ಪಾಕಿಸ್ಥಾನದಲ್ಲಿ “ಏಶ್ಯನ್ ಎಮರ್ಜಿಂಗ್’ ಕ್ರಿಕೆಟ್
Team Udayavani, Nov 30, 2018, 6:40 AM IST
ಕರಾಚಿ: ಡಿಸೆಂಬರ್‌ನಲ್ಲಿ ನಡೆಯಲಿರುವ “ಏಶ್ಯನ್ ಎಮರ್ಜಿಂಗ್ ನೇಶನ್ಸ್ ಕಪ್’ ಕ್ರಿಕೆಟ್ ಕೂಟದ ಅತಿಥ್ಯವನ್ನು ಪಾಕಿಸ್ಥಾನ ವಹಿಸಿಕೊಂಡಿದೆ. ಆದರೆ ಭಾರತದ ಯಾವುದೇ ಪಂದ್ಯಗಳು ಪಾಕಿಸ್ಥಾನದಲ್ಲಿ ನಡೆಯುವುದಿಲ್ಲ, ಬದಲಾಗಿ ಶ್ರೀಲಂಕಾದಲ್ಲಿ ಸಾಗಲಿವೆ.
ಭಾರತ ಹಾಗೂ ಪಾಕಿಸ್ಥಾನ ನಡುವಿನ ರಾಜಕೀಯ ಬಿಕ್ಕಟ್ಟು ಈ ನಿರ್ಧಾರಕ್ಕೆ ಕಾರಣ. ಬಿಸಿಸಿಐ ಭದ್ರತಾ ಕಾರಣಗಳಿಗಾಗಿ ಭಾರತದ ಆಟಗಾರರನ್ನು ಪಾಕಿಸ್ಥಾನಕ್ಕೆ ಕಳುಹಿಸಲು ನಿರಾಕರಿಸಿದೆ. ಹೀಗಾಗಿ ಭಾರತದ ಎಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.
8 ತಂಡ, 2 ವಿಭಾಗ
ಒಟ್ಟು 8 ತಂಡಗಳು ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದು, 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಪಾಕಿಸ್ಥಾನ, ಬಾಂಗ್ಲಾದೇಶ, ಯುಎಇ, ಹಾಂಕಾಂಗ್ ತಂಡಗಳು “ಎ’ ಗುಂಪಿನಲ್ಲಿವೆ. ಈ ಗುಂಪಿನ ಪಂದ್ಯಗಳು ಕರಾಚಿಯಲ್ಲಿ ನಡೆಯಲಿವೆ. ಭಾರತ, ಶ್ರೀಲಂಕಾ, ಅಫ್ಘಾನಿಸ್ಥಾನ, ಒಮಾನ್ ತಂಡಗಳು “ಬಿ’ ಗುಂಪಿನಲ್ಲಿವೆ. ಇಲ್ಲಿನ ಪಂದ್ಯಗಳು ಹಾಗೂ ಫೈನಲ್ ಪಂದ್ಯದ ಆತಿಥ್ಯ ಕೊಲೊಂಬೊ ಪಾಲಾಗಿದೆ.
ಡಿ. 4ರಿಂದ 10ರ ವರೆಗೆ ಕರಾಚಿಯಲ್ಲಿ, ಡಿ. 6ರಿಂದ 15ರ ವರಗೆ ಕೊಲೊಂಬೊದಲ್ಲಿ ಪಂದ್ಯಗಳು ನಡೆಯುತ್ತವೆ. ಭದ್ರತಾ ಕಾರಣಗಳಿಂದ ಪಾಕಿಸ್ಥಾನ ಈ ಕೂಟದ ಅತಿಥ್ಯ ವಹಿಸುವುದನ್ನು ಭಾರತ ಹಾಗೂ ಬಾಂಗ್ಲಾದೇಶ ಒಪ್ಪಿರಲಿಲ್ಲ. 2017ರ ಏಶ್ಯನ್ ಕ್ರಿಕೆಟ್ ಮಂಡಳಿ ಸಭೆಯಲ್ಲಿ ಭಾರತ ಹಾಗೂ ಬಾಂಗ್ಲದೇಶ ಭಾಗವಹಿಸದ ಕಾರಣ 2018ರ ಆವೃತ್ತಿಯ ಆತಿಥ್ಯ ಪಾಕಿಸ್ಥಾನದ ಪಾಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.