Asian Games ತಯಾರಿ: ಹಾಕಿ ಶಿಬಿರಕ್ಕೆ 39 ಆಟಗಾರರು
Team Udayavani, Aug 20, 2023, 11:41 PM IST
ಹೊಸದಿಲ್ಲಿ: ಏಷ್ಯನ್ ಗೇಮ್ಸ್ಗೆ ಭರದಿಂದ ಸಿದ್ಧತೆ ಆರಂಭಿಸಿರುವ “ಹಾಕಿ ಇಂಡಿಯಾ’ 39 ಮಂದಿ ಆಟಗಾರರನ್ನು ತರಬೇತಿ ಶಿಬಿರಕ್ಕಾಗಿ ಆಯ್ಕೆ ಮಾಡಿದೆ. ಪರುಷರ ವಿಭಾಗದ ಈ ಶಿಬಿರ ಸೋಮವಾರದಿಂದ ಸೆ. 18ರ ತನಕ ಬೆಂಗಳೂರಿನ ಸಾಯ್ ಸೆಂಟರ್ನಲ್ಲಿ ನಡೆಯಲಿದೆ. ಸೆ. 23ರಿಂದ ಅ. 8ರ ತನಕ ಚೀನದ ಆತಿಥ್ಯದಲ್ಲಿ ಏಷ್ಯನ್ ಗೇಮ್ಸ್ ನಡೆಯಲಿದೆ.
ಭಾರತ ತಂಡ ಇತ್ತೀಚೆಗಷ್ಟೇ ದಾಖಲೆ 4ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನೆತ್ತಿತ್ತು. ಆದರೆ ಏಷ್ಯನ್ ಗೇಮ್ಸ್ ಇದಕ್ಕೂ ಮಿಗಿಲಾದ ಕ್ರೀಡಾಕೂಟವಾಗಿದ್ದು, ಏಷ್ಯಾದ ಬಲಿಷ್ಠ ತಂಡಗಳೆಲ್ಲ ಕಣಕ್ಕಿಳಿಯಲಿವೆ. ತಂಡದ ಕೆಲವು ಪ್ರಮುಖ ದೋಷಗಳನ್ನು ತಿದ್ದಿಕೊಂಡು ಏಷ್ಯಾಡ್ಗೆ ಹುರಿಗೊಳಿಸುವುದು ಕೋಚ್ ಕ್ರೆಗ್ ಫುಲ್ಟನ್ ಅವರ ಯೋಜನೆ.
ಏಷ್ಯನ್ ಗೇಮ್ಸ್ನಲ್ಲಿ ಭಾರತ “ಎ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಪಾಕಿಸ್ಥಾನ, ಜಪಾನ್, ಬಾಂಗ್ಲಾದೇಶ, ಸಿಂಗಾಪುರ ಮತ್ತು ಉಜ್ಬೆಕಿಸ್ಥಾನ ಈ ವಿಭಾಗದ ಉಳಿದ ತಂಡಗಳು. ಭಾರತ ತನ್ನ ಮೊದಲ ಪಂದ್ಯವನ್ನು ಸೆ. 24ರಂದು ಉಜ್ಬೆಕಿಸ್ಥಾನ ವಿರುದ್ಧ ಆಡಲಿದೆ.
ನಿರಂತರ ಕಲಿಕೆ
“ಕಳೆದ ಕೆಲವು ತಿಂಗಳಿಂದ ನಾವು ಬೆಳವಣಿಗೆ ಕಾಣುತ್ತ ಬಂದಿದ್ದೇವೆ. ನಿರಂತರವಾಗಿ ಕಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಏಷ್ಯಾಡ್ನಲ್ಲಿ ಉತ್ತಮ ಪ್ರದರ್ಶನ ನೀಡಿ 2024ರ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಸಂಪಾದಿಸುವ ಉದ್ದೇಶದಿಂದ ಈ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ಚೆನ್ನೈಯಲ್ಲಿ ನಡೆದ ಹೀರೋ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ನಮ್ಮ ಪ್ರದರ್ಶನ ಉತ್ತಮ ಮಟ್ಟದಲ್ಲಿತ್ತು. ನಾವು ಅಜೇಯ ಅಭಿಯಾನಗೈದು ಪ್ರಶಸ್ತಿ ಗೆದ್ದೆವು. ಏಷ್ಯಾಡ್ನಲ್ಲೂ ಇದೇ ಮಟ್ಟದ ನಿರ್ವಹಣೆಯನ್ನು ಕಾಯ್ದುಕೊಳ್ಳಬೇಕಿದೆ’ ಎಂಬುದಾಗಿ ಫುಲ್ಟನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರೆಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.