Asian Games ಹಾಕಿ: ಭಾರತ ಸೆಮಿಫೈನಲ್‌ಗೆ; ಬಾಂಗ್ಲಾ ವಿರುದ್ಧ ಡಜನ್ ಗೋಲು
Team Udayavani, Oct 2, 2023, 10:21 PM IST
ಹ್ಯಾಂಗ್‌ಝೂ: ಪುರುಷರ ಹಾಕಿಯಲ್ಲಿ ಬಾಂಗ್ಲಾದೇಶವನ್ನು ಬರೋಬ್ಬರಿ 12-0 ಗೋಲುಗಳಿಂದ ಉರುಳಿಸಿದ ಭಾರತ ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮನ್‌ದೀಪ್ ಸಿಂಗ್ ಅವರ ಹ್ಯಾಟ್ರಿಕ್ ಗೆಲುವಿನ ಹೆಗ್ಗುರುತಾಗಿ ದಾಖಲಾಯಿತು.
ಹರ್ಮನ್‌ಪ್ರೀತ್ 2ನೇ, 4ನೇ ಹಾಗೂ 32ನೇ ನಿಮಿಷದಲ್ಲಿ, ಮನ್‌ದೀಪ್ ಸಿಂಗ್ 18ನೇ, 24ನೇ ಹಾಗೂ 46ನೇ ನಿಮಿಷದಲ್ಲಿ ಗೋಲು ಸಿಡಿಸಿ ಬಾಂಗ್ಲಾಕ್ಕೆ ಆಘಾತವಿಕ್ಕಿದರು. ಉಳಿದ ಗೋಲುವೀರರೆಂದರೆ ಅಭಿಷೇಕ್ (41ನೇ, 57ನೇ ನಿಮಿಷ), ಲಲಿತ್ ಕುಮಾರ್ ಉಪಾಧ್ಯಾಯ (23ನೇ ನಿಮಿಷ), ಅಮಿತ್ ರೋಹಿದಾಸ್ (28ನೇ ನಿಮಿಷ), ನೀಲಕಂಠ ಶರ್ಮ (47ನೇ ನಿಮಿಷ) ಮತ್ತು ಗುರ್ಜಂತ್ ಸಿಂಗ್ (56ನೇ ನಿಮಿಷ). ಬುಧವಾರ ನಡೆಯುವ ಸೆಮಿಫೈನಲ್‌ನಲ್ಲಿ ಭಾರತ “ಬಿ’ ವಿಭಾಗದ ದ್ವಿತೀಯ ಸ್ಥಾನಿ ತಂಡವನ್ನು ಎದುರಿಸಲಿದೆ.
ಟಿಟಿ: ಸುತೀರ್ಥ-ಐಹಿಕಾ ಕಂಚಿನ ಸಾಧನೆ
ವನಿತಾ ಡಬಲ್ಸ್ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ನಿರೀಕ್ಷೆಗೂ ಮೀರಿದ ಸಾಧನೆಗೈದ ಸುತೀರ್ಥ ಮುಖರ್ಜಿ-ಐಹಿಕಾ ಮುಖರ್ಜಿ ಕಂಚಿನ ಪದಕ ಗೆದ್ದರು. ಸೋಮವಾರ ನಡೆದ ಜಿದ್ದಾಜಿದ್ದಿ ಸೆಮಿಫೈನಲ್ ಪಂದ್ಯದಲ್ಲಿ ಇವರು ಕೊರಿಯಾ ಸ್ಪರ್ಧಿಗಳ ಕೈಯಲ್ಲಿ 3-4 ಅಂತರದ ಸೋಲನುಭವಿಸಿದರು.
2-3ರ ಹಿನ್ನಡೆ ಬಳಿಕ ಸುತೀರ್ಥ-ಐಹಿಕಾ ದಿಟ್ಟ ಹೋರಾಟ ನೀಡಿದರು. ಆದರೆ ಕೊರಿಯಾದ ಸುಗ್ಯೊಂಗ್ ಪಾಕ್ ಮತ್ತು ಸುಯೊಂಗ್ ಚಾ ಪಟ್ಟು ಸಡಿಲಿಸಲಿಲ್ಲ. ಅಂತಿಮವಾಗಿ 7-11, 11-8, 7-11, 11-8, 11-9, 5-11, 11-2 ಅಂತರದ ಗೆಲುವು ಸಾಧಿಸಿದರು. ಇವರ ಹೋರಾಟ ಭರ್ತಿ ಒಂದು ಗಂಟೆ ಕಾಲ ಸಾಗಿತು.
