Asian Games ; ಜಪಾನ್‌ನಲ್ಲಿ ಬೆಳಗಲಿದೆ 20ನೇ ಏಷ್ಯಾಡ್ ಜ್ಯೋತಿ
ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದ 19ನೇ ಏಷ್ಯನ್ ಗೇಮ್ಸ್ ಮುಕ್ತಾಯ
Team Udayavani, Oct 9, 2023, 12:09 AM IST
ಹ್ಯಾಂಗ್‌ಝೂ: ಕಳೆದ 2 ವಾರಗಳಿಂದ ಚೀನದ ಹ್ಯಾಂಗ್‌ಝೂನಲ್ಲಿ ನಡೆಯುತ್ತದ್ದ 19ನೇ ಏಷ್ಯನ್ ಗೇಮ್ಸ್ ಸುಸಂಪನ್ನಗೊಂಡಿದೆ. ಆದರೆ ಇದು ಮುಗಿದದ್ದೇ ಗೊತ್ತಾಗಲಿಲ್ಲ. ಭಾರತೀಯರು ದಿನದಿನಕ್ಕೆ ತಮ್ಮ ಪದಕಗಳ ಸಂಖ್ಯೆ ವೃದ್ಧಿಸಿಕೊಳ್ಳುತ್ತ ಹೋಗಿದ್ದರಿಂದ ಒಂದು ಸುಂದರ, ಅವಿಸ್ಮರಣೀಯ ನೆನಪುಗಳನ್ನು ಭಾರತೀಯರಲ್ಲಿ ತುಂಬಿದೆ. ರವಿವಾರ 75 ನಿಮಿಷಗಳ ಕಾಲ ನಡೆದ ಮುಕ್ತಾಯ ಸಮಾರಂಭದಲ್ಲಿ, ಏಷ್ಯಾ ಒಲಿಂಪಿಕ್ಸ್ ಕೌನ್ಸಿಲ್‌ನ ಹಂಗಾಮಿ ಮುಖ್ಯಸ್ಥ ರಣಧೀರ್ ಸಿಂಗ್ ಕೂಟದ ಮುಕ್ತಾಯವನ್ನು ಘೋಷಿಸಿದರು.
“19ನೇ ಏಷ್ಯಾಡ್ ಮುಕ್ತಾಯವಾಗಿದೆ ಎಂದು ಘೋಷಿಸುತ್ತಿದ್ದೇನೆ. ಏಷ್ಯಾ ಒಲಿಂಪಿಕ್ ಕೌನ್ಸಿಲ್‌ನ ಸಂಪ್ರದಾಯದಂತೆ ಏಷ್ಯಾದ ಯುವಕರು, ಜಪಾನಿನ ನಗೋಯ ಆಯಿcಯಲ್ಲಿ ನಡೆಯುವ 20ನೇ ಕೂಟದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡುತ್ತಿದ್ದೇನೆ. ಏಷ್ಯಾ ಮತ್ತು ವಿಶ್ವ ಹ್ಯಾಂಗ್‌ಝೂವನ್ನು ಪ್ರೀತಿಸುತ್ತದೆ. ನೀವು ಅತ್ಯದ್ಭುತ ಆತಿಥೇಯರಾದಿರಿ. ಇದನ್ನು ಒಸಿಎ ಎಂದಿಗೂ ಮರೆಯುವುದಿಲ್ಲ. ಚೀನ ಸರಕಾರಕ್ಕೆ, ಚೀಮ ಒಲಿಂಪಿಕ್ ಸಮಿತಿಗೆ, ಹ್ಯಾಂಗ್‌ಝೂ ಜನರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ನಿಮ್ಮೆಲ್ಲರಿಂದ ಈ ಕೂಟ ಹಿಂದೆಂದೂ ಕಾಣದ ಯಶಸ್ಸನ್ನು ನೋಡಿದೆ’ ಎಂದು ರಣಧೀರ್ ಸಿಂಗ್ ಹೇಳಿದರು. ಈ ವೇಳೆ ಚೀನದ ಪ್ರಧಾನಿ ಲೀ ಖೀಯಾಂಗ್, ಇತರ ಗಣ್ಯರು ಇದ್ದರು.
ಭಾರತೀಯ ತಂಡದ ಮೆರವಣಿಗೆಯಲ್ಲಿ 100 ಮಂದಿ ಪಾಲ್ಗೊಂಡಿದ್ದರು. ಉಳಿದವರು ಆಗಲೇ ಕೂಟವನ್ನು ತೊರೆದಿದ್ದರು. ಮುಕ್ತಾಯ ಸಮಾರಂಭದ ಮೆರವಣಿಗೆಯ ನೇತೃತ್ವವನ್ನು ಹಾಕಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ವಹಿಸಿದ್ದರು.
ತಂತ್ರಜ್ಞಾನ, ಕಲೆಗಳ ಸಮ್ಮಿಲನ
ಏಷ್ಯಾಡ್‌ನ ಮುಕ್ತಾಯ ಸಮಾರಂಭ ವರ್ಣರಂಜಿತವಾಗಿತ್ತು. ಚೀನ ತನ್ನ ತಾಂತ್ರಿಕ ಶಕ್ತಿಯನ್ನು ಇಲ್ಲಿ ತೆರೆದಿಟ್ಟಿತು. ಉದ್ಘಾಟನ ಸಮಾರಂಭದಲ್ಲೂ ಚೀನದ ತಾಂತ್ರಿಕ ಶಕ್ತಿಯೇ ಮೇಲುಗೈ ಸಾಧಿಸಿತ್ತು. ಮುಕ್ತಾಯ ಸಮಾರಂಭದಲ್ಲಿ “ಬಿಗ್ ಲೋಟಸ್ ಫುಟ್‌ಬಾಲ್ ಮೈದಾನ’ವನ್ನೇ ತೋಟದಂತೆ ಪರಿವರ್ತಿಸಲಾಗಿತ್ತು. ಇದರಲ್ಲಿ ಡಿಜಿಟಲ್ ತಂತ್ರಜ್ಞಾನ, ಕಲೆ, ಪರಿಸರವನ್ನು ಸುಂದರವಾಗಿ, ಸಂತುಲಿತವಾಗಿ ಸಂಯೋಜಿಸಲಾಗಿತ್ತು.
ತಂತ್ರಜ್ಞಾನದ ನೆರವಿನಿಂದ ಬಿಗ್ ಲೋಟಸ್ ಮೈದಾನವನ್ನು ಡಿಜಿಟಲ್ ಟಫ್ìನಂತೆ ತೋರಿಸಲಾಯಿತು. ಅದರ ಒಂದು ಪಕ್ಕದಲ್ಲಿ ಏಷ್ಯಾದ ಅಕ್ಷರಗಳನ್ನು ಬಿಡಿಬಿಡಿಯಾಗಿ ಬರೆಯಲಾಗಿತ್ತು. ಡಿಜಿಟಲ್ ಪರದೆಯಲ್ಲಿ ರಾಶಿರಾಶಿ ಹೂಗಳು ನಳನಳಿಸುತ್ತಿದ್ದವು.
ಟಫ್ìನಲ್ಲಿ ಒಂದು ಬಲೆಯನ್ನು ಸೃಷ್ಟಿಸಲಾಗಿತ್ತು. ಇದರಲ್ಲಿ ಹೊಳೆಯುವ 40,000 ಸಣ್ಣ ಬೆಳಕಿನ ಕೇಂದ್ರಗಳನ್ನು ಗುರುತಿಸಿ, ಅವನ್ನು ಬೆಸ ಸಂಖ್ಯೆಯಲ್ಲಿ ನೇಯಲಾಗಿತ್ತು. ಇವೆಲ್ಲ ಸೇರಿ ಇಡೀ ಅಂಕಣವನ್ನೇ ವರ್ಣಫಲಕವನ್ನಾಗಿ ಪರಿವರ್ತಿಸಿದಂತೆ ಕಂಡುಬಂತು. ಅಲ್ಲಿ ತಾರೆಗಳು ತುಂಬಿದ ಆಗಸ, ಹೂಗಳು, ನೀರಿನ ಅಲೆಗಳು ಕಾಣಿಸಿಕೊಳ್ಳುತ್ತಿದ್ದವು.
ವೇದಿಕೆಯಲ್ಲಿ ನೆನಪುಗಳ ನದಿಯೇ ಹರಿಯಿತು. ಸ್ವಯಂಸೇವಕರು ಹಾಕಿದ ಪರಿಶ್ರಮ, ಚಿಂತನಾಪೂರ್ಣ ಸೇವೆಗಳನ್ನು ನೆನಪಿಸಿಕೊಳ್ಳಲಾಯಿತು. ಅಂತಿಮವಾಗಿ ಎಲ್ಲ ಸ್ವಯಂಸೇವಕರನ್ನು ಆ್ಯತ್ಲೀಟ್‌ಗಳನ್ನು ಕೂಡಿಕೊಳ್ಳಲು ಕರೆಯಲಾಯಿತು. ಇದು ಸಮಾರಂಭದ ಅಂತಿಮ ಭಾಗವಾಗಿ ನಡೆಯಿತು.19ನೇ ಏಷ್ಯಾಡ್ ಮುಕ್ತಾಯವಾದ ಸಂಕೇತವಾಗಿ ವರ್ಚುವಲ್ ಮೂಲಕ ಜ್ಯೋತಿ ಹಿಡಿದುಕೊಂಡಿದ್ದ ದೈತ್ಯ ವ್ಯಕ್ತಿ, ಗೇಮ್ಸ್ ಜ್ಯೋತಿಯನ್ನು ನಂದಿಸಿದ. ಹಾಗೆಯೇ ಮನಮಿಡಿಯುವಂತೆ ನಿಧಾನಕ್ಕೆ ಕಣ್ಮರೆಯಾಗಿ ಹೋದ. ಇಲ್ಲಿ ನಂದಿದ ಬೆಳಕು 2026ರಲ್ಲಿ ಜಪಾನಿನ ನಗೋಯ ಆಯಿcಯಲ್ಲಿ ಹತ್ತಿಕೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.