ಸೈಲಿಂಗ್‌ನಲ್ಲಿ ತೇಲಿ ಬಂತು 3 ಪದಕ
Team Udayavani, Sep 1, 2018, 6:00 AM IST
ಜಕಾರ್ತಾ: ಶುಕ್ರವಾರದ ಏಶ್ಯಾಡ್ ಸೈಲಿಂಗ್ ಸ್ಪರ್ಧೆಯಲ್ಲಿ ಭಾರತ 3 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಒಂದು ಬೆಳ್ಳಿಯಾದರೆ, ಉಳಿದೆರಡು ಕಂಚಿನ ಪದಕಗಳಾಗಿವೆ. ವನಿತೆಯರ 49ಇಆರ್ ಎಫ್ಎಕ್ಸ್ ಫೈನಲ್‌ನಲ್ಲಿ ವರ್ಷಾ ಗೌತಮ್-ಶ್ವೇತಾ ಶೇರ್ವೆಗಾರ್ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದರು. ವನಿತೆಯರ ಓಪನ್ ಲೇಸರ್ 4.7 ಸ್ಪರ್ಧೆಯಲ್ಲಿ ಹರ್ಷಿತಾ ತೋಮರ್ ಕಂಚಿನ ಪದಕ ಜಯಿಸಿದರು.
ಪುರುಷರ 49ಇಆರ್ ಸ್ಪರ್ಧೆಯಲ್ಲಿ ವರುಣ್ ಥಕ್ಕರ್-ಚೆಂಗಪ್ಪ ಗಣಪತಿ ಕೆಲಪಂಡ ಕಂಚಿನ ಪದಕವನ್ನು ತಮ್ಮ ದಾಗಿಸಿಕೊಂಡರು. ಇವರಿಬ್ಬರು 15 ರೇಸ್‌ಗಳ ಬಳಿಕ ಒಟ್ಟು 40 ಅಂಕ ಕಲೆಹಾಕಿದರು. 20ರ ಹರೆಯದ ವರ್ಷಾ ಗೌತಮ್-27ರ ಹರೆಯದ ಶ್ವೇತಾ ಶೇರ್ವೆಗಾರ್ 15 ರೇಸ್‌ಗಳಲ್ಲಿ ಒಟ್ಟು 40 ಅಂಕ ಗಳಿಸಿ ದ್ವಿತೀಯ ಸ್ಥಾನಿಯಾದರು. 16ರ ಹರೆಯದ ಹರ್ಷಿತಾ ತೋಮರ್‌ಗೆ 12 ರೇಸ್‌ಗಳಲ್ಲಿ 62 ಅಂಕ ಲಭಿಸಿತು.
“ಇದೊಂದು ಅಸಾಮಾನ್ಯ ಅನುಭವ. ದೇಶಕ್ಕಾಗಿ ಪದಕ ತಂದ ಈ ಗಳಿಗೆ ನಿಜಕ್ಕೂ ಸ್ಮರಣೀಯ. ಇದನ್ನು ಬಣ್ಣಿಸಲಾಗುತ್ತಿಲ್ಲ. ನನ್ನ ಪಾಲಿಗೆ ಇದೊಂದು ಕಲಿಕೆಯ ಅನುಭವ ತಂದಿತ್ತ ಕೂಟವಾಗಿದೆ’ ಎಂಬುದಾಗಿ ಹರ್ಷಿತಾ ಹರ್ಷ ವ್ಯಕ್ತಪಡಿಸಿದ್ದಾರೆ. ಹರ್ಷಿತಾ ಆರಂಭದಲ್ಲಿ ಈಜುಪಟುವಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Kadalekai Parishe: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.