ಸುತೀರ್ಥ-ಐಹಿಕಾ ಹಾಲಿ ವಿಶ್ವ ಚಾಂಪಿಯನ್, ಆತಿಥೇಯ ಚೀನದ ಚೆನ್ ಮೆಂಗ್-ಯಿದಿ ವಾಂಗ್ ಅವರಿಗೆ ಆಘಾತವಿಕ್ಕಿ ಭಾರೀ ದೊಡ್ಡ ಏರುಪೇರಿನ ಫಲಿತಾಂಶ ದಾಖಲಿಸಿದ್ದರು.
ರೋಲರ್ ಸ್ಕೇಟಿಂಗ್ 3,000 ಮೀ. ರಿಲೇ: ಅವಳಿ ಕಂಚು
ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾರತ ಅವಳಿ ಕಂಚಿನ ಸಾಧನೆಗೈದಿತು. ಈ ಎರಡೂ ಪದಕಗಳು ಪುರುಷರ ಹಾಗೂ ವನಿತಾ ವಿಭಾಗದ 3,000 ಮೀ. ರೀಲೇ ರೇಸ್ ಜಿ1ನಲ್ಲಿ ಒಲಿದವು.
ಮೊದಲು ವನಿತಾ ತಂಡ ಪದಕದಿಂದ ಸಿಂಗಾರಗೊಂಡಿತು. ಸಂಜನಾ ಬಥುಲ, ಕಾರ್ತಿಕಾ ಜಗದೀಶ್ವರನ್, ಹೀರಾಲ್ ಸಂಧು ಮತ್ತು ಆರತಿ ಕಸ್ತೂರಿ ರಾಜ್ 4:34.861 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಚೈನೀಸ್ ತೈಪೆ ಚಿನ್ನ (4:19.47 ಸೆ.) ಮತ್ತು ದಕ್ಷಿಣ ಕೊರಿಯಾ ಬೆಳ್ಳಿ ಗೆದ್ದಿತು (4:21.146 ಸೆ.).
ಅನಂತರ ಪುರುಷರ ತಂಡ ಕೂಡ ಕಂಚಿನ ಸಾಧನೆಗೈದಿತು. ಆರ್ಯನ್‌ಪಾಲ್ ಸಿಂಗ್, ಆನಂದಕುಮಾರ್ ವೇಲ್ಕುಮಾರ್, ಸಿದ್ಧಾಂತ್ ಕಾಂಬ್ಳೆ ಮತ್ತು ವಿಕ್ರಮ್ ಇಂಗಾಲೆ 4:10.128 ಸೆಕೆಂಡ್‌ಗಳಲ್ಲಿ ದೂರವನ್ನು ಕ್ರಮಿಸಿದರು. ಇಲ್ಲಿಯೂ ಚೈನೀಸ್ ತೈಪೆ ಚಿನ್ನ (4:05.692 ಸೆ.) ಮತ್ತು ದಕ್ಷಿಣ ಕೊರಿಯಾ ಕಂಚು ಜಯಿಸಿತು (4:05.702).
ಇದರೊಂದಿಗೆ 2010ರ ಏಷ್ಯಾಡ್ ಸ್ಕೇಟಿಂಗ್ ದಾಖಲೆಯನ್ನು ಭಾರತ ಸರಿದೂಗಿಸಿತು. ಅಂದು ಪುರುಷರ ಫ್ರೀ ಸ್ಕೇಟಿಂಗ್ ಹಾಗೂ ಪೇರ್ ಸ್ಕೇಟಿಂಗ್‌ನಲ್ಲೂ 2 ಕಂಚಿನ ಪದಕ ಲಭಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
Pro Kabaddi: ಮೂರಕ್ಕೇರಿದ ಯುಪಿ ಯೋಧಾಸ್
MUST WATCH
ಹೊಸ ಸೇರ್ಪಡೆ
Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.