫೈನಲ್‌ನಲ್ಲಿ ಭಾರತ-ಪಾಕಿಸ್ಥಾನ ಮತ್ತೂಮ್ಮೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ಫೈನಲ್ ಪಂದ್ಯ ಮಂಗಳವಾರ ನಡೆಯಲಿದೆ.
ಭಾರತ-ಕೊರಿಯಾ
ಆರಂಭ: ಅ. 3.00
ಪ್ರಸಾರ: ಸೋನಿ ಸ್ಪೋರ್ಟ್ಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.