Asian Games Football: ಭಾರತಕ್ಕೆ ಹೀನಾಯ ಸೋಲು
Team Udayavani, Sep 20, 2023, 10:32 AM IST
ಹಾಂಗ್‌ಝೋ: 3ನೇ ದರ್ಜೆಯ ಫುಟ್ ಬಾಲ್ ತಂಡದೊಂದಿಗೆ ಏಷ್ಯನ್ ಗೇಮ್ಸ್ ಗೆ ಪ್ರವೇಶಿಸಿರುವ ಭಾರತ, ಮೊದಲ ಪಂದ್ಯದಲ್ಲೇ ಅವಮಾನಕಾರಿ ಸೋಲನ್ನು ಅನುಭವಿಸಿದೆ.
ಸೋಮವಾರ ರಾತ್ರಿಯಷ್ಟೇ ಚೀನಾ ಪ್ರವೇಶಿಸಿದ ಭಾರತ, ಸಂಪೂ ರ್ಣ ಸುಸ್ತಾ ದಂತಿತ್ತು. ವಿಮಾನ ಪ್ರಯಾ ಣದ ಬಳಲಿಕೆ ಯಲ್ಲಿದ್ದ ಆಟಗಾರರ ನಡುವೆ ಸಮನ್ವಯವೂ ಕಾಣಿಸಲಿಲ್ಲ. ಈ ಎಲ್ಲ ಕಾರಣಗಳಿಂದ ಪ್ರಶಸ್ತಿ ಗೆಲ್ಲುವ ಮೆಚ್ಚಿನ ತಂಡವೆನಿಸಿಕೊಂಡಿರುವ ಭಾರತ; 1-5 ಗೋಲುಗಳಿಂದ ಎದುರಾಳಿ ಚೀನಾ ವಿರುದ್ಧ ಸೋತುಹೋಯಿತು.
ಪಂದ್ಯದ ಯಾವುದೇ ಹಂತದಲ್ಲೂ ಭಾರತೀಯರಿಗೆ ಹಿಡಿತವಿರಲಿಲ್ಲ. ಚೀನಾ ಪರ ಗಿಯಾವೊ ತಿಯಾನ್ಯಿ (17ನೇ ನಿಮಿಷ), ದಾಯ್ ವೀಜುನ್ (51ನೇ ನಿಮಿಷ), ತಾವೊ ಖೀಯಾಂಗ್ ಲಾಂಗ್ (72, 75ನೇ ನಿಮಿಷ), ಹಾವೊ ಫ್ಯಾಂಗ್ (90+2) ಗೋಲು ಬಾರಿಸಿದರು. ಪಂದ್ಯದ 45+1ನೇ ನಿಮಿಷದಲ್ಲಿ ಭಾರತದ ಪರ ಕೆ.ಪಿ.ರಾಹುಲ್ ಒಂದು ಗೋಲು ಬಾರಿಸಿದರು.
ಚಿನ್ನ ಗೆಲ್ಲುವ ಮೆಚ್ಚಿನ ತಂಡವೆನಿಸಿಕೊಂಡಿರುವ ಭಾರತ ಏಷ್ಯನ್ ಗೇಮ್ಸ್ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತುಹೋಗಿದ್ದು ಮುಜುಗರ ತಂದಿದೆ. ಈ ತಂಡ 2ನೇ ಸುತ್ತಿಗೆ ಪ್ರವೇಶಿಸಬೇಕಾದರೆ ಬಾಂಗ್ಲಾದೇಶ ಮತ್ತು ಮಾಯೆನ್ಮಾರ್ ತಂಡಗಳನ್ನು ಸೋಲಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.