ಏಶ್ಯಕಪ್ ಟಿ20 ಆಯೋಜನೆ ನಿರ್ಧಾರ ತಡೆಹಿಡಿದ ಎಸಿಸಿ
ಏಶ್ಯಕಪ್ ಆಯೋಜಿಸಲು ಶ್ರೀಲಂಕಾ ಸಿದ್ಧ
Team Udayavani, Jun 10, 2020, 10:07 AM IST
ಹೊಸದಿಲ್ಲಿ: ಏಶ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮಂಗಳವಾರ ನಡೆಸಿದ ತನ್ನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಈ ವರ್ಷದ ಏಶ್ಯಕಪ್ ಟಿ20 ಕ್ರಿಕೆಟ್ ಕೂಟದ ಆಯೋಜನೆ ಕುರಿತ ನಿರ್ಧಾರವನ್ನು ತಡೆಹಿಡಿದಿದೆ. ಇದೇ ವೇಳೆ ಈ ಕೂಟದ ಆತಿಥ್ಯ ವಹಿಸಲು ಶ್ರೀಲಂಕಾ ಸಿದ್ಧವಿದೆ ಎಂದು ತಿಳಿಸಿದೆ.
ಏಶ್ಯಕಪ್ ಟಿ0 ಕೂಟ ಪಾಕಿಸ್ಥಾನದಲ್ಲಿ ನಡೆಯಬೇಕಿತ್ತು. ಆದರೆ ಇದೀಗ ಕೂಟ ಆಯೋಜನೆಯ ಪ್ರಸ್ತಾವಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಎಸಿಸಿ ಒಪ್ಪಿಗೆ ಸೂಚಿಸಿವೆ ಎಂದು ಶ್ರೀಲಂಕಾ ಕ್ರಿಕೆಟ್ನ ಮುಖ್ಯಸ್ಥ ಶಮ್ಮಿ ಸಿಲ್ವ ಹೇಳಿದ್ದಾರೆ. ಈ ಕೂಟವು ಸಪ್ಟೆಂಬರ್ನಲ್ಲಿ ನಡೆಯಬೇಕಾಗಿದೆ ಮತ್ತು ಪಾಕಿಸ್ಥಾನ ಆತಿಥ್ಯ ವಹಿಸಬೇಕಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಭಾರತವು ಪಾಕಿಸ್ಥಾನಕ್ಕೆ ಪ್ರಯಾಣಿಸಲು ನಿರಾಕರಿಸುತ್ತಿರುವ ಕಾರಣ ಕೂಟವನ್ನು ಬೇರೆ ದೇಶಕ್ಕೆ ಬದಲಾಯಿಸಬೇಕಾದ ಅನಿವಾರ್ಯತೆಯಿದೆ.
ಪಿಸಿಬಿ ಜತೆ ನಾವು ಈಗಾಗಲೇ ಮಾತನಾಡಿದ್ದೇವೆ ಮತ್ತು ಸದ್ಯದ ಸ್ಥಿತಿಯಲ್ಲಿ ಕೂಟ ಆಯೋಜಿಸುವ ನಮ್ಮ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಎಸಿಸಿ ಜತೆ ಆನ್ಲೈನ್ನಲ್ಲಿ ಮಾತನಾಡಿದ್ದು ಅವರು ಕೂಡ ಒಪ್ಪಿಗೆ ನೀಡಿದ್ದಾರೆ ಎಂದು ಶಮ್ಮಿ ಸಿಲ್ವ ಹೇಳಿರುವ ಮಾತನ್ನು ಶ್ರೀಲಂಕಾ ಪತ್ರಿಕೆ ಸಿಲೋನ್ ಟುಡೇ ವರದಿ ಮಾಡಿದೆ. ಆಸ್ಟ್ರೇಲಿಯಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಗ್ಗೆ ಐಸಿಸಿಯ ನಿರ್ಧಾರವನ್ನು ಗಮನಿಸಿ ಎಸಿಸಿ ಏಶ್ಯಕಪ್ ಕುರಿತು ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.