ಏಶ್ಯನ್ ರೋಯಿಂಗ್ ಚಾಂಪಿಯನ್‌ಶಿಪ್: ಅರವಿಂದ್‌ಗೆ ಚಿನ್ನದ ಪದಕ
Team Udayavani, Dec 13, 2021, 5:20 AM IST
ಬಾನ್ ಚಾಂಗ್ (ಥಾಯ್ಲೆಂಡ್): ಏಶ್ಯನ್ ರೋಯಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸೀನಿಯರ್ ಸ್ಪರ್ಧಾಳು ಅರವಿಂದ್ ಸಿಂಗ್ ಚಿನ್ನದ ಪದಕ ಜಯಿಸಿದ್ದಾರೆ.
ಪುರುಷರ ಸಿಂಗಲ್ ಲೈಟ್‌ವೇಟ್ ಸ್ಕಲ್ಸ್ ವಿಭಾಗದಲ್ಲಿ ಅವರು ಈ ಸಾಧನೆಗೈದರು. ಜತೆಗೆ ಭಾರತಕ್ಕೆ 3 ಬೆಳ್ಳಿ ಪದಕಗಳೂ ಒಲಿದಿವೆ. ಒಟ್ಟು 2 ಚಿನ್ನ, 4 ಬೆಳ್ಳಿ ಪದಕಗಳೊಂದಿಗೆ ಭಾರತ ಕೂಟವನ್ನು ಮುಗಿಸಿತು.
ಕೂಟದ ಅಂತಿಮ ದಿನವಾದ ರವಿವಾರದ ಸ್ಪರ್ಧೆಯಲ್ಲಿ ಅರವಿಂದ್ ಸಿಂಗ್ ಉಜ್ಬೆಕಿಸ್ಥಾನ, ಚೀನ, ವಿಯೆಟ್ನಾಂ, ಇಂಡೋನೇಶ್ಯ ಮತ್ತು ಥಾಯ್ಲೆಂಡ್ ಸ್ಪರ್ಧಿಗಳನ್ನು ಹಿಂದಿಕ್ಕಿದರು. 7:55.942 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು.
3 ಬೆಳ್ಳಿ ಪದಕ
ಬೆಳ್ಳಿ ಪದಕಗಳು ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್, ಕ್ವಾಡ್ರಾಪಲ್ ಸ್ಕಲ್ಸ್ ಮತ್ತು ಕಾಕ್ಸ್‌ಲೆಸ್ ಫೋರ್ ವಿಭಾಗಗಳಲ್ಲಿ ಒಲಿದು ಬಂದವು. ಡಬಲ್ ಸ್ಕಲ್ಸ್‌ನಲ್ಲಿ ಆಶಿಷ್ ಫುಗಟ್-ಸುಖ್‌ಜಿಂದರ್ ಸಿಂಗ್ (7:12.568 ಸೆಕೆಂಡ್); ಕ್ವಾಡ್ರಾಪಲ್ ಸ್ಕಲ್ಸ್‌ನಲ್ಲಿ ಬಿಟ್ಟು ಸಿಂಗ್, ಜಾಕರ್ ಖಾನ್, ಮನ್‌ಜಿàತ್ ಕುಮಾರ್ ಮತ್ತು ಸುಖಮೀತ್ ಸಿಂಗ್ (6:33.661 ಸೆಕೆಂಡ್); ಕಾಕ್ಸ್‌ಲೆಸ್‌ನಲ್ಲಿ ಜಸ್ವೀರ್ ಸಿಂಗ್, ಪುನೀತ್ ಕುಮಾರ್, ಗುರ್ಮೀತ್ ಸಿಂಗ್ ಮತ್ತು ಚರಣ್‌ಜೀತ್ ಸಿಂಗ್ (6:51.661 ಸೆಕೆಂಡ್) ದ್ವಿತೀಯ ಸ್ಥಾನಿಯಾದರು. ಕ್ವಾಡ್ರಾಪಲ್ ಸ್ಕಲ್ಸ್‌ನಲ್ಲಿ ಕೇವಲ 0.523 ಸೆಕೆಂಡ್‌ಗಳ ಅಂತರದಲ್ಲಿ ಚಿನ್ನ ಭಾರತದ ಕೈಜಾರಿತು.
ಇದನ್ನೂ ಓದಿ:ಮಧ್ಯಪ್ರದೇಶದ 5 ಕಡೆ ಡ್ರೋನ್ ತಂತ್ರಜ್ಞಾನ ಶಾಲೆ: ಜ್ಯೋತಿರಾಧಿತ್ಯ ಸಿಂಧಿಯಾ
ಕೂಟದಲ್ಲಿ ಉತ್ತಮ ಸಾಧನೆಗೈದ ರೋವರ್‌ಗಳನ್ನು ರೋಯಿಂಗ್ ಫೆಡರೇಶನ್ ಆಫ್ ಇಂಡಿಯಾದ ಮಹಾ ಕಾರ್ಯದರ್ಶಿ ಎಂ.ವಿ. ಶ್ರೀರಾಮ್ ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.