Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ
ಭಾರತ ದಾಖಲಿಸಿದ ಅತಿ ದೊಡ್ಡ ಗೆಲುವು
Team Udayavani, Sep 30, 2023, 10:26 PM IST
ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ಟೀಮ್ ಈವೆಂಟ್ನಲ್ಲಿ ಶನಿವಾರ ಭಾರತ ಅತ್ಯಮೋಘ ಸಾಧನೆ ತೋರಿದ್ದು ಪುರುಷರ ಹಾಕಿಯಲ್ಲಿ ಪಾಕಿಸ್ಥಾನದ ವಿರುದ್ಧ 10-2 ಗೋಲುಗಳ ಗೆಲುವಿನ ಕೇಕೆ ಹಾಕಿದೆ. “ಎ’ ಬಣದ ಪಂದ್ಯದಲ್ಲಿ ಒಂದಾದರ ಮೇಲೆ ಒಂದರಂತೆ ಗೋಲುಗಳನ್ನು ಬಾರಿಸಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನಕ್ಕೆ ಭಾರಿ ಶಾಕ್ ನೀಡಿದೆ. ಪಾಕಿಸ್ಥಾನದ ವಿರುದ್ಧದ ಭಾರತ ದಾಖಲಿಸಿದ ಅತಿ ದೊಡ್ಡ ಗೆಲುವು ಇದಾಗಿದೆ.
ಹರ್ಮನ್ಪ್ರೀತ್ ಸಿಂಗ್ ಅವರು ನಾಲ್ಕು ಗೋಲು ಬಾರಿಸಿ ದೊಡ್ಡ ಸಾಧನೆ ತೋರಿದರು. 11, 17, 33 ಮತ್ತು 34 ನೇ ನಿಮಿಷದಲ್ಲಿ ಆಕರ್ಷಕ ಗೋಲುಗಳನ್ನು ಬಾರಿಸಿದರು. , ವರುಣ್ ಕುಮಾರ್ ಅವರು 41 ಮತ್ತು 54 ನೇ ನಿಮಿಷದಲ್ಲಿ ಎರಡು ಗೋಲು ಗಳಿಸಿದರು. ಮಂದೀಪ್ ಸಿಂಗ್ 8 ನೇ ನಿಮಿಷದಲ್ಲಿ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಸುಮಿತ್ 30 ನೇ ನಿಮಿಷದಲ್ಲಿ, ಶಂಶೇರ್ ಸಿಂಗ್ 46 ನೇ ನಿಮಿಷದಲ್ಲಿ ಮತ್ತು ಲಲಿತ್ ಕುಮಾರ್ ಉಪಾಧ್ಯಾಯ 49 ನೇ ನಿಮಿಷದಲ್ಲಿ ಕೂಡ ತಲಾ ಒಂದು ಗೋಲು ಗಳಿಸಿ ಭಾರತಕ್ಕೆ ಭಾರೀ ಜಯ ತಂದುಕೊಟ್ಟರು.
ಪಾಕ್ ಪರ ಮುಹಮ್ಮದ್ ಖಾನ್ 38ನೇ ನಿಮಿಷದಲ್ಲಿ, ಅಬ್ದುಲ್ ರಾಣಾ 45 ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಈ ಪಂದ್ಯದಲ್ಲಿ ಭಾರತದ ಫಾರ್ವರ್ಡ್ ಆಟಗಾರ ಲಲಿತ್ ಕುಮಾರ್ ಉಪಾಧ್ಯಾಯ ತಮ್ಮ 150ನೇ ಅಂತಾರಾಷ್ಟ್ರೀಯ ಕ್ಯಾಪ್ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.