ಧರುಣ್ ಅಯ್ಯಸಾಮಿ; ರಜತ ಪರಾಕ್ರಮಿ
Team Udayavani, Aug 28, 2018, 6:00 AM IST
ಜಕಾರ್ತಾ: ತಮಿಳುನಾಡಿನ ತಿರುಪುರದ 21ರ ಹರೆಯದ, ದ್ವಿತೀಯ ವರ್ಷದ ಕಾಲೇಜು ವಿದ್ಯಾರ್ಥಿ ಧರುಣ್ ಅಯ್ಯಸಾಮಿ ಏಶ್ಯಾಡ್ 400 ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಮಿನುಗಿದ್ದಾರೆ. ಈ ಪದಕವನ್ನು ತನ್ನ ಔನತ್ಯಕ್ಕೆ ಕಾರಣರಾದ ತಾಯಿಗೆ ಅರ್ಪಿಸಿದ್ದಾರೆ.
ಸೋಮವಾರದ ಹರ್ಡಲ್ಸ್ ಸ್ಪರ್ಧೆಯನ್ನು ಅವರು 48.96 ಸೆಕೆಂಡ್‌ಗಳಲ್ಲಿ ಮುಗಿಸಿ ದ್ವಿತೀಯ ಸ್ಥಾನ ಅಲಂಕರಿಸಿದರು. ಕೊನೆಯ 100 ಮೀ.ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರಿಂದ ಅಯ್ಯಸಾಮಿಗೆ ಬೆಳ್ಳಿ ಪದಕ ಒಲಿಯಿತು. ಈ ಸಂದರ್ಭದಲ್ಲಿ ಅವರು ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಕತಾರ್‌ನ ಅಬ್ದುರಹಮಾನ್ ಸಾಂಬಾ ನೂತನ ಏಶ್ಯಾಡ್ ದಾಖಲೆಯೊಂದಿಗೆ ಚಿನ್ನ ಗೆದ್ದರು (47.66).
ಪದಕ ಗೆದ್ದ ಸಂಭ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಧರುಣ್ ಅಯ್ಯಸಾಮಿ, “ನಾನು ಕೇವಲ ನನ್ನ ಓಟದತ್ತ ಮಾತ್ರ ಗಮನ ನೀಡಿದೆ. ಉಳಿದವರ ಬಗ್ಗೆ ಯೋಚಿಸಲಿಕ್ಕೇ ಹೋಗಲಿಲ್ಲ. ಈ ಸಂದರ್ಭದಲ್ಲಿ ರಾಷ್ಟ್ರೀಯ ದಾಖಲೆ ತಿದ್ದಿ ಬರೆದುದಕ್ಕೆ ಖುಷಿಯಾಗುತ್ತಿದೆ’ ಎಂದರು.
ಪದಕ ಅಮ್ಮನಿಗೆ ಅರ್ಪಣೆ
“ನಾನು 8ರ ಹರೆಯದಲ್ಲಿರುವಾಗಲೇ ತಂದೆಯನ್ನು ಕಳೆದುಕೊಂಡೆ. ಅಲ್ಲಿಂದ ಮುಂದೆ ಅಮ್ಮನೇ ನನ್ನ ಪಾಲಿನ ಸರ್ವಸ್ವವಾದರು. ಅಧ್ಯಾಪಕಿಯಾಗಿರುವ ಅವರು ತಿಂಗಳಿಗೆ 14 ಸಾವಿರ ರೂ. ದುಡಿಯುತ್ತಿದ್ದಾರೆ. ನನ್ನನ್ನು ಕಠಿನ ಆರ್ಥಿಕ ಪರಿಸ್ಥಿತಿಯ ನಡುವೆಯೂ ಈ ಮಟ್ಟಕ್ಕೇರಿಸಿದವರಲ್ಲಿ ಅಮ್ಮನ ಪಾಲು ಅಪಾರ. ಇದಕ್ಕಾಗಿ ಈ ದೊಡ್ಡ ಕೂಟದ ಮೊದಲ ಪದಕವನ್ನು ಅಮ್ಮನಿಗೆ ಅರ್ಪಿಸುತ್ತಿದ್ದೇನೆ’ ಎಂದು ಧರುಣ್ ಹೇಳಿದರು.
ಏಶ್ಯಾಡ್‌ಗಾಗಿ ಅವರು ಕಳೆದ 6 ತಿಂಗಳ ಕಾಲ ಪೋಲ್ಯಾಂಡ್ ಮತ್ತು ಜೆಕ್ ಗಣರಾಜ್ಯದಲ್ಲಿ ಕಠಿನ ತರಬೇತಿ ಪಡೆದಿದ್ದರು. ಇದರಿಂದ ಬಹಳ ಲಾಭವಾಯಿತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್ ಮೇಜರ್
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Ghaati: ಸ್ವೀಟಿ ಅಲ್ಲ ಘಾಟಿ; ಫಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ
Brahmavara ಬಂಟರ ಯಾನೆ ನಾಡವರ ಸಂಘ: ನಾಳೆ ನೂತನ ಪದಾಧಿಕಾರಿಗಳ ಪದಪ್ರದಾನ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.