Asia TT: ಭಾರತ ಮಹಿಳಾ ಡಬಲ್ಸ್ ಜೋಡಿ ಸೆಮೀಸ್ಗೆ, ಪದಕ ಖಚಿತ
Team Udayavani, Oct 12, 2024, 9:28 PM IST
ಅಸ್ತಾನ (ಕಜಕಸ್ತಾನ): ಇಲ್ಲಿ ನಡೆಯುತ್ತಿರುವ ಏಷ್ಯಾ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನ ವನಿತೆಯರ ಡಬಲ್ಸ್ನಲ್ಲಿ ಭಾರತದ ಐಹಿಕಾ ಚಟರ್ಜಿ ಮತ್ತು ಸುತೀರ್ಥ ಚಟರ್ಜಿ ಸೆಮಿಫೈನಲ್ಗೇರಿದ್ದಾರೆ.
ಈ ಮೂಲಕ ಭಾರತ ಈ ವಿಭಾಗದಲ್ಲಿ ಚೊಚ್ಚಲ ಪದಕ ಗೆಲ್ಲುವುದು ಖಾತರಿಯಾಗಿದೆ. ಈ ಕೂಟದ ಮಹಿಳಾ ಡಬಲ್ಸ್ನಲ್ಲಿ ಭಾರತಕ್ಕೆ ಇದೇ ಮೊದಲ ಪದಕವಾಗಿದೆ. ಮುಖರ್ಜಿದ್ವಯರು ಕ್ವಾರ್ಟರ್ಫೈನಲ್ ಹೋರಾಟದಲ್ಲಿ ದಕ್ಷಿಣ ಕೊರಿಯಾದ ಕಿಮ್ ನಯಿಯಾಂಗ್ ಮತ್ತು ಲೀ ಎನ್ಹ್ಯುಯಿ ಅವರನ್ನು 10-12, 11-7, 11-9, 11-8 ಅಂತರದಿಂದ ಸೋಲಿಸಿದರು.
ಮಾನವ್, ಮಾನುಷ್ ಉತ್ತಮ ಆಟ: ಪುರುಷರ ಸಿಂಗಲ್ಸ್ನಲ್ಲಿ ಭಾರತದ ಮಾನವ್ ಥಕ್ಕರ್ ಮತ್ತು ಮಾನುಷ್ ಶಾ ಅವರು ಅಮೋಘ ಆಟದ ಪ್ರದರ್ಶನ ನೀಡಿ ಪ್ರೀಕ್ವಾರ್ಟರ್ಫೈನಲ್ ಹಂತಕ್ಕೇರಿದ್ದಾರೆ. 60ನೇ ರ್ಯಾಂಕಿನ ಮಾನವ್ ವಿಶ್ವ 14ನೇ ರ್ಯಾಂಕಿನ ದಕ್ಷಿಣ ಕೊರಿಯದ ಜಾಂಗ್ ವೂಜಿನ್ ಅವರನ್ನು ಸೋಲಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. ಇನ್ನೊಂದು ಪಂದ್ಯದಲ್ಲಿ ಮಾನುಷ್ ದಕ್ಷಿಣ ಕೊರಿಯದ ಆನ್ ಜಯಿಹ್ಯುನ್ ಅವರನ್ನು ಸೋಲಿಸಿ ಮುನ್ನಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್ಚಂದ್ ಖೇಲ್ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.