ವನಿತಾ ಹಾಕಿ: ಭಾರತಕ್ಕೆ ಬೃಹತ್ ಗೆಲುವು
Team Udayavani, Aug 22, 2018, 6:00 AM IST
ಜಕಾರ್ತಾ: ನಾಲ್ವರು ಭಾರತೀಯರು ದಾಖಲಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಭಾರತೀಯ ವನಿತಾ ಹಾಕಿ ತಂಡವು ಗೇಮ್ಸ್‌ನ ವನಿತಾ ಹಾಕಿ ಸ್ಪರ್ಧೆಯಲ್ಲಿ ಕಝಾಕ್‌ಸ್ಥಾನ ತಂಡವನ್ನು 21-0 ಗೋಲುಗಳಿಂದ ಬೃಹತ್ ಗೆಲುವು ದಾಖಲಿಸಿದೆ. ಇದು ಭಾರತದ ಎರಡನೇ ಜಯವಾಗಿದೆ. ಮೊದಲ ಪಂದ್ಯದಲ್ಲಿ ಭಾರತ ಇಂಡೋನೇಶ್ಯವನ್ನು 8-0 ಗೋಲುಗಳಿಂದ ಕೆಡಹಿತ್ತು.
“ಬಿ’ ಬಣದ ಈ ಪಂದ್ಯದಲ್ಲಿ ಭಾರತೀಯರು ಗೋಲುಗಳ ಮಳೆ ಸುರಿಸಿದರು. 10 ಮಂದಿ ಈ ಪಂದ್ಯದಲ್ಲಿ ಆಡಿದ್ದು ಎಲ್ಲರೂ ಗೋಲು ಹೊಡೆದ ಸಂಭ್ರಮ ಅನುಭವಿಸಿದ್ದಾರೆ. ಯಾವುದೇ ಪ್ರತಿರೋಧ ನೀಡದ ಕಝಾಕ್‌ಸ್ಥಾನವನ್ನು ಬಗ್ಗುಬಡಿದ ಭಾರತೀಯರು ಒಂದು ಗೋಲಿನಿಂದ ದಾಖಲೆಯ ಗೆಲುವು ದಾಖಲಿಸಲು ವಿಫಲರಾದರು. 22-0 ಗೋಲುಗಳಿಂದ ಜಯ ಸಾಧಿಸಿರುವುದು ಏಶ್ಯನ್ ಗೇಮ್ಸ್‌ನ ಸಾರ್ವಕಾಲಿಕ ದಾಖಲೆಯಾಗಿದೆ. 1982ರ ಏಶ್ಯಾಡ್‌ನಲ್ಲಿ ಭಾರತೀಯ ವನಿತೆಯರು ಹಾಂಕಾಂಗ್ ತಂಡವನ್ನು 22-0 ಗೋಲುಗಳಿಂದ ಸೋಲಿಸಿದ್ದರು.
ನವನೀತ್ ಕೌರ್ ಐದು ಗೋಲು ಹೊಡೆದು ಸಂಭ್ರಮಿಸಿದ್ದಾರೆ. ಡ್ರ್ಯಾಕ್ ಫ್ಲಿಕರ್ ಗುರ್ಜಿತ್ ಕೌರ್ ನಾಲ್ಕು ಗೋಲು ಗಳಿಸಿದ್ದಾರೆ. ಅವರು ಇಂಡೋನೇಶ್ಯ ವಿರುದ್ಧದ ಪಂದ್ಯದಲ್ಲೂ ಹ್ಯಾಟ್ರಿಕ್ ಗೋಲು ಹೊಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kottigehara: ಸ್ವೀಟ್ ಬಾಕ್ಸ್‌ನಲ್ಲಿ ಗೋಮಾಂಸ ಇಟ್ಟು ಮಾರಾಟ: ಇಬ್ಬರ ಸೆರೆ
Mysuru: ಮೈಸೂರಲ್ಲಿ ಚಳಿ ತಡೆಯಲಾಗದೆ ರಾತ್ರಿ ಮಲಗಿದ್ದಲ್ಲೇ ವ್ಯಕ್ತಿ ಸಾವು?
ಗ್ರಾಮ ಪಂಚಾಯಿತಿ ವ್ಯಾಪ್ತಿಯ 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು: ಸಚಿವ ಪ್ರಿಯಾಂಕ್
Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.