ಏಶ್ಯನ್ ಕಬಡ್ಡಿ ಭಾರತ ತಂಡಗಳಿಗೆ ಹೊಸ ರೂಪ
Team Udayavani, Nov 23, 2017, 10:07 AM IST
ಬೆಂಗಳೂರು: ಪ್ರೊ ಕಬಡ್ಡಿ ಗುಂಗಿನಲ್ಲಿ ಮೈಮರೆತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ. ಇದೀಗ ಏಶ್ಯನ್ ಕಬಡ್ಡಿ ಸ್ಪರ್ಧೆಗೆ ಭಾರತ ತಂಡ ಸಜ್ಜಾಗಿದ್ದು ಭಾರತ ಪುರುಷ ಹಾಗೂ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. ನ. 23ರಿಂದ ನ. 27ರ ವರೆಗೆ ಇರಾನ್ ಗೊರ್ಗಾನ್‌ನ “ಇಮಾಮ್ ಖೊಮಿನಿ ನ್ಪೋರ್ಟ್ಸ್ ಹಾಲ್’ನಲ್ಲಿ ಕೂಟ ನಡೆಯಲಿದೆ. 11 ರಾಷ್ಟ್ರಗಳು ಕೂಟದಲ್ಲಿ ಭಾಗವಹಿಸಲಿದ್ದು ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ.
10ನೇ ಏಶ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ಗೆ ಭಾರತ ಪುರುಷರ ತಂಡವನ್ನು ಅಜಯ್ ಠಾಕೂರ್ ಮುನ್ನಡೆ ಸಲಿದ್ದಾರೆ. ಸುರ್ಜಿತ್ ಉಪನಾಯಕ ಆಗಿರು ತ್ತಾರೆ. ಮಹಿಳಾ ವಿಭಾಗದ 5ನೇ ಏಶ್ಯನ್ ಕಬಡ್ಡಿ ಕೂಟಕ್ಕೆ ಅಭಿಲಾಷೆ ಮಹಾತ್ರೆ ಭಾರತ ತಂಡದ ನಾಯಕಿದ್ದು, ಪ್ರಿಯಾಂಕಾ ಉಪನಾಯಕಿ ಯಾಗಿದ್ದಾರೆ.
ಭಾರತ, ಇರಾನ್, ದಕ್ಷಿಣ ಕೊರಿಯಾ, ಪಾಕಿಸ್ಥಾನ, ಥಾಯ್ಲೆಂಡ್, ಜಪಾನ್, ಶ್ರೀಲಂಕಾ, ಇರಾಕ್, ಬಾಂಗ್ಲಾದೇಶ, ತೈವಾನ್ ಹಾಗೂ ಕೀನ್ಯಾ ಸೇರಿದಂತೆ ಒಟ್ಟು 11 ತಂಡಗಳು ಕೂಟದಲ್ಲಿ ಪಾಲ್ಗೊಳ್ಳಲಿವೆ.
ಹಿರಿಯ ಆಟಗಾರರಿಗೆ ಕೊಕ್
ಈ ಪಂದ್ಯಾವಳಿಗೆಂದು ಪ್ರಕಟಿಸಲಾದ ತಂಡ ದಲ್ಲಿ ಹಿರಿಯ ಆಟಗಾರರನ್ನು ಕೈಬಿಡಲಾಗಿದೆ. ಒಟ್ಟು 36 ಮಂದಿ ಸಂಭಾವ್ಯ ಆಟಗಾರರು ಹರ್ಯಾಣದ ಸೋನೆಪತ್‌ನಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಪ್ರೊ ಕಬಡ್ಡಿಯ ಪ್ರಮುಖ ತಂಡಗಳಲ್ಲಿ ಒಂದಾದ ಯು ಮುಂಬಾ ತಂಡದ ನಾಯಕ ಹಾಗೂ ಭಾರತ ತಂಡದ ಮಾಜಿ ನಾಯಕ ಅನೂಪ್ ಕುಮಾರ್, ಜೈಪುರ ತಂಡದ ಪ್ರಮುಖ ಆಟಗಾರ ಜಸ್ವೀರ್ ಸಿಂಗ್, ಮಂಜಿತ್ ಚಿಲ್ಲರ್, ಕಾಶಿಲಿಂಗ್ ಅಡಕೆ, ಧರ್ಮರಾಜ್ ಚೆರಾÉಥನ್, ವಿಶಾಲ್ ಮಾನೆ, ಗಿರೀಶ್ ಮಾರುತಿ ಎರ್ನಾಕ್ ಸೇರಿದಂತೆ ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಪ್ರೊ ಕಬಡ್ಡಿಯಲ್ಲಿ ನೀಡಿದ ಪ್ರದರ್ಶನವೂ ಈ ಸಲ ಆಯ್ಕೆಯಲ್ಲಿ ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು “ಉದಯವಾಣಿ’ಗೆ ಭಾರತ ಕಬಡ್ಡಿ ಸಂಸ್ಥೆ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಮಹಿಳಾ ವಿಭಾಗದಲ್ಲೂ ಹಿರಿಯ ಆಟಗಾರ್ತಿಯರಾದ ಮಮತಾ ಪೂಜಾರಿ, ತೇಜಸ್ವಿನಿ ಬಾಯಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಮೂಲಗಳ ಪ್ರಕಾರ ತೇಜಸ್ವಿನಿಗೆ ಫಿಟ್‌ನೆಸ್ ಕೊರತೆ ಇದ್ದುದರಿಂದ ತಂಡಕ್ಕೆ ಸೇರಿಸಿ ಕೊಳ್ಳಲಾಗಿಲ್ಲ ಎನ್ನಲಾಗಿದೆ. ಈ ಸಲ ಬಹುತೇಕ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.
ಭಾರತ ಸೋಲಿಲ್ಲದ ಸರದಾರ
ಏಶ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಸೋಲಿಲ್ಲದ ಸರದಾರ. ಭಾರತ ಸತತ 9 ಬಾರಿ ಪುರುಷರ ವಿಭಾಗದಲ್ಲಿ ಏಶ್ಯನ್ ಚಾಂಪಿಯನ್ ಆಗಿ ಮೆರೆದಿದೆ. ಮಹಿಳಾ ವಿಭಾಗದಲ್ಲಿ ಸತತ 4 ಬಾರಿ ಚಾಂಪಿಯನ್ ಆಗಿದೆ. ಈ ಸಲವೂ ಭಾರತವೇ ಫೇವರಿಟ್ ಯಾದಿಯಲ್ಲಿದೆ.
ರಾಜ್ಯದ ಆಟಗಾರರಿಲ್ಲ !
ಏಶ್ಯನ್ ಕೂಟಕ್ಕೆ ತಂಡ ಪ್ರಕಟಗೊಂಡ ಬೆನ್ನಲ್ಲೇ ಕರ್ನಾಟಕಕ್ಕೆ ತೀವ್ರ ನಿರಾಸೆ ಎದುರಾಯಿತು. ಎರಡೂ ತಂಡಗಳಲ್ಲಿ ರಾಜ್ಯದ ಆಟಗಾರರಿಗೆ ಸ್ಥಾನ ಲಭಿಸದಿರುವುದೇ ಇದಕ್ಕೆ ಕಾರಣ. ಮಹಿಳಾ ವಿಭಾಗದಲ್ಲಿ ಆಯ್ಕೆ ರೇಸ್‌ನಲ್ಲಿ ಅನುಭವಿ ಆಟಗಾರ್ತಿ ರಾಜ್ಯದ ತೇಜಸ್ವಿನಿ ಬಾಯಿ, ಉಷಾರಾಣಿ, ನವ್ಯಾ ಇದ್ದರು. ಇವರು ಅಂತಿಮವಾಗಿ ಆಯ್ಕೆಯಾಗಲಿಲ್ಲ. ಪುರುಷರ ವಿಭಾಗದಲ್ಲಿ ಸಂತೋಷ್, ಹರೀಶ್ ನಾಯ್ಕ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೂ ಅಂತಿಮ ಪಟ್ಟಿಯಲ್ಲ ಇವರಿಗೆ ಸ್ಥಾನ ಸಿಗಲಿಲ್ಲ.
ಪುರುಷರ ತಂಡ
ಅಜಯ್ ಠಾಕೂರ್, ದೀಪಕ್ ನಿವಾಸ್ ಹೂಡಾ, ಮಹೇಂದ್ರ ಸಿಂಗ್, ಮಣಿಂದರ್ ಸಿಂಗ್, ಮೋಹಿತ್ ಚಿಲ್ಲರ್, ನಿತಿನ್ ತೋಮರ್, ಪ್ರದೀಪ್ ನರ್ವಾಲ್, ರಾಹುಲ್ ಚೌಧರಿ, ರೋಹಿತ್ ಕುಮಾರ್, ಸಚಿನ್, ಸಂದೀಪ್ ನರ್ವಲ್, ಸುರೇಂದ್ರ ನಾಡ, ಸುರ್ಜಿತ್, ವಿಶಾಲ್ ಭಾರಧ್ವಾಜ್.
ಕೋಚ್: ರಾಮ್‌ಬೀರ್ ಸಿಂಗ್
ವನಿತಾ ತಂಡ
ಅಭಿಲಾಷಾ ಮಹಾತ್ರೆ (ನಾಯಕಿ), ಕಾಂಚನ್ ಜ್ಯೋತಿ ದೀಕ್ಷಿತ್, ಕವಿತಾ, ಮನ್‌ಪ್ರೀತ್ ಕೌರ್, ಮರಿಯಾ ಮೊನಿಕಾ, ಪಾಯಲ್ ಚೌಧರಿ, ಪ್ರಿಯಾಂಕಾ, ಪ್ರಿಯಾಂಕಾ ನೇಗಿ, ರಣದೀಪ್ ಕೌರ್ ಖೇರ್, ರಿತು, ಸಾಕ್ಷಿ ಕುಮಾರಿ, ಸಯಾಲಿ ಉದಯ್ ಜಾಧವ್, ಶಮಾ ಪ್ರವೀಣ್, ಸೋನಿಯಾ.
ಕೋಚ್: ಸುಶ್ರೀ ಬನಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